HOME » NEWS » Entertainment » PRIYANKA CHOPRA HOLLYWOOD JOURNEY WAS NOT SO EASY ACTRESS RECEIVED TONS OF RACIST REMARKS SGT AE

Priyanka Chopra: ಜನಾಂಗೀಯ ನಿಂದನೆ, ಅತ್ಯಾಚಾರದ ಬೆದರಿಕೆ ಎದುರಿಸಿದ್ದ ಪ್ರಿಯಾಂಕಾ ಚೋಪ್ರಾ

ಇನ್ನು ಕಾರ್ಯಕ್ರಮದ ಪ್ರೋಮೋ ಜತೆಗೆ ಅವರ ಮೊದಲ ಮ್ಯೂಸಿಕ್ ವಿಡಿಯೋ ಇನ್ ಮೈ ಸಿಟಿ ವಿಡಿಯೋ ಸಹ ರಿಲೀಸ್ ಆಗಿತ್ತು. ಪ್ರೋಮೋ ರಿಲೀಸ್ ಮಾಡುವ ವೇಳೆಯಲ್ಲಿ ಪ್ರಿಯಾಂಕಾ ಎದುರಿಸಿದ್ದ ಮಾನಸಿಕ ನೋವು, ಜನಾಂಗೀಯ ನಿಂದನೆ ಹಾಗೂ ಅತ್ಯಾಚಾರದ ಬೆದರಿಕೆ ಎಲ್ಲವೂ ಇದೀಗ ಬಹಿರಂಗವಾಗಿವೆ. 

Anitha E | news18-kannada
Updated:February 24, 2021, 4:03 PM IST
Priyanka Chopra: ಜನಾಂಗೀಯ ನಿಂದನೆ, ಅತ್ಯಾಚಾರದ ಬೆದರಿಕೆ ಎದುರಿಸಿದ್ದ ಪ್ರಿಯಾಂಕಾ ಚೋಪ್ರಾ
ನಟಿ ಪ್ರಿಯಾಂಕಾ ಚೋಪ್ರಾ
  • Share this:
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಫೆಬ್ರವರಿ 9ರಂದು ಪ್ರಿಯಾಂಕಾ ಅವರ ಆತ್ಮಕತೆ 'ಅನ್​ಫಿನ್ಶಿಡ್​' ಬಿಡುಗಡೆ ಯಾಗಿದೆ. ಈ ಪುಸ್ತಕದಲ್ಲಿ ಪ್ರಸ್ತಾಪಿಸಿದ ಕೆಲವೊಂದು ವಿಚಾರಗಳು ಒಂದೊದಾಗಿಯೇ ಬೆಳಕಿಗೆ ಬರುತ್ತಿವೆ. ಬಾಲಿವುಡ್​ನಿಂದ ಹಾಲಿವುಡ್​ಗೆ ಹಾರಿ, ಅಲ್ಲಿ ಹೆಸರು ಮಾಡಬೇಕೆಂದಿದ್ದ ಪ್ರಿಯಾಂಕಾ, ಅಮೆರಿಕದಲ್ಲಿ ಎದುರಿಸಿದ ಜನಾಂಗೀಯ ನಿಂದನೆ, ವರ್ಣಭೇದದ ನೋವನ್ನು ತಮ್ಮ ಆತ್ಮಕತೆಯಲ್ಲಿ ತೆರೆದಿಟ್ಟಿದ್ದಾರೆ. ಅಮೆರಿಕದ ಪಾಂಪ್​ ಗಾಯಕ ನಿಕ್ ಜೋನಸ್ ಜೊತೆಗೆ ವಿವಾಹವಾದ ಮೇಲೆ ಪ್ರಿಯಾಂಕಾ ಚೋಪ್ರಾರ ಬೇಡಿಕೆ ಕಡಿಮೆ ಆಗುತ್ತದೆ ಅಂತ ಅನೇಕರು ಭಾವಿಸಿದ್ದರು. ಆದರೆ ಅದನ್ನು ಪ್ರಿಯಾಂಕಾ ಸುಳ್ಳಾಗಿಸಿದ್ದಾರೆ. ತನ್ನ ಆತ್ಮಕತೆ ಮೂಲಕ ಪ್ರಿಯಾಂಕಾ ಸುದ್ದಿಯಲ್ಲಿದ್ದಾರೆ. ಬಾಲಿವುಡ್​ನಲ್ಲಿ ಹಿಟ್ ಚಿತ್ರಗಳನ್ನು ನೀಡಿರುವ ಪ್ರಿಯಾಂಕಾ, ಹಾಲಿವುಡ್​ನಲ್ಲೂ ಸದ್ದು ಮಾಡೋಕೆ ಆಂದು ಪ್ರಯತ್ನ ಪಟ್ಟಿದ್ದರು. ಈ ಪ್ರಯತ್ನದಲ್ಲಿ ಪ್ರಿಯಾಂಕಾ ಅನುಭವಿಸಿದ ನೋವನ್ನು ಆತ್ಮಕತೆಯಲ್ಲಿ ಪ್ರಸ್ತಾಪಿಸಿದ್ದಾರೆ.

ಹಾಲಿವುಡ್​ನಲ್ಲಿ ಹೆಸರು ಮಾಡಬೇಕೆಂಬ ಹಂಬಲದಿಂದ ಪ್ರಿಯಾಂಕಾ ಅಮೆರಿಕದ ರಿಯಾಲಿಟಿ ಶೋ ಒಂದರ ಮೂಲಕ ಅಂತಾರಾಷ್ಟ್ರೀಯ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.  ಆ ಕಾರ್ಯಕ್ರಮದ ಪ್ರೋಮೋವನ್ನು ಅಮೆರಿಕದಲ್ಲಿ ಅದ್ದೂರಿಯಾಗಿಯೇ ರಿಲೀಸ್ ಮಾಡಲಾಗಿತ್ತು.



ಇನ್ನು ಕಾರ್ಯಕ್ರಮದ ಪ್ರೋಮೋ ಜತೆಗೆ ಅವರ ಮೊದಲ ಮ್ಯೂಸಿಕ್ ವಿಡಿಯೋ 'ಇನ್ ಮೈ ಸಿಟಿ' ವಿಡಿಯೋ ಸಹ ರಿಲೀಸ್ ಆಗಿತ್ತು. ಪ್ರೋಮೋ ರಿಲೀಸ್ ಮಾಡುವ ವೇಳೆಯಲ್ಲಿ ಪ್ರಿಯಾಂಕಾ ಎದುರಿಸಿದ್ದ ಮಾನಸಿಕ ನೋವು, ಜನಾಂಗೀಯ ನಿಂದನೆ ಹಾಗೂ ಅತ್ಯಾಚಾರದ ಬೆದರಿಕೆ ಎಲ್ಲವೂ ಇದೀಗ ಬಹಿರಂಗವಾಗಿವೆ.




'ಇನ್ ಮೈ ಸಿಟಿ' ಹಾಡಿನ ವಿಡಿಯೋ ವೇಳೆಯಲ್ಲಿ ಪ್ರಿಯಾಂಕಾ ಚೋಪ್ರಾ ನಿಜಕ್ಕೂ ರೋಮಾಂಚನಗೊಂಡಿದ್ದರು. ಇದು ತನ್ನ ಹಾಲಿವುಡ್ ಜರ್ನಿಗೆ ಉತ್ತಮ ಬ್ರೇಕ್ ನೀಡಬಹುದು ಎಂದುಕೊಂಡಿದ್ದರು ಪ್ರಿಯಾಂಕಾ. ಅಲ್ಲದೇ, ಇದಕ್ಕೆ ಅಮೆರಿಕ ಸಿನಿಪ್ರಿಯರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ನೋಡಲು ಅವರು ಉತ್ಸುಕರಾಗಿದ್ದರು. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು ಎಂದಿದ್ದ ಪ್ರಿಯಾಂಕಾ ಕನಸು ಈ ಪ್ರೋಮೋ ಹಾಗೂ ಹಾಡಿನ ವಿಡಿಯೋ ಬಿಡುಗಡೆ ಮಾಡಿದ ಮೇಲೆ ನುಚ್ಚುನೂರಾದಂತೆ ಅನುಭವವಾಗಿತ್ತಂತೆ.






ನೋಡಿದ ಅಮೆರಿಕದ ಜನರು ಪ್ರಿಯಾಂಕಾ ಚೋಪ್ರಾ ಅವರನ್ನು ಟೀಕೆ ಮಾಡೋಕೆ, ನಿಂದಿಸೋಕೆ ಆರಂಭಿಸಿದ್ದರು. ಅಲ್ಲದೇ 'ಕಂದು ಬಣ್ಣದ ಭಯೋತ್ಪಾದಕಿಯನ್ನೇಕೆ ಅಮೇರಿಕದಲ್ಲಿ ಪರಿಚಯಿಸುತ್ತೀದ್ದೀರಿ' ಎಂದು ಪ್ರಿಯಾಂಕಾ ಚೋಪ್ರಾ ಕುರಿತು ತೆಗಳುವ ಮಾತುಗಳನ್ನಾಡಿದ್ದರಂತೆ.

ಇದನ್ನೂ ಓದಿ: Ajay Devgn-Kajol: 21ನೇ ವಿವಾಹ ವಾರ್ಷಿಕೋತ್ಸದ ಸಂಭ್ರಮದಲ್ಲಿ ಅಜಯ್ ದೇವಗನ್​​-ಕಾಜೋಲ್​: ಅಪ್ಪನ ಇಷ್ಟಕ್ಕೆ ವಿರುದ್ಧವಾಗಿ ಮದುವೆಯಾದ ನಟಿ

ಇಷ್ಟೇ ಅಲ್ಲದೇ, ಪ್ರಿಯಾಂಕಾರಿಗೆ ಚಿತ್ರವಿಚಿತ್ರವಾಗಿ ಮಾನಸಿಕ ಆಘಾತ ನೀಡಿದ್ದರು. 'ಮಧ್ಯ ಏಷ್ಯಾಗೆ ವಾಪಾಸ್ ಹೋಗಿ ಬುರ್ಖಾ ಹಾಕಿಕೊ' ಎಂದು ಹೀಗಳೆದಿದ್ದರಂತೆ. ಜೊತೆಗೆ 'ನಿಮ್ಮ ದೇಶಕ್ಕೆ ವಾಪಾಸ್ ಹೋಗು, ಅಲ್ಲಿ ಸಾಮಾಜಿಕ ಅತ್ಯಾಚಾರಕ್ಕೆ ಗುರಿಯಾಗು' ಎಂದೆಲ್ಲ ಬೆದರಿಕೆಯ ಇಮೇಲ್ ಹಾಗೂ ಟ್ವೀಟ್​ಗಳನ್ನು ಮಾಡಿದ್ದರು ಎಂದು ಪ್ರಿಯಾಂಕಾ ಚೋಪ್ರಾ ತಮ್ಮ ಆತ್ಮಕತೆಯಲ್ಲಿ ಬರೆದುಕೊಂಡಿದ್ದಾರೆ. ಇವೆಲ್ಲವನ್ನೂ ಅಕ್ಷರ ರೂಪದಲ್ಲಿ ವ್ಯಕ್ತಪಡಿಸುವಾಗ ಪ್ರಿಯಾಂಕಾ ತೀವ್ರ ನೋವಿನಿಂದಲೇ ಎಲ್ಲ ಘಟನೆಗಳನ್ನು ಮೆಲಕು ಹಾಕಿದ್ದಾರಂತೆ.
Published by: Anitha E
First published: February 24, 2021, 4:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories