Bollywood: ಕರೀನಾ ಕಪೂರ್ ಗಣಪತಿ ಹಬ್ಬದ ಫೋಟೋಗೆ ಪ್ರಿಯಾಂಕಾ ಚೋಪ್ರಾ ಕಾಮೆಂಟ್

Priyanka Chopra: ಈಗ, ಕರೀನಾ ಸೈಫ್ ಮತ್ತು ತೈಮೂರ್ ಜೊತೆಗಿನ ಮುದ್ದಾದ ಕುಟುಂಬದ ಫೋಟೋಗಳನ್ನು ಹಂಚಿಕೊಂಡಾಗ ಆ ಫೋಟೋವನ್ನು ಬಹಳ ಮೆಚ್ಚಿಕೊಂಡ  ಪ್ರಿಯಾಂಕಾ ಕಾಮೆಂಟ್ ಹಾಕಿದ್ದಾರೆ

ಪ್ರಿಯಾಂಕ ಛೋಪ್ರಾ- ಕರೀನಾ ಕಪೂರ್

ಪ್ರಿಯಾಂಕ ಛೋಪ್ರಾ- ಕರೀನಾ ಕಪೂರ್

  • Share this:
ಗಣೇಶ ಚತುರ್ಥಿಯಂದು(Ganesha Chathurthi) ಇಡೀ ದೇಶವು ಗಣೇಶ ಮೂರ್ತಿಗಳನ್ನು ತಮ್ಮ ಮನೆಯಲ್ಲಿ ಸ್ಥಾಪಿಸಿ, ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ಬಾಲಿವುಡ್​ ಸೆಲೆಬ್ರಿಟಿಗಳು ಸಹ ತಮ್ಮ ಕುಟುಂಬದ ಜೊತೆ ಸಂತೋಷದಿಂದ ಹಬ್ಬವನ್ನು ಆಚರಣೆ ಮಾಡಿದ್ದು, ಸಾಮಾಜಿಕ ಜಾಲಾತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.  ಕರೀನಾ ಕಪೂರ್ ಖಾನ್(Kareena Kapoor) ಮತ್ತು ಸೈಫ್ ಅಲಿ ಖಾನ್(Saif Ali Khan) ಮನೆಯಲ್ಲಿ ಮಣ್ಣಿನಿಂದ ಮಗ ತೈಮೂರ್ ಅಲಿ ಖಾನ್ (Taimur Ali Khan)ಮಾಡಿದ ಗಣೇಶ ಮೂರ್ತಿಯನ್ನು  ಸ್ಥಾಪಿಸಿ ಪೂಜೆ ಸಲ್ಲಿಸಿದ್ದು ಈ ಫೋಟೋವನ್ನು  ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು, ಅದಕ್ಕೆ ಸಾಮಾಜಿಕ ಅಭಿಮಾನಿಗಳು ಪ್ರತಿಕ್ರಿಯೆಯನ್ನು ಸಹ ನೀಡಿದ್ದರು.  ಈಗ, ಪ್ರಿಯಾಂಕಾ ಚೋಪ್ರಾ ಜೋನಾಸ್ ತಮ್ಮದೇ ರೀತಿಯಲ್ಲಿ ಗಣೇಶ ಚತುರ್ಥಿ ಆಚರಣೆಯ ಕರೀನಾ, ಸೈಫ್ ಮತ್ತು ತೈಮೂರ್ ಅವರ ಮುದ್ದಾದ ಫೋಟೋಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.ಕರೀನಾ ಮತ್ತು ಪ್ರಿಯಾಂಕಾ ಆಗಾಗ  ಕಾಮೆಂಟ್​ಗಳ ಮೂಲಕ ಉತ್ತಮವಾದ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ.  ಈಗ, ಕರೀನಾ ಸೈಫ್ ಮತ್ತು ತೈಮೂರ್ ಜೊತೆಗಿನ ಮುದ್ದಾದ ಕುಟುಂಬದ ಫೋಟೋಗಳನ್ನು ಹಂಚಿಕೊಂಡಾಗ ಆ ಫೋಟೋವನ್ನು ಬಹಳ ಮೆಚ್ಚಿಕೊಂಡ  ಪ್ರಿಯಾಂಕಾ ಕಾಮೆಂಟ್ ಹಾಕಿದ್ದಾರೆ. ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ ಪ್ರಿಯಾಂಕಾ ಹೃದಯದ ಕಣ್ಣುಗಳ ಎಮೋಜಿಗಳನ್ನು ಹಾಕುವ ಮೂಲಕ ಪ್ರೀತಿ ವ್ಯಕ್ತಪಡಿಸಿದ್ದಾರೆ. ಇನ್ನು  ಶುಕ್ರವಾರ, ಪ್ರಿಯಾಂಕಾ ತನ್ನ ಸಾಮಾಜಿಕ ಮಾಧ್ಯಮದ ಮೂಲಕ ವಿಶ್ವದಾದ್ಯಂತ ಜನರಿಗೆ  ಗಣೇಶ ಚತುರ್ಥಿಯ ಶುಭಾಶಯಗಳನ್ನು ಕಳುಹಿಸಿದ್ದಾರೆ. ಮತ್ತು ಈಗ, ಕರೀನಾ ಮತ್ತು ತೈಮೂರ್ ಅವರ ಮುದ್ದಾದ ಕುಟುಂಬದ ಫೋಟೋಗೆ ಆಕೆಯ ಪ್ರತಿಕ್ರಿಯೆ ನೆಟ್ಟಿಗರ ಗಮನ ಸೆಳೆದಿದೆ. ಪ್ರಿಯಾಂಕಾ ಮಾತ್ರವಲ್ಲ, ಸಬಾ ಅಲಿ ಖಾನ್ ಪಟೌಡಿ ಮತ್ತು ಅಮೃತಾ ಅರೋರಾ ಕೂಡ ಕುಟುಂಬದ ಫೋಟೋಗಳಿಗೆ ಪ್ರತಿಕ್ರಿಯಿಸಿದ್ದಾರೆ.ಅಲ್ಲದೆ ಪ್ರಿಯಾಂಕಾ ತನ್ನ ಸಾಮಾಜಿಕ  ಮಾಧ್ಯಮದಲ್ಲಿ ಅಭಿಮಾನಿಗಳಿಗಾಗಿ ಮೂಲಕ ವಿಶ್ ಮಾಡಿದ್ದರು. ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು. ಗಣಪತಿ ಬಪ್ಪ ಮೋರಯಾ  !!!" ಎಂದು  ಬರೆದು ಶುಭ ಕೋರಿದ್ದರು.

ಪ್ರಸ್ತುತ, ಪ್ರಿಯಾಂಕ ರಿಚರ್ಡ್ ಮ್ಯಾಡೆನ್ ಜೊತೆ ಯುಕೆ ನಲ್ಲಿ ತನ್ನ ಕಾರ್ಯಕ್ರಮದ ಸಿಟಾಡೆಲ್ ಚಿತ್ರೀಕರಣದಲ್ಲಿದ್ದಾರೆ. ಕೀನು ರೀವ್ಸ್  ಚಿತ್ರದಲ್ಲಿ  ನಟಿಸಲಿದ್ದಾರೆ. ಪ್ರಿಯಾಂಕ ಜೊತೆಯಲ್ಲಿ, ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿ ದ್ದಾರೆ. ಚಿತ್ರಕ್ಕೆ ಜೀ ಲೆ ಜರಾ ಎಂದು ಹೆಸರಿಡಲಾಗಿದ್ದು, ಫರ್ಹಾನ್ ಅಖ್ತರ್ ನಿರ್ದೇಶನ ಮಾಡಲಿದ್ದಾರೆ.

ಕಳೆದ ಸುಮಾರು ದಿನಗಳಿಂದ  ಕತ್ರಿನಾ ಎರಡನೇ ಮಗನ ಹೆಸರಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲಾತಾಣದಲ್ಲಿ ಸುದ್ದಿಯಲ್ಲಿದ್ದರು. ಮೊದಲ ಮಗನ ಮತ್ತು ಎರಡನೇ ಮಗನ ಹೆಸರನ್ನು ಬಹಳಷ್ಟು ಟ್ರೋಲ್ ಮಾಡಲಾಗಿತ್ತು. ಈ ಬಗ್ಗೆ ಕರೀನಾ ಅಥವಾ ಸೈಫ್ ಮಾತನಾಡಿರಲಿಲ್ಲ. ಆದರೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಕರೀನಾ, ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.

ನಿಜವಾಗಿಯೂ ಹೇಳಬೇಕು ಎಂದರೆ ಮಕ್ಕಳಿಗೆ ಏನು ತಿಳಿಯುವುದಿಲ್ಲ. ಆ ಹೆಸರು ನನಗೆ ಮತ್ತು ಸೈಫ್​ಗೆ ಇಷ್ಟವಾಗಿದೆ ಆದೂ ಮಾತ್ರ ಮುಖ್ಯವಾಗುತ್ತದೆ. ಅಲ್ಲದೇ ಮಕ್ಕಳನ್ನು ಟ್ರೊಲ್ ಮಾಡಲು ಅವರಿಗೆ ಮನಸ್ಸು ಹೇಗೆ ಬರುತ್ತದೆ. ಕೆಲವೊಮ್ಮೆ ಟ್ರೋಲ್​ಗಳನ್ನು ನೋಡಿದಾಗ ನಗು ಬರುತ್ತದೆ. ಮುಗ್ಧ ಮಕ್ಕಳನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ. ಮಕ್ಕಳನ್ನು ಏಕೆ ಟ್ರೋಲ್ ಮಾಡುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ. ನನಗೆ ಅದರ ಬಗ್ಗೆ ಭಯವಾಗುತ್ತದೆ. ಇವುಗಳಿಂದ ಹೇಗೆ ಹೊರಬರುವುದು ಎಂಬುದನ್ನ ಮಾತ್ರ ಗಮನಿಸಿಬೇಕು. ಏಕೆಂದರೆ ಅದನ್ನೆ  ಇಟ್ಟುಕೊಂಡು ಜೀವನ ನಡೆಸಲು ಸಾಧ್ಯವಿಲ್ಲ. ಹೆಚ್ಚು ಟ್ರೋಲ್​ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಎಂದು ಕರೀನಾ ಹೇಳಿಕೊಂಡಿದ್ದಾರೆ.
Published by:Sandhya M
First published: