36ನೇ ವಸಂತಕ್ಕೆ ಕಾಲಿಟ್ಟ ಪ್ರಿಯಾಂಕಾ ಚೋಪ್ರಾ: ಲಂಡನ್​ನಲ್ಲಿ ಹುಟ್ಟುಹಬ್ಬದ ಆಚರಣೆ!

news18
Updated:July 18, 2018, 1:48 PM IST
36ನೇ ವಸಂತಕ್ಕೆ ಕಾಲಿಟ್ಟ ಪ್ರಿಯಾಂಕಾ ಚೋಪ್ರಾ: ಲಂಡನ್​ನಲ್ಲಿ ಹುಟ್ಟುಹಬ್ಬದ ಆಚರಣೆ!
news18
Updated: July 18, 2018, 1:48 PM IST
ನ್ಯೂಸ್​ 18 ಕನ್ನಡ 

ಮೊನ್ನೆಯಷ್ಟೆ ಬಿಟೌನ್​ನ ಕ್ಯಾಟ್​ ಕತ್ರಿನಾ ಕೈಫ್​ ಹುಟ್ಟುಹಬ್ಬ ಆಚರಿಸಿಕೊಂಡರು. ಇಂದು ನಮ್ಮ ಬಾಲಿವುಡ್ ಮತ್ತು ಹಾಲಿವುಡ್​ನ ಹಾಟ್​ ಬೆಡಗಿ ಪ್ರಿಯಾಂಕಾ ಚೋಪ್ರಾ ಕೂಡ ಭರ್ಜರಿಯಾಗಿ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಅವರ ಹುಟ್ಟುಹಬ್ಬದಂದು ಅವರೊಂದಿಗೆ ಒಬ್ಬ ವಿಶೇಷ ಅತಿಥಿ ಸಹ ಇರಲಿದ್ದಾರೆ. ಅದು ಯಾರು? ಏನು ಹುಟ್ಟುಹಬ್ಬದ ವಿಶೇಷ ಅನ್ನೋದನ್ನ ತಿಳಿಯೋಕೆ ಈ ವರದಿ ಓದಿ.

ನಟನೆ ಹಾಗೂ ಮ್ಯಾನರಿಸಂ ಮೂಲಕವೇ ಬಾಲಿವುಡ್​ ಮತ್ತು ಹಾಲಿವುಡ್‍ನಲ್ಲಿ  ಬ್ಯೂಸಿಯಾಗಿರೋ ನಟಿ ಪ್ರಿಯಾಂಕಾ ಅಲಿಯಾಸ್ ಪಿಗ್ಗಿ. ಸದ್ಯ ಪಿಗ್ಗಿ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.  ಲಂಡನ್‍ನಲ್ಲಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ.

ಈ ಸಲದ ವಿಶೇಷ ಎಂದರೆ ಪಿಗ್ಗಿ ತಮ್ಮ ಪ್ರಿಯಕರ ನಿಕ್​ ಜೋನಸ್​ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಈ ಸಂಭ್ರಮದಲ್ಲಿ ಈ ಜೋಡಿಯ ಕುಟುಂಬವರೂ ಇಲ್ಲಿ ಸೇರಲಿದ್ದಾರೆ. ಹೀಗಾಗಿ ನಿಕ್​ ತಮ್ಮ ಪ್ರಿಯಾಂಕಾಗೆ ಏನು ಉಡುಗೊರೆ ಕೊಡಲಿದ್ದಾರೆ ಅನ್ನೋ ಕುತೂಹಲವು ಅಭಿಮಾನಿಗಳಲ್ಲಿದೆ.

ಅಲ್ಲದೆ ಪ್ರಿಯಾಂಕಾ ತಮ್ಮ ಇನ್​ಸ್ಟಾಗ್ರಾಂಸ್ಟೋರಿಯಲ್ಲಿ ಹುಟ್ಟುಹಬ್ಬದ ಕೇಕ್​ ಚಿತ್ರವನ್ನೂ ಪ್ರಕಟಿಸಿದ್ದಾರೆ. ಇಲ್ಲಿದೆ ಅದರ ಚಿತ್ರ.

ಪ್ರಿಯಾಂಕಾ ತಮ್ಮ ಹುಟ್ಟುಹಬ್ಬ ಕೇಕ್​ ಚಿತ್ರವನ್ನು ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಪ್ರಕಟಿಸಿದ್ದಾರೆ

Loading...

ಅಲ್ಲದೆ ನಿಕ್​ ಹಾಗೂ ಪ್ರಿಯಾಂಕಾ ಕಳೆದ ಕೆಲ ದಿನಗಳಿಂದ ಸತತವಾಗಿ ಜೊತೆಯಲ್ಲೇ ಪ್ರಯಾಣಿಸುತ್ತಿದ್ದರು. ಅಲ್ಲದೆ ಪಿಗ್ಗಿ ಜೊತೆ ಭಾರತಕ್ಕೆ ಬಂದಿದ್ದ ನಿಕ್​, ಪ್ರಿಯಾಂಕಾ ಅವರ ತಾಯಿ ಮಧು ಚೋಪ್ರಾ ಅವರನ್ನೂ ಭೇಟಿ ಮಾಡಿದ್ದರು. ಜತೆಗೆ ಗೋವಾದಲ್ಲಿ ರಜೆಯ ಮಜವನ್ನು ಸವಿದ ಈ ಜೋಡಿ ನಂತರ ನ್ಯೂಯಾರ್ಕ್​ ರಸ್ತೆಗಳಲ್ಲಿ ಸೈಕಲ್​ ಸಹ ಹೊಡೆದಿದ್ದರು.

 
First published:July 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...