Priyanka Chopra: ಮಹಾರಾಷ್ಟ್ರ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಿಯಾಂಕಾ ಚೋಪ್ರಾ!

Priyanka Chopra: ಸಿನಿಮಾ ಮತ್ತು ಖಾಸಗಿ ಜೀವನದಲ್ಲಿ ಬ್ಯುಸಿಯಾಗಿರುವ ಪಿಗ್ಗಿ ಇದೀಗ ಬೇರೊಂದು ವಿಷಯಕ್ಕೆ ಸುದ್ದಿಯಲ್ಲಿದ್ದಾರೆ. ಮಹಾರಾಷ್ಟ್ರ ಪೊಲೀಸರ ಕೈಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿರುವ ಪ್ರಿಯಾಂಕಾ ಕುರಿತು ಟ್ವಿಟ್ಟರ್​ನಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ

  • Share this:
ಬಾಲಿವುಡ್​ ತಾರೆ ಪ್ರಿಯಾಂಕಾ ಚೋಪ್ರಾ ಸದಾ ಒಂದಿಲ್ಲೊಂದು ಕಾರಣದಿಂದ ಸುದ್ದಿಯಲ್ಲಿರುತ್ತಾರೆ. ಪ್ರಿಯಾಂಕಾ ಸದ್ಯಕ್ಕೆ ಫರ್ಹಾನ್ ಅಖ್ತರ್ ಜೊತೆಗೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾ ಮತ್ತು ಖಾಸಗಿ ಜೀವನದಲ್ಲಿ ಬ್ಯುಸಿಯಾಗಿರುವ ಪಿಗ್ಗಿ ಇದೀಗ ಬೇರೊಂದು ವಿಷಯಕ್ಕೆ ಸುದ್ದಿಯಲ್ಲಿದ್ದಾರೆ. ಮಹಾರಾಷ್ಟ್ರ ಪೊಲೀಸರ ಕೈಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿರುವ ಪ್ರಿಯಾಂಕಾ ಕುರಿತು ಟ್ವಿಟ್ಟರ್​ನಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ!

ಪ್ರಿಯಾಂಕಾ- ಫರ್ಹಾನ್ ಅಖ್ತರ್ ಅಭಿನಯದ 'ಸ್ಕೈ ಈಸ್ ಪಿಂಕ್' ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ಈ ಟ್ರೈಲರ್​ನಲ್ಲಿ ಪ್ರಿಯಾಂಕಾ ಮತ್ತು ಫರ್ಹಾನ್ ಅಖ್ತರ್ ಅವರ ಮಗಳು ಆಯಿಷಾ ಪಾತ್ರಧಾರಿ ನಡುವೆ ನಡೆಯುವ ಸಂಭಾಷಣೆಯ ಸ್ಕ್ರೀನ್​ಶಾಟ್​ ಒಂದನ್ನು ಮಹಾರಾಷ್ಟ್ರ ಪೊಲೀಸರು ಟ್ವೀಟ್ ಮಾಡಿದ್ದಾರೆ. ಆಯಿಷಾ ಎಂಬ ಆ ಬಾಲಕಿಗೆ ಕರುಳಿಗೆ ಸಂಬಂಧಿಸಿದ ಕಾಯಿಲೆ ಇರುತ್ತದೆ. ಆಕೆಗೆ ಆಪರೇಷನ್ ಮಾಡಿಸಲು ಮನೆಯವರ ಬಳಿ ಹಣ ಇರುವುದಿಲ್ಲ. ಈ ಸಂದರ್ಭದಲ್ಲಿ ಪ್ರಿಯಾಂಕಾ ಚೋಪ್ರಾ ಬ್ಯಾಂಕ್​ ದರೋಡೆ ಮಾಡುವ ಐಡಿಯಾ ಕೊಡುತ್ತಾಳೆ.

ಈ ಬಗ್ಗೆ ತಮಾಷೆಯಾಗಿ ಟ್ವೀಟ್ ಮಾಡಿರುವ ಮಹಾರಾಷ್ಟ್ರ ಪೊಲೀಸರು, 'ಐಪಿಸಿ ಸೆಕ್ಷನ್ 393ರ ಪ್ರಕಾರ ಈ ಅಪರಾಧಕ್ಕೆ 7 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು' ಎಂದು ಟ್ವೀಟ್ ಮಾಡಿದ್ದಾರೆ.ಪೊಲೀಸರ ಟ್ವೀಟ್​ಗೆ ಹಾಸ್ಯಮಯವಾಗಿಯೇ ರೀಟ್ವೀಟ್ ಮಾಡಿರುವ ಪ್ರಿಯಾಂಕಾ ಚೋಪ್ರಾ, 'ಓಹ್! ರೆಡ್​ಹ್ಯಾಂಡ್​ ಆಗಿ ಸಿಕ್ಕಿಹಾಕಿಕೊಂಡೆ. ಈ ಐಡಿಯಾ ಬಿಟ್ಟು ಬಿ ಪ್ಲಾನ್​ ಬಗ್ಗೆ ಯೋಚಿಸಬೇಕಾಗಿದೆ ಅಲ್ವಾ ಫರ್ಹಾನ್​ ಅಖ್ತರ್?' ಎಂದು ಟ್ವೀಟ್ ಮಾಡಿದ್ದಾರೆ.ಇದಕ್ಕೆ ಫರ್ಹಾನ್ ಅಖ್ತರ್ ಕೂಡ ಟ್ವೀಟ್ ಮಾಡಿದ್ದು, 'ಇನ್ನು ಮುಂದೆ ಕ್ಯಾಮೆರಾ ಎದುರು ಯಾವುದೇ ಪ್ಲಾನ್​ ಮಾಡದಿರುವುದು ಒಳ್ಳೆಯದು' ಎಂದು ಹೇಳಿದ್ದಾರೆ.ಅಂದಹಾಗೆ, 'ಸ್ಕೈ ಈಸ್ ಪಿಂಕ್' ಸಿನಿಮಾವನ್ನು ಸೊನಾಲಿ ಬೋಸ್ ನಿರ್ದೇಶಿಸಿದ್ದಾರೆ. ಆಯಿಷಾ ಚೌಧರಿ ಎಂಬ ಹುಡುಗಿಯ ಜೀವನ ಕತೆಯನ್ನು ಆಧರಿಸಿದ ಈ ಸಿನಿಮಾದಲ್ಲಿ ಝಾಯಿರಾ ವಾಸೀಂ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಸಿನಿಮಾದ ಟ್ರೈಲರ್​ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗಿವೆ.

First published: