Priyanka Chopra: ನಿಕ್​ ಜೋನಸ್​ ಹೆಂಡ್ತಿ ಎಂದಿದ್ದಕ್ಕೆ ಸಿಟ್ಟಾದ ದೇಸಿ ಗರ್ಲ್​ ಪ್ರಿಯಾಂಕ!

ಖಾಸಗಿ ವಾಹಿನಿಯೊಂದು ನಿಕ್​ ಜೋನಸ್​ ಪತ್ನಿ ಎಂದಿದ್ದಕ್ಕೆ ಪ್ರಿಯಾಂಕ ಚೋಪ್ರಾ ಸಿಟ್ಟಾಗಿದ್ದಾರೆ. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ನಿಕ್ ಜೋನಾಸ್ ಪತ್ನಿ ಎಂದು ಬರೆದ ನಂತರ ಸುದ್ದಿವಾಹಿನಿಯೊಂದರ ವಿರುದ್ಧ ನಟಿ ವಾಗ್ದಾಳಿ ನಡೆಸಿದ್ದಾರೆ

ಪ್ರಿಯಾಂಕ ಚೋಪ್ರಾ, ನಿಕ್​ ಜೋನಸ್​

ಪ್ರಿಯಾಂಕ ಚೋಪ್ರಾ, ನಿಕ್​ ಜೋನಸ್​

  • Share this:


ಸಮಂತಾ (Samantha) ಹಾಗೂ ನಾಗಚೈತನ್ಯ (Naga Chaitanya) ನಡುವೆ ವಿಚ್ಚೇದನ (Divorce) ಆದ ಬಳಿಕ ಮತ್ತೊಂದು ಜೋಡಿ ಡಿವೋರ್ಸ್​ ಪಡೆಯುತ್ತಾರೆ ಎಂಬ ಸುದ್ದಿ ಜೋರಾಗಿತ್ತು. ಪ್ರಿಯಾಂಕ ಚೋಪ್ರಾ (Priyanka Chopra) ಹಾಗೂ ನಿಕ್​ ಜೋನಸ್​ (Nick Jonas) ನಡುವೆ ಎಲ್ಲವೂ ಸರಿಯಿಲ್ಲ. ಈ ಜೋಡಿ ದೂರವಾಗೇ ಬಿಟ್ಟರು ಎಂಬ ಗಾಳಿ ಸುದ್ದಿ ಹಬ್ಬಿತ್ತು. ಇದಾದ ಬಳಿಕ ಪ್ರಿಯಾಂಕ ಹಾಗೂ ನಿಕ್​ ಜೋನಸ್​ ಅವರ ಬಗ್ಗೆ ಸಣ್ಣ ಸಣ್ಣ ಸುದ್ದಿಗಳು ಸಹ ದೊಡ್ಡದಾಗಿ ಕಾಣುತ್ತಿತ್ತು. ಇದೀಗ ಪ್ರಿಯಾಂಕ ಚೋಪ್ರಾ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಮಾಡಿರುವುದನ್ನು ಕಂಡರೇ ನಿಮಗೂ ಶಾಕ್ (Shock) ಆಗುತ್ತೆ. ಹೌದು, ಖಾಸಗಿ ವಾಹಿನಿಯೊಂದು ನಿಕ್​ ಜೋನಸ್​ ಪತ್ನಿ ಎಂದಿದ್ದಕ್ಕೆ ಪ್ರಿಯಾಂಕ ಚೋಪ್ರಾ (Wife Of Nick Jonas) ಸಿಟ್ಟಾಗಿದ್ದಾರೆ. ಬಾಲಿವುಡ್ (Bollywood) ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ನಿಕ್ ಜೋನಾಸ್ ಪತ್ನಿ ಎಂದು ಬರೆದ ನಂತರ ಸುದ್ದಿವಾಹಿನಿಯೊಂದರ ವಿರುದ್ಧ ನಟಿ ವಾಗ್ದಾಳಿ ನಡೆಸಿದ್ದಾರೆ.  Instagram ಸ್ಟೋರೀಯಲ್ಲಿ ಕೆಲವು ಸುದ್ದಿ ತುಣುಕುಗಳ ಸ್ಕ್ರೀನ್‌ಶಾಟ್‌ಗಳನ್ನು ಪ್ರಿಯಾಂಕ ಹಂಚಿಕೊಂಡಿದ್ದಾರೆ ಪ್ರಿಯಾಂಕ. ಪತಿ ಹೆಸರಿನಿಂದ ಮಹಿಳೆಯನ್ನು ಗುರುತಿಸುವ ಪದ್ಧತೆ ಬಗ್ಗೆ ಅವರು ಮಾತನಾಡಿದ್ದಾರೆ. ಹೀಗೆ ಕರೆಯುವುದನ್ನು ನಿಲ್ಲಿಸಿ ಎಂದು ಗರಂ ಆಗಿದ್ದಾರೆ. 

ಸ್ಕ್ರೀನ್​ಶಾಟ್​ ಹಂಚಿಕೊಂಡ ಪ್ರಿಯಾಕ ಚೋಪ್ರಾ!

ಪ್ರಿಯಾಂಕಾ ಚೋಪ್ರಾ ಅವರು ಹಂಚಿಕೊಂಡಿರುವ ಸ್ಕ್ರೀನ್‌ಶಾಟ್‌ನಲ್ಲಿ ನಿಕ್ ಜೋನಾಸ್ ಅವರ ಪತ್ನಿ ಎಂದು ಬರೆಯಲಾಗಿದೆ. ಅದರಲ್ಲಿ ನಟಿಯ ದಿ ಮ್ಯಾಟ್ರಿಕ್ಸ್ ರಿಸರ್ರೆಕ್ಷನ್ಸ್ ಸಹ-ನಟ ಕೀನು ರೀವ್ಸ್ ಬಗ್ಗೆ ಗುಡ್ ಮಾರ್ನಿಂಗ್ ಅಮೇರಿಕಾದಲ್ಲಿ ಮಾತನಾಡುವುದನ್ನು ಉಲ್ಲೇಖಿಸಿದೆ. ಇದನ್ನು ಹೈಲೈಟ್ ಮಾಡಿದ ನಟಿ ಪ್ರಿಯಾಂಕಾ, ನಾನು ಸಾರ್ವಕಾಲಿಕ ಅಪ್ರತಿಮ ಚಲನಚಿತ್ರ ಫ್ರಾಂಚೈಸಿಗಳಲ್ಲಿ ಒಂದನ್ನು ಪ್ರಚಾರ ಮಾಡುತ್ತಿದ್ದೇನೆ. ನನ್ನನ್ನು ಇನ್ನೂ ಹೆಂಡತಿ.. ಎಂದು ಉಲ್ಲೇಖಿಸುತ್ತಿದ್ದಾರೆ ಎಂದು ಬರೆದಿದ್ದಾರೆ. ಇದನ್ನು ಕಂಡ ಫ್ಯಾನ್ಸ್ ಮತ್ತೆ ಇವರಿಬ್ಬರ ನಡುವೆ ಏನೋ ಸಮಸ್ಯೆ ಆಗಿದೆ. ಮತ್ತೆ ಇವರು ದೂರವಾಗುತ್ತಾರಾ ಎಂಬ ಮಾತುಗಳು ಕೇಳಿಬಂದಿವೆ.



ಇದನ್ನು ಓದಿ: ಮಕಾಡೆ ಮಲಗಿದ ಅಲ್ಲು ಸಿನಿಮಾ: `ಪುಷ್ಪ’.. ಫೈರ್​ ಅಲ್ಲ.. ಟಾರ್ಚರ್ ಎಂದ ಟ್ರೋಲಿಗರು!

ಪೋಸ್ಟ್​ನಲ್ಲಿ ನಿಕ್​ ಜೋನಾಸ್ ಟ್ಯಾಗ್​ ಮಾಡಿದ ಪಿಗ್ಗಿ!

ದಯವಿಟ್ಟು ಇನ್ನೂ ಮಹಿಳೆಯರಿಗೆ ಹೀಗ್ಯಾಕೆ ಸಂಭವಿಸುತ್ತದೆ ಎಂಬುದನ್ನು ವಿವರಿಸಿ? ನಾನು ನನ್ನ IMDb ಲಿಂಕ್ ಅನ್ನು ನನ್ನ ಬಯೋಗೆ ಸೇರಿಸಬೇಕೇ? ಎಂದು ಬರೆದು ಪ್ರಿಯಾಂಕಾ ತಮ್ಮ ಪೋಸ್ಟ್‌ನಲ್ಲಿ ಪತಿ, ಗಾಯಕ ನಿಕ್ ಜೋನಾಸ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಪ್ರಿಯಾಂಕಾ ಈ ವಾರ ಪೂರ್ತಿ ಚಿತ್ರದ ಪ್ರಚಾರ ನಡೆಸುತ್ತಿದ್ದಾರೆ. ಅದರ ಬಗ್ಗೆ ಹಲವಾರು ವೇದಿಕೆಗಳಲ್ಲಿ ನಿಕ್ ಮಾತನಾಡಿದ್ದಾರೆ. ಇತ್ತೀಚೆಗೆ ಜಡಾ ಪಿಂಕೆಟ್ ಸ್ಮಿತ್ ಅವರ ರೆಡ್ ಟೇಬಲ್ ಟಾಕ್ ನ 100 ನೇ ಸಂಚಿಕೆಯಲ್ಲಿ, ನಿಕ್ ಫಿಲ್ಮ್ ಫ್ರಾಂಚೈಸಿಯ ಅಭಿಮಾನಿ ಎಂದು ಪ್ರಿಯಾಂಕಾ ಬಹಿರಂಗಪಡಿಸಿದ್ದರು.

ಇದನ್ನು ಓದಿ : ಅಮ್ಮಮ್ಮಾ... ಇವ್ನ ನೋಡೋಕೆ ಜೈಲಿಗೇ ಬರ್ತಿದ್ರಂತೆ 12 ಖ್ಯಾತ ನಟಿಯರು: ಒಳಗೆ ಏನೇನ್​ ಆಗ್ತಿತ್ತೋ..!

ಅಭಿಮಾನಿಗಳಲ್ಲಿ ಆತಂಕ

ಆದರೆ ಈಗ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಹೆಸರಿನ ಜೊತೆಯಿದ್ದ ಪತಿಯ ಹೆಸರನ್ನು ತೆಗೆದುಹಾಕಿದ್ದರು. ((Nick Jonas' name on their Instagram account are rampant) ಇದರೊಂದಿಗೆ ಪಿಗ್ಗಿ ನಿಕ್ ದಾಂಪತ್ಯದಲ್ಲಿ ಬಿರುಕು (break up) ಮೂಡಿರಬಹುದೇ, ಈ ಜೋಡಿಯೂ ಕೂಡ ವಿಚ್ಚೇದನ ಪಡೆಯಲಿದೆಯೇ ಎಂದು ಗುಸುಗುಸು ಶುರುವಾಗಿತ್ತು. ಭಾರತದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದ ಪ್ರಿಯಾಂಕಾ ಚೋಪ್ರಾ ಇನ್‍ಸ್ಟಾಗ್ರಾಂನಲ್ಲಿ(Instagram) ತಮ್ಮ ಹೆಸರಿನ ಜೊತೆಗೆ ಜೋನಾಸ್ ಎಂದು ಸೇರಿಸಿಕೊಂಡಿದ್ದರು. ಜೋನಾಸ್ ಹೆಸರನ್ನು ತೆಗೆದುಹಾಕಿರುವುದು ತೀವ್ರ ಕುತೂಹಲ ಮೂಡಿಸಿತ್ತು.

Published by:Vasudeva M
First published: