Priyanka Chopra: ಅವರನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತುಬಿಟ್ಟಳು ಪ್ರಿಯಾಂಕಾ ಛೋಪ್ರಾ

ಯುನಿಸೆಫ್ ರಾಯಭಾರಿ, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ರಷ್ಯಾದ ದಾಳಿಯಿಂದ ನಲುಗಿ ಹೋಗಿರುವ ನಿರಾಶ್ರಿತ ಮಹಿಳೆಯರನ್ನು ಮತ್ತು ಮಕ್ಕಳನ್ನು ಭೇಟಿ ಮಾಡಿದ್ದಾರೆ. ಪೋಲೆಂಡ್‌ ನಲ್ಲಿ ಯುನಿಸೆಫ್ ಕೆಲವು ಸುರಕ್ಷತಾ ಕೇಂದ್ರಗಳನ್ನು ಸ್ಥಾಪಿಸಿ ಉಕ್ರೇನ್ ನಿಂದ ಗಡಿದಾಟಿ ಬಂದ ನಿರಾಶ್ರಿತರಿಗೆ ಸುರಕ್ಷಿತ ಸ್ಥಳ ಕಲ್ಪಿಸಿ ಕೊಟ್ಟಿದೆ. ಈ ಕೇಂದ್ರಗಳಿಗೆ ಭೇಟಿ ನೀಡಿದ ಪ್ರಿಯಾಂಕಾ ಚೋಪ್ರಾ ಮಹಿಳೆಯರು ಮತ್ತು ಮಕ್ಕಳ ಜೊತೆ ಸಮಯ ಕಳೆದಿದ್ದಾರೆ. ಅಷ್ಟೇ ಅಲ್ಲದೇ ಮಕ್ಕಳು ಮತ್ತು ಮಹಿಳೆಯರ ಬಾಯಲ್ಲಿ ಯುದ್ಧದ ಅನುಭವಗಳನ್ನು ಕೇಳಿದ ಪ್ರಿಯಾಂಕ ಕಣ್ಣೀರು ಸಹ ಇಟ್ಟಿದ್ದಾರೆ.

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ

  • Share this:
ಯುನಿಸೆಫ್ ರಾಯಭಾರಿ, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ರಷ್ಯಾದ ದಾಳಿಯಿಂದ ನಲುಗಿ ಹೋಗಿರುವ ನಿರಾಶ್ರಿತ ಮಹಿಳೆಯರನ್ನು (Women's) ಮತ್ತು ಮಕ್ಕಳನ್ನು (Children) ಭೇಟಿ ಮಾಡಿದ್ದಾರೆ. ಪೋಲೆಂಡ್‌ ನಲ್ಲಿ ಯುನಿಸೆಫ್ ಕೆಲವು ಸುರಕ್ಷತಾ ಕೇಂದ್ರಗಳನ್ನು ಸ್ಥಾಪಿಸಿ ಉಕ್ರೇನ್ ನಿಂದ (Ukraine) ಗಡಿದಾಟಿ ಬಂದ ನಿರಾಶ್ರಿತರಿಗೆ ಸುರಕ್ಷಿತ ಸ್ಥಳ ಕಲ್ಪಿಸಿ ಕೊಟ್ಟಿದೆ. ಈ ಕೇಂದ್ರಗಳಿಗೆ ಭೇಟಿ ನೀಡಿದ ಪ್ರಿಯಾಂಕಾ ಚೋಪ್ರಾ ಮಹಿಳೆಯರು ಮತ್ತು ಮಕ್ಕಳ ಜೊತೆ ಸಮಯ ಕಳೆದಿದ್ದಾರೆ. ಅಷ್ಟೇ ಅಲ್ಲದೇ ಮಕ್ಕಳು ಮತ್ತು ಮಹಿಳೆಯರ ಬಾಯಲ್ಲಿ ಯುದ್ಧದ (War) ಅನುಭವಗಳನ್ನು ಕೇಳಿದ ಪ್ರಿಯಾಂಕ ಕಣ್ಣೀರು ಸಹ ಇಟ್ಟಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಮಕ್ಕಳ ಜೊತೆಗಿನ ವಿಡಿಯೋ ಹಂಚಿಕೊಂಡ ಪ್ರಿಯಾಂಕಾ
ಪ್ರಿಯಾಂಕಾ ಚೋಪ್ರಾ, ರಷ್ಯಾದ ಆಕ್ರಮಣದ ಮಧ್ಯೆ ಉಕ್ರೇನ್‌ನಿಂದ ಪಲಾಯನ ಮಾಡಲು ಒತ್ತಾಯಿಸಲ್ಪಟ್ಟ ಉಕ್ರೇನಿಯನ್ ನಿರಾಶ್ರಿತರನ್ನು ಭೇಟಿಯಾದ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ, ವಿಶ್ವದ ಅತಿದೊಡ್ಡ ಮಾನವ ಸ್ಥಳಾಂತರದ ಬಿಕ್ಕಟ್ಟಿನ ವಿವರಗಳನ್ನು ಸಹ ಇಲ್ಲಿ ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ ಉಕ್ರೇನಿಯನ್ ಮಕ್ಕಳೊಂದಿಗೆ ತಾವು ಮಗುವಾಗಿ ಆಟವಾಡಿ, ಡ್ರಾಯಿಂಗ್ ಮತ್ತು ಪೇಂಟಿಂಗ್‌ನಂತಹ ಮೋಜಿನ ಚಟುವಟಿಕೆಗಳನ್ನು ಮಾಡಿದರು. ಕೆಲವು ಮಕ್ಕಳು ಪ್ರಿಯಾಂಕ ಅವರಿಗೆ ತಾವೇ ಕೈಯಿಂದ ಮಾಡಿದ ಗೊಂಬೆಗಳನ್ನು ಸಹ ನೀಡಿದರು ಮತ್ತು ಗೊಂಬೆಗಳಿಗೆ ನಿಮ್ಮ ಹೆಸರನ್ನೇ ಇಡಲಾಗಿದೆ ಎಂದು ಮಕ್ಕಳು ಮುದ್ದಾಗಿ ಹೇಳಿದ್ದಾರೆ.

ಕಣ್ಣೀರಿಟ್ಟ ಪ್ರಿಯಾಂಕಾ ಚೋಪ್ರಾ
ಯುದ್ಧದ ಅನುಭವಗಳ ಬಗ್ಗೆ ಮಹಿಳೆಯರೊಂದಿಗೆ ಪ್ರಿಯಾಂಕ ಮಾತನಾಡಿದರು ಮತ್ತು ಪೋಲೆಂಡ್‌ನಲ್ಲಿ ಅವರೊಂದಿಗೆ ಸೇರಲು ಸಾಧ್ಯವಾಗದ ತನ್ನ ಕುಟುಂಬದ ಸದಸ್ಯರ ಬಗ್ಗೆ ಮಹಿಳೆಯೊಬ್ಬರು ಮಾತನಾಡುವುದನ್ನು ಕೇಳುತ್ತಾ ಪ್ರಿಯಾಂಕ ಕೂಡ ಕಣ್ಣೀರಿಡುವುದರ ಜೊತೆಗೆ ಭಾವುಕರಾದರು.


View this post on Instagram


A post shared by Priyanka (@priyankachopra)
ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡ ಅವರು, ಈ ರೀತಿಯಾಗಿ ಪೋಸ್ಟ್ ಕೂಡ ಮಾಡಿದ್ದಾರೆ. “ಯುದ್ಧದ ಅದೃಶ್ಯ ಗಾಯಗಳನ್ನು ನಾವು ಸಾಮಾನ್ಯವಾಗಿ ಸುದ್ದಿಗಳಲ್ಲಿ ನೋಡುವುದಿಲ್ಲ. ಆದರೆ ವಾರ್ಸಾದಲ್ಲಿ ನನ್ನ @unicef ಮಿಷನ್‌ನ ಮೊದಲನೇ ದಿನವೇ ನನಗೆ ಸ್ಪಷ್ಟವಾಗಿ ವಿಚಾರಗಳು ಗೋಚರಿಸಿದವು. ಉಕ್ರೇನ್‌ನಿಂದ 3ನೇ 2 ಭಾಗದಷಷ್ಟು ಮಕ್ಕಳನ್ನು ಸ್ಥಳಾಂತರಿಸಲಾಗಿದೆ. ಗಡಿ ದಾಟಿ ಬಂದ 90% ಜನರು ಮಹಿಳೆಯರು ಮತ್ತು ಮಕ್ಕಳು, 70% ರಷ್ಟು ಪಲಾಯನ ಮಾಡಿದವರು. ಈ ಬೃಹತ್ ಸಂಖ್ಯೆಯು ಯುದ್ಧದ ವಿನಾಶಕಾರಿ ವಾಸ್ತವವಾಗಿದೆ. ಪೋಲೆಂಡ್‌ ನಲ್ಲಿ ಉಕ್ರೇನ್ ನಿಂದ ಗಡಿ ದಾಟಿ ಬಂದವರಿಗೆ ದೊಡ್ಡ ಸರ್ಕಾರಿ ಬೆಂಬಲಿತ ಕೇಂದ್ರಗಳನ್ನು ಇಲ್ಲಿ ಸ್ಥಾಪಿಸಲಾಗಿದ್ದು, ಅವರಿಗೆ ಆಶ್ರಯ ನೀಡುತ್ತಿದ್ದಾರೆ” ಎಂದು ಪ್ರಿಯಾಂಕಾ ತಮ್ಮ ಇನ್ಸ್ಟಾಗ್ರಾಮ್ ಫೋಸ್ಟ್ ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Naga Chaitanya-Samantha: ಸಮಂತಾ ಜೊತೆಗಿನ ವಿಚ್ಛೇದನದ ಬಗ್ಗೆ ಏನಂದ್ರು ನಾಗ ಚೈತನ್ಯ

“ಯುನಿಸೆಫ್ ಪೋಲೆಂಡ್‌ನಾದ್ಯಂತ 11 ಸ್ಥಳಗಳಲ್ಲಿ ಮತ್ತು ನಿರಾಶ್ರಿತರೊಂದಿಗೆ ಪ್ರದೇಶದಾದ್ಯಂತ 37 ಸ್ಥಳಗಳಲ್ಲಿ ಬ್ಲೂ ಡಾಟ್ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಈ ತುರ್ತು ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ. ಬ್ಲೂ ಡಾಟ್ ಕೇಂದ್ರಗಳು ಬಹಳ ಅವಶ್ಯಕವಾದ ಪಾತ್ರವನ್ನು ವಹಿಸುತ್ತವೆ ಮತ್ತು ಅನೇಕ ವಿಧಗಳಲ್ಲಿ ಮಹಿಳೆಯರಿಗೆ ಮತ್ತು ವಿಶೇಷವಾಗಿ ಮಕ್ಕಳಿಗೆ ಸುರಕ್ಷಿತ ಧಾಮವಾಗಿದೆ. ಸಂಬಂಧಿತ ಮಾಹಿತಿಗೆ ಪ್ರವೇಶ, ಮಾನಸಿಕ ಆರೋಗ್ಯ ಬೆಂಬಲ, ತಾಯಿ ಮತ್ತು ಮಗುವಿಗೆ ಹೆಚ್ಚು ಅಗತ್ಯವಿರುವ ಗೌಪ್ಯತೆಯನ್ನು ಅನುಮತಿಸಲು ಮತ್ತು ಆಟದ ಪ್ರದೇಶಗಳನ್ನು ಒದಗಿಸುವುದು, ಯುದ್ಧದ ಬಿಕ್ಕಟ್ಟಿನಂತಹ ಪ್ರದೇಶದಿಂದ ಬರುವ ಮಕ್ಕಳು ಸಹಜತೆಯ ಪ್ರಜ್ಞೆಯನ್ನು ಅನುಭವಿಸಲು ತುಂಬಾ ನಿರ್ಣಾಯಕವಾಗಿದೆ” ಎಂದು ಬರೆದಿದ್ದಾರೆ.

ಈ ಹಿಂದೆಯೂ ಉಕ್ರೇನ್ ನಿರಾಶ್ರಿತರಿಗೆ ನೆರವು ನೀಡಲು ಪ್ರಿಯಾಂಕಾ ಕರೆ
ಈ ಹಿಂದೆ ಕೂಡ ಉಕ್ರೇನ್ ನಿರಾಶ್ರಿತರ ಪರವಾಗಿ ಪ್ರಿಯಾಂಕಾ ಚೋಪ್ರಾ ಧ್ವನಿ ಎತ್ತಿದ್ದರು. ಯುದ್ಧದಿಂದಾಗಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದು, ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಅವರು ವಿಶ್ವದ ಎಲ್ಲಾ ನಾಯಕರು ನಿರಾಶ್ರಿತರ ಪರವಾಗಿ ನಿಲ್ಲುವಂತೆ ಮನವಿ ಮಾಡಿದ್ದರು. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದ ಅವರು ಉಕ್ರೇನಿನಿಂದ ಸ್ಥಳಾಂತರಗೊಂಡ ನಿರಾಶ್ರಿತರ ಬೆಂಬಲಕ್ಕೆ ನಿಲ್ಲಲು ಮನವಿ ಮಾಡಿದ್ದರು.

ಇದನ್ನೂ ಓದಿ:  ಆಲಿಯಾ ಭಟ್​ ಸಿನಿಮಾಗೆ ಸಂಕಷ್ಟ, ಟ್ರೆಂಡ್​ ಆಯ್ತು Boycott Alia Bhatt

ಯುರೋಪಿನಲ್ಲಿ ಬಿಕ್ಕಟ್ಟು ಮುಂದುವರೆದಿದೆ. ಮಾನವೀಯತೆಯನ್ನು ಮತ್ತು ನಿರಾಶ್ರಿತರನ್ನು ಬೆಂಬಲಿಸಲು ಕೆಲಸ ಮಾಡುವವರ ಪರವಾಗಿ ವಿಶ್ವದ ನಾಯಕರು ನಿಲ್ಲಬೇಕಿದೆ. ಉಕ್ರೇನ್ ಮತ್ತು ಪ್ರಪಂಚದಾದ್ಯಂತ ಸ್ಥಳಾಂತರಗೊಂಡ ಜನರನ್ನು ರಕ್ಷಿಸಲು ವಿಶ್ವದ ನಾಯಕರು ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ಯುದ್ಧವನ್ನು ನಾವು ಸುಮ್ಮನೆ ನಿಂತು ನೋಡಲು ಸಾಧ್ಯವಿಲ್ಲ ಎಂದು ಪ್ರಿಯಾಂಕಾ ಕರೆ ನೀಡಿದ್ದರು.
Published by:Ashwini Prabhu
First published: