ಇನ್​ಸ್ಟಾಗ್ರಾಂನಲ್ಲಿ ಹೊಸ ದಾಖಲೆ ಬರೆದ ಪ್ರಿಯಾಂಕಾ: ಮೋದಿ- ಬಚ್ಚನ್‍ರನ್ನೂ ಹಿಂದಿಕ್ಕಿದ ಪಿಗ್ಗಿ!

news18
Updated:July 7, 2018, 4:43 PM IST
ಇನ್​ಸ್ಟಾಗ್ರಾಂನಲ್ಲಿ ಹೊಸ ದಾಖಲೆ ಬರೆದ ಪ್ರಿಯಾಂಕಾ: ಮೋದಿ- ಬಚ್ಚನ್‍ರನ್ನೂ ಹಿಂದಿಕ್ಕಿದ ಪಿಗ್ಗಿ!
news18
Updated: July 7, 2018, 4:43 PM IST
ನ್ಯೂಸ್​ 18 ಕನ್ನಡ 

ಈಗ ಏನಿದ್ದರೂ ಮೊಬೈಲ್ ಜಮಾನ. ಕೈಯಲ್ಲೆ ಕನಸು, ಕೈಯಲ್ಲೆ ಜಗತ್ತು ತೋರಿಸೊ ಮಯಾಗನ್ನಡಿಯ ಕಾಲ. ಹೆಸರಿಗೆ ತಕ್ಕಂತೆ ಎಲ್ಲರನ್ನ ತನ್ನ ಸ್ಕ್ರೀನಿನ ಮಾಯೆಯೊಳಗೆ ಕಣ್ಣುಕಟ್ಟಿಬಿಟ್ಟಿರೊ ಮೊಬೈಲು ಎಲ್ಲರನ್ನ ಐಲು ಮಾಡಿಬಿಟ್ಟಿದೆ. ನಮ್ಮನಿಮ್ಮಂಥವರಿಗೇ ಹೀಗಾದರೆ, ಇನ್ನು ಕ್ಯಾಮೆರಾದ ಬಣ್ಣದ ಲೋಕದಲ್ಲಿರೋರಿಗೆ ಈ ಮಾಯಾಗನ್ನಡಿಯ ಮಾಯೆ .

ಫೇಸ್​ಬುಕ್​, ಟ್ವಿಟರ್​ ಅಂತಿದ್ದ ಸೆಲಿಬ್ರಿಟಿಗಳು ಈಗ ಇನ್​ಸ್ಟಾಗ್ರಾಂ ತೆಕ್ಕೆಗೆ ಬಿದ್ದಿದ್ದಾರೆ. ಯಾರಾದರೂ ಫೇಸ್​ಬುಕ್​ನಲ್ಲಿಇನ್ನೂ ಸಕ್ರಿಯವಾಗಿದ್ದರೆ ಇಂಗ್ಲಿಷ್‍ನಲ್ಲಿ `ವಾಟ್​ ಯಾ ಸ್ಟಿಲ್ ಯೂಸಿಂಗ್ ದಟ್ ಓಲ್ಡ್ ಫೇಸ್​ಬುಕ್​' ಅಂತ ಎಲ್ಲರೆದುರು ಇಲ್ಲದೇ ಇರೊ ಮರ್ಯಾದೆ ಕಳೆದುಬಿಡುತ್ತಾರೆ. ಹಾಗಾಗಿ ಬಳಕೆ ಮಾಡೋಕೆ ಬರದೇ ಇರೋರೆಲ್ಲ ಇನ್​ಸ್ಟಾ ಡೆ ವಾಲಿದ್ದಾರೆ. ಹೀಗೆ ಪ್ರಿಯಾಂಕಾ ಚೋಪ್ರಾ ಅವರ ಇನ್​ಸ್ಟಾ ಖಾತೆ ಕಡೆ ವಾಲಿರೋರ ಸಂಖ್ಯೆ ಎರಡೂವರೆ ಕೋಟಿ ದಾಟಿದೆಯಂತೆ. ಹೌದು ಅವರ ಹಿಂಬಾಲಕರ ಸಂಖ್ಯೆ 25 ಮಿಲಿಯನ್​ ಆಗಿದೆ.

ಈ ನಾಟಿ ಹೀಗೆ ಎರಡೂವರೆ ಕೋಟಿ ಹಿಂಬಾಲಕರನ್ನು ಹೊಂದಿರೋದರಲ್ಲಿ ವಿಶೇಷತೆ ಏನಿದೆ ಅಂದ್ರಾ ? ಹಲೋ, ಬಾಸ್ ಇಲ್ಲಿ ಕೇಳಿ ಹೇಳುತ್ತೇವೆ. ಅಂಥ ಅಮಿತಾಭ್​ ಬಚ್ಚನ್‍ ಅವರಿಗೆ ಒಂದು ಕೋಟಿ ಹಿಂಬಾಲರಿದ್ದಾರೆ, ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್‍ಗೆ ಎರಡು ಕೋಟಿ 20 ಲಕ್ಷ ಹಿಂಬಾಲಕರಿದ್ದಾರೆ, ಅದು ಬಿಡಿ ಪ್ರಧಾನಿ ಮೋದಿ ಅವರನ್ನ ಒಂದು ಕೋಟಿ 30 ಲಕ್ಷದ ಜನ ಫಾಲೋ ಮಾಡುತ್ತಾರಷ್ಟೆ.

ಆದರೆ ಪ್ರಿಯಾಂಕಾ ಚೋಪ್ರಾಗೆ ಇವರೆಲ್ಲರಿಗಿಂತ ಜಾಸ್ತಿ ಹಿಂಬಾಲಕರು ಇದ್ದಾರೆ ಅಂದರೆ ಅದಿನ್ನೆಂಥ ಮ್ಯಾಜಿಕ್ ಮಾಡಿರಬೇಡ ಈ ಲಡ್ಕಿ. ಅದಕ್ಕೆ ಪ್ರಿಯಾಂಕಾ ಚೋಪ್ರಾರ ಈ ಹೊಸ ದಾಖಲೆ ನೋಡಿ ಎಲ್ಲರೂ `ಹೇ ಲಡ್ಕಿ ನೀ ಭಾಳ ಚಾಲಾಕಿ' ಅಂತ ಕರೀತಿದ್ದಾರೆ.

 
First published:July 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ