Priyanka Chopra: ಲಾರಾ ದತ್ತಾ ಮತ್ತು ಪ್ರಿಯಾಂಕಾ ಚೋಪ್ರಾ ಸ್ನೇಹಕ್ಕೆ 21 ವರ್ಷ- ಗೆಳತಿಗೆ ಪಿಂಕಿ ವಿಶ್ ಮಾಡಿದ್ದು ಹೀಗೆ...

Bollywood: ಇದೇ ಸ್ಪರ್ಧೆಯ ಭಾಗವಹಿಸಿದ್ದ ಮತ್ತು ಮಿಸ್ ಏಷ್ಯಾ ಪೆಸಿಫಿಕ್ ವಿಜೇತರಾಗಿದ್ದ ದಿಯಾ ಮಿರ್ಜಾ ಕೂಡ, ನೀವೆಲ್ಲ  ಭೇಟಿಯಾಗಿದ್ದು ನಿಜಕ್ಕೂ ಸಂತೋಷವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. 

ಪ್ರಿಯಾಂಕ ಹಂಚಿಕೊಂಡಿರುವ ಫೋಟೋ

ಪ್ರಿಯಾಂಕ ಹಂಚಿಕೊಂಡಿರುವ ಫೋಟೋ

  • Share this:
ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್(Priyanka Chopra Jonas) ಮಿಸ್ ಇಂಡಿಯಾ(Miss India) ಸ್ಪರ್ಧೆಯಲ್ಲಿ ಗೆಲುವು ಸಾಧಿಸುವ ಮೂಲಕ  ತಮ್ಮ ವೃತ್ತಿಜೀವನವನ್ನು ಆರಂಭಿಸಿರುವ ವಿಚಾರ ಪ್ರತಿಯೊಬ್ಬರಿಗೂ ತಿಳಿದಿದೆ.  2000 ರಲ್ಲಿ ವಿಶ್ವ ಸುಂದರಿ ಪಟ್ಟ ಗಿಟ್ಟಿಸಿಕೊಂಡಿದ್ದ  ಅದೇ ವಿಶ್ವ ಸುಂದರಿ(Miss Universe) ಸ್ಪರ್ಧೆಯಲ್ಲಿ ನಟಿ ಲಾರಾ ದತ್ತಾ ಕೂಡ ಭಾಗವಹಿಸಿ ಅದೇ ವರ್ಷ ವಿಶ್ವ ಸುಂದರಿಯಾದರು. ಭಾನುವಾರ, ಪ್ರಿಯಾಂಕಾ ಇನ್‌ಸ್ಟಾಗ್ರಾಮ್‌ನಲ್ಲಿ ಲಾರಾ ಮತ್ತು ಆಕೆಯ ಮಗಳು ಸೈರಾ ಜೊತೆಗಿನ ಅಪರೂಪದ ಚಿತ್ರವನ್ನು ಹಂಚಿಕೊಂಡಿದ್ದು, ಅವರ ಸ್ನೇಹದ 21 ವರ್ಷಗಳ ನೆನಪನ್ನು ಮೆಲುಕು ಹಾಕಿದ್ದಾರೆ. ಸ್ಪರ್ಧೆಯ ಸಮಯದಲ್ಲಿ ತಮಗೆ ಮಾರ್ಗದರ್ಶನ ನೀಡಿದ ದಿವಂಗತ ವಿದ್ವಾಂಸ ಪ್ರದೀಪ್ ಗುಹಾ ಅವರನ್ನು ಸಹ ಈ ಸಮಯದಲ್ಲಿ  ಪ್ರಿಯಾಂಕಾ ನೆನಪಿಸಿಕೊಂಡರು.  

ಈ ಫೋಟೋದಲ್ಲಿ , ಪ್ರಿಯಾಂಕಾ ಹಳದಿ ಬಣ್ಣದ ಉಡುಪನ್ನು ಧರಿಸಿದ್ದು, ಲಾರಾ ಪಿನ್ ಸ್ಟ್ರಿಪ್ ಶರ್ಟ್ ಧರಿಸಿದ್ದರು. ಅವರು ಲಂಡನ್‌ನಲ್ಲಿ ಭೇಟಿಯಾಗಿದ್ದು,  ಅಲ್ಲಿ ಪ್ರಿಯಾಂಕ ಚೋಪ್ರಾ ಬ್ಯಾಕ್ ಟು ಬ್ಯಾಕ್ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮಿಬ್ಬರ ಸ್ನೇಹಕ್ಕೆ  21 ವರ್ಷಗಳು , ಗೆಳೆತನಕ್ಕೆ ಯಾವುದೇ ಸಂಖ್ಯೆಯ ಮಿತಿ ಇಲ್ಲ. ಗೆಳೆತನ ಯಾವಾಗ ಬೇಕಾದರೂ ಯಾವ ರೀತಿಯಲ್ಲಿ ಬೇಕಾದರೂ ಗಟ್ಟಿಯಾಗಬಹುದು. @larabhupathi ಮತ್ತು ಆಕೆ ಅದ್ಭುತ ತಾರೆ. ಸೈರಾ ಕೂಡ ಖಂಡಿತವಾಗಿಯೂ  ಅಮ್ಮನ ಮಗಳು. ಈ ಇಬ್ಬರಿಗೆ ನನ್ನ ಗೌರವ ಮತ್ತು ಪ್ರೀತಿ ಎಂದು ಬರೆದುಕೊಂಡಿದ್ದಾರೆ.  ಜೊತೆಗೆ ಪ್ರದೀಪ್ ಗುಹಾ ಅವರನ್ನು ಮಿಸ್ ಮಾಡುತ್ತಿದ್ದೇನೆ ಎಂದು ಫೋಟೋದಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಇದೇ ಸ್ಪರ್ಧೆಯ ಭಾಗವಹಿಸಿದ್ದ ಮತ್ತು ಮಿಸ್ ಏಷ್ಯಾ ಪೆಸಿಫಿಕ್ ವಿಜೇತರಾಗಿದ್ದ ದಿಯಾ ಮಿರ್ಜಾ ಕೂಡ, ನೀವೆಲ್ಲ  ಭೇಟಿಯಾಗಿದ್ದು ನಿಜಕ್ಕೂ ಸಂತೋಷವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಲಾರಾ ದತ್ತಾ  ಇತ್ತೀಚೆಗೆ ಬೆಲ್ ಬಾಟಂನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಅದ್ಭುತವಾಗಿ ನಟನೆ ಮಾಡುವ ಮೂಲಕ ಸುದ್ದಿಯಲ್ಲಿದ್ದರು. ರಂಜಿತ್ ತಿವಾರಿ ನಿರ್ದೇಶನ ಮಾಡಿದ್ದ ಈ  ಸ್ಪೈ ಥ್ರಿಲ್ಲರ್ ಚಿತ್ರದಲ್ಲಿ ಅಕ್ಷಯ್ ಕುಮಾರ್, ವಾಣಿ ಕಪೂರ್ ಮತ್ತು ಹುಮಾ ಖುರೇಷಿ ಕೂಡ ನಟಿಸಿದ್ದಾರೆ.

ಪ್ರಿಯಾಂಕಾ ಚಿತ್ರಗಳ ವಿಚಾರಕ್ಕೆ ಬಂದರೆ  ಮ್ಯಾಟ್ರಿಕ್ಸ್ 4 ಮತ್ತು ಟೆಕ್ಸ್ಟ್ ಫಾರ್ ಯು ಚಿತ್ರೀಕರಣವನ್ನ ಮುಗಿಸಿದ್ದಾರೆ ಮತ್ತು ಯುಕೆಯಲ್ಲಿ ತನ್ನ ಮುಂಬರುವ ಪ್ರಾಜೆಕ್ಟ್ ಸಿಟಾಡೆಲ್  ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ.  ಈ ಚಿತ್ರವನ್ನು ಅವೆಂಜರ್ಸ್ ಎಂಡ್‌ಗೇಮ್ ನಿರ್ದೇಶಕ ರುಸ್ಸೋ ಬ್ರದರ್ಸ್ ನಿರ್ದೇಶಿಸುತ್ತಿದ್ದು, ಗೇಮ್ ಆಫ್ ಥ್ರೋನ್ಸ್ ಖ್ಯಾತಿಯ ಅಲುಮ್ ರಿಚರ್ಡ್ ಮ್ಯಾಡೆನ್ ಕೂಡ ನಟಿಸಿದ್ದಾರೆ. ಅಲ್ಲದೇ  ಫರ್ಹಾನ್ ಅಖ್ತರ್ ಅವರ ಜೀ ಲೆ ಜರಾದಲ್ಲಿ ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಕರೀನಾ ಕಪೂರ್ ಗಣಪತಿ ಹಬ್ಬದ ಫೋಟೋಗೆ ಪ್ರಿಯಾಂಕಾ ಚೋಪ್ರಾ ಕಾಮೆಂಟ್

ಮೊನ್ನೆಯಷ್ಟೇ ಪ್ರಿಯಾಂಕಾ ಚೋಪ್ರಾ ಜೋನಾಸ್ ತಮ್ಮದೇ ರೀತಿಯಲ್ಲಿ ಗಣೇಶ ಚತುರ್ಥಿ ಆಚರಣೆಯ ಕರೀನಾ, ಸೈಫ್ ಮತ್ತು ತೈಮೂರ್ ಅವರ ಮುದ್ದಾದ ಫೋಟೋಗಳಿಗೆ ಪ್ರತಿಕ್ರಿಯೆ ನೀಡುವ ಮೂಲಕ ಸುದ್ದಿಯಲ್ಲಿದ್ದರು.  

ಬಾಲಿವುಡ್​ ಅಲ್ಲದೇ ಹಾಲಿವುಡ್​ನಲ್ಲಿ ಕೂಡ ತಮ್ಮದೇ ಛಾಪು ಮೂಡಿಸಿರುವ ಪ್ರಿಯಾಂಕ, ಹಾಲಿವುಡ್​ನಲ್ಲಿ ಒಂದರ , ಮೇಲೊಂದರಂತೆ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.  ಅಲ್ಲದೇ ಆಗಾಗ ಪತಿ ನಿಕ್ ಜೋನಾಸ್ ಜೊತೆ ಇರುವ ಫೋಟೋಗಳನ್ನು ಹಾಗೂ ತಮ್ಮ ಫೋಟೋಗಳನ್ನು ಹಾಕುವ ಮೂಲಕ ಅಭಿಮಾನಿಗಳ ಜೊತೆ ವಿಚಾರಗಳನ್ನು ಹಂಚಿಕೊಳ್ಳುವುದರ ಮೂಲಕ ಸುದ್ದಿಯಲ್ಲಿರುತ್ತಾರೆ.
Published by:Sandhya M
First published: