Viral Video: ತುಂಬಿದ ಸಭೆಯಲ್ಲಿ ವಸ್ತ್ರ ವಿನ್ಯಾಸಕ ಮನೀಷ್​ಗೆ ಅವಮಾನ ಮಾಡಿದ ಪ್ರಿಯಾಂಕಾ ಚೋಪ್ರಾ ವಿಡಿಯೋ ವೈರಲ್​..!

Viral Video: ಮುಂಬೈನಲ್ಲಿ ಪ್ರತಿವರ್ಷ ನಡೆಯುವ ಉಮಂಗ್​ ಕಾರ್ಯಕ್ರಮದಲ್ಲಿ ಭಾಯಾಗಲು ಪಿಗ್ಗಿ ಬಂದಿದ್ದರು. ಈ ಕಾರ್ಯಕ್ರಮವನ್ನು ಮುಂಬೈ ಪೊಲೀಸರು ಪ್ರತಿ ವರ್ಷ ಆಯೋಜಿಸುತ್ತಾರೆ. ಈ ಕಾರ್ಯಕ್ರಮಕ್ಕೆ ಬಂದಿದ್ದ ಪ್ರಿಯಾಂಕಾ ಸಖತ್​ ಸ್ಟೈಲಿಶ್​ ಆಗಿ ಕಾಣುತ್ತಿದ್ದರು. ಆದರೆ ಅಲ್ಲಿ ನಡೆದ ಘಟನೆಯೊಂದರ ವಿಡಿಯೋ ಸದ್ಯ ವೈರಲ್​ ಆಗುತ್ತಿದೆ. 

Anitha E | news18-kannada
Updated:January 23, 2020, 6:45 PM IST
Viral Video: ತುಂಬಿದ ಸಭೆಯಲ್ಲಿ ವಸ್ತ್ರ ವಿನ್ಯಾಸಕ ಮನೀಷ್​ಗೆ ಅವಮಾನ ಮಾಡಿದ ಪ್ರಿಯಾಂಕಾ ಚೋಪ್ರಾ ವಿಡಿಯೋ ವೈರಲ್​..!
ಮನೀಷ್​ ಮಲ್ಹೋತ್ರ ಹಾಗೂ ಪ್ರಿಯಾಂಕಾ ಚೋಪ್ರಾ
  • Share this:
ಬಾಲಿವುಡ್​ನಿಂದ ಹಾಲಿವುಡ್​ಗೆ ಹಾರಿದ ನಟಿ ಪ್ರಿಯಾಂಕಾ ಆಗಾಗ ಭಾರತಕ್ಕೆ ಬರುತ್ತಿರುತ್ತಾರೆ. ಕೆಲವೊಮ್ಮೆ ಸಿನಿಮಾಗೆ ಸಂಬಂಧಿಸಿದ ಕೆಲಸಗಳಿಗಾಗಿ, ಮತ್ತೆ ಕೆಲವೊಮ್ಮೆ ವೈಯಕ್ತಿಕ ಕಾರಣಕ್ಕೆ ತಾಯ್ನಾಡಿಗೆ ಭೇಟಿ ಕೊಡುತ್ತಿರುತ್ತಾರೆ. ಕೆಲ ದಿನಗಳ ಹಿಂದೆಯೂ ಅವರು ಕಾರ್ಯಕ್ರಮವೊಂದರ ಸಲುವಾಗಿ ಮುಂಬೈಗೆ ಬಂದಿದ್ದರು.

ಮುಂಬೈನಲ್ಲಿ ಪ್ರತಿವರ್ಷ ನಡೆಯುವ 'ಉಮಂಗ್​' ಕಾರ್ಯಕ್ರಮದಲ್ಲಿ ಭಾಯಾಗಲು ಪಿಗ್ಗಿ ಬಂದಿದ್ದರು. ಈ ಕಾರ್ಯಕ್ರಮವನ್ನು ಮುಂಬೈ ಪೊಲೀಸರು ಪ್ರತಿ ವರ್ಷ ಆಯೋಜಿಸುತ್ತಾರೆ. ಈ ಕಾರ್ಯಕ್ರಮಕ್ಕೆ ಬಂದಿದ್ದ ಪ್ರಿಯಾಂಕಾ ಸಖತ್​ ಸ್ಟೈಲಿಶ್​ ಆಗಿ ಕಾಣುತ್ತಿದ್ದರು. ಆದರೆ ಅಲ್ಲಿ ನಡೆದ ಘಟನೆಯೊಂದರ ವಿಡಿಯೋ ಸದ್ಯ ವೈರಲ್​ ಆಗುತ್ತಿದೆ.

priyanka chopra looks stunning in her new Instagram pic
ನೀಲಿ ಬಣ್ಣದ ಸೀರೆ ತೊಟ್ಟು ಕ್ಯಾಮೆರಾಗ ಪೋಸ್​ ಕೊಟ್ಟಿರುವ ಪ್ರಿಯಾಂಕಾ


'ಉಮಂಗ್​' ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟ ಪ್ರಿಯಾಂಕಾ ಮುಂದಿನ ಸಾಲಿನಲ್ಲಿ ಕುಳಿತಿದ್ದ ಎಲ್ಲ ಸೆಲೆಬ್ರಿಟಿಗಳನ್ನೂ ಮಾತನಾಡಿಸುತ್ತಾರೆ. ಆದರೆ ಕಣ್ಣೆದುರೇ ಇದ್ದ ಖ್ಯಾತ ವಸ್ತ್ರ ವಿನ್ಯಾಸಕ ಮನೀಷ್​ ಅವರನ್ನು ಮಾತ್ರ ನೋಡಿಯೂ ನೋಡದಂತೆ ಹೋಗಿ ಬಿಡುತ್ತಾರೆ.

 



ಮನೀಷ್​ ಮಲ್ಹೋತ್ರ ಬಾಲಿವುಡ್​ನ ಖ್ಯಾತ ವಸ್ತ್ರ ವಿನ್ಯಾಸಕ. ಬಿ-ಟೌನ್​ನ ಸ್ಟಾರ್​ಗಳಿಗೆ ವಸ್ತ್ರಗಳನ್ನು ವಿನ್ಯಾಸ ಮಾಡಿದ್ದಾರೆ. ಪ್ರಿಯಾಂಕಾ ಸಹ ಮನೀಷ್​ ವಿನ್ಯಾಸಿತ ಬಟ್ಟೆ ತೊಟ್ಟು ಸಿನಿಮಾಗಳು ಹಾಗೂ ಫ್ಯಾಷನ್​ ಶೋಗಳಲ್ಲಿ ಭಾಗವಹಿಸಿದವರೆ. ಆದರೆ ಈ ಸಲ ಪಿಗ್ಗಿ ಮನೀಷ್​ರನ್ನು ನೋಡಿಯೂ ನಿರ್ಲಕ್ಷಿಸಿದ್ದು ಏಕೆ ಅನ್ನೋದು ಮಾತ್ರ ಚರ್ಚೆಗೆ ಕಾರಣವಾಗಿದೆ. ಈ ವಿಡಿಯೋ ಟಿಕ್​ಟಾಕ್​ನಲ್ಲಿ ವೈರಲ್​ ಆಗುತ್ತಿದೆ.

Shruti Haasan: ರಾಜಕೀಯ ಪ್ರವೇಶ ಕುರಿತು ಆಸಕ್ತಿಕರ ಹೇಳಿಕೆ ಕೊಟ್ಟ ಶ್ರುತಿ ಹಾಸನ್​..!

First published:January 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ