• Home
  • »
  • News
  • »
  • entertainment
  • »
  • Priyanka Chopra In India: 3 ವರ್ಷಗಳ ನಂತರ ಭಾರತಕ್ಕೆ ಬಂದ ದೇಸಿ ಗರ್ಲ್! ಅಭಿಮಾನಿಗಳು ಖುಶ್

Priyanka Chopra In India: 3 ವರ್ಷಗಳ ನಂತರ ಭಾರತಕ್ಕೆ ಬಂದ ದೇಸಿ ಗರ್ಲ್! ಅಭಿಮಾನಿಗಳು ಖುಶ್

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ

ನಟಿ ಪ್ರಿಯಾಂಕ ಚೋಪ್ರಾ ಬರೋಬ್ಬರಿ 3 ವರ್ಷಗಳ ನಂತರ ಭಾರತಕ್ಕೆ ಮರಳಿದ್ದಾರೆ. ಆದರೆ ಪತಿ ಹಾಗೂ ಮಗುವನ್ನು ಕರೆದುಕೊಂಡುಬಂದಿಲ್ಲ.

  • Trending Desk
  • Last Updated :
  • Bangalore, India
  • Share this:

ಪ್ರಿಯಾಂಕಾ ಚೋಪ್ರಾ (Priyanka Chopra) ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ವಿಶ್ವ ಸುಂದರಿ ಪಟ್ಟಗಳಿಸುವ ಮೂಲಕ ಭಾರತಕ್ಕೆ (India) ಹೆಮ್ಮೆ ತಂದಿದ್ದ ಈಕೆ ನಂತರ ಬಾಲಿವುಡ್ (Bollywood) ಚಿತ್ರರಂಗಕ್ಕೆ ಕಾಲಿಟ್ಟು ತಮ್ಮದೆ ಆದ ಛಾಪು ಮೂಡಿಸಿದರು. ಅಷ್ಟೆ ಅಲ್ಲದೆ, ತಮ್ಮ ನಟನಾ ಪ್ರತಿಭೆಯ ಮೂಲಕ ಹಾಲಿವುಡ್  (Hollywood) ಅಂಗಳಕ್ಕೂ ಪ್ರವೇಶಿಸಿ ಅಲ್ಲಿಯೂ ಸೈ ಎನಿಸಿಕೊಂಡಿದ್ದಾರೆ ಈ ನಟಿ. ಅಂತಾರಾಷ್ಟ್ರೀಯ ಖ್ಯಾತಿಗಳಿಸಿರುವ ಪ್ರಿಯಾಂಕಾ ಚೋಪ್ರಾ ಅವರಿಗೆ ವಿಶ್ವದಾದ್ಯಂತ ಲಕ್ಷಾನುಗಟ್ಟಲೆ ಅಭಿಮಾನಿಗಳಿದ್ದಾರೆ. ಭಾರತದಲ್ಲೂ ಈ ನಟಿಯ ಅಭಿಮಾನಿಗಳ ಸಂಖ್ಯೆ ಅಪಾರ.


ಸದ್ಯ, ಈಗ ಭಾರತದಲ್ಲಿರುವ ಪ್ರಿಯಾಂಕಾ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದು ಬಂದಿದೆ. ಅದೇನಪ್ಪಾ ಅಂದರೆ ಪ್ರಿಯಾಂಕಾ ಅವರು ಭಾರತಕ್ಕೆ ಮರಳಿದ್ದಾರೆ. ಹೌದು, ಬಹುತೇಕ ಮೂರು ವರ್ಷಗಳ ಸುದೀರ್ಘ ಸಮಯದ ನಂತರ ನಟಿ ಭಾರತಕ್ಕೆ ಮರಳುತ್ತಿರುವುದಾಗಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಅದರಂತೆ ನಟಿ ಭಾರತದಲ್ಲಿ ಲ್ಯಾಂಡ್ ಆಗಿದ್ದಾರೆ.


ಇತ್ತೀಚಿಗಷ್ಟೇ ಪ್ರಿಯಾಂಕಾ ತಮ್ಮ ಸಾಮಾಜಿಕ ಖಾತೆಯ ಮೂಲಕ ಬೋರ್ಡಿಂಗ್ ಪಾಸ್ ಇರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟಿನಲ್ಲಿ ನಟಿಯು, "ಅಂತಿಮವಾಗಿ ಮನೆಗೆ ಮರಳುತ್ತಿದ್ದೇನೆ, ಸುಮಾರು ಮೂರು ವರ್ಷಗಳ ನಂತರ." ಎಂದು ಬರೆದುಕೊಂಡಿದ್ದಾರೆ.


ಕೋವಿಡ್ ನಂತರದ ಪ್ರಥಮ ಭೇಟಿ


ಈ ಎರಡು ವರ್ಷಗಳ ಸಮಯವು ಬಹುತೇಕ ಎಲ್ಲರ ಪಾಲಿಗೂ ಕಷ್ಟವೇ ಆಗಿತ್ತು. ಕಾರಣ ಕೋವಿಡ್ ಹಾವಳಿ. ಇದರಿಂದಾಗಿ ಬಹಳಷ್ಟು ಜನರು ತಮ್ಮ ತಮ್ಮ ನೆಚ್ಚಿನ ಸ್ಥಳಗಳಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಅದರಂತೆ ಪ್ರಿಯಾಂಕಾ ಅವರ ಪಾಲಿಗೂ ಇದು ನಿಜವಾಗಿತ್ತೆನ್ನಬಹುದು. ಹಾಗಾಗಿ, ಕೋವಿಡ್ ನಂತರದ ಸಮಯದಲ್ಲಿ ಹಾಗೂ ಇದೇ ವರ್ಷ ಜನವರಿಯಲ್ಲಿ ಅವರು ತಮ್ಮ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಸ್ ಅವರನ್ನು ಸ್ವಾಗತಿಸಿದ ಬಳಿಕ ಪ್ರಥಮ ಬಾರಿಗೆ ಭಾರತಕ್ಕೆ ಮರಳಿದ್ದಾರೆ.


ದೀಪಾವಳಿ ಆಚರಣೆ


ಇದಕ್ಕೂ ಮುನ್ನ ನಟಿಯು ತಮ್ಮ ಪತಿ ನಿಕ್ ಜೋನಸ್ ಅವರೊಂದಿಗೆ ಈ ಬಾರಿಯ ದೀಪಾವಳಿಯನ್ನು ಬಲು ಆನಂದದಿಂದ ಆಚರಿಸಿದ್ದಾರೆ. ಲಾಸ್ ಏಂಜಲಿಸ್ ನಲ್ಲಿರುವ ತಮ್ಮ ಮನೆಯಲ್ಲಿ ಪ್ರಿಯಾಂಕಾ ತಮ್ಮ ಪತಿ, ಬಂಧು-ಮಿತ್ರರೊಂದಿಗೆ ಈ ಬಾರಿಯ ದೀಪಾವಳಿಯನ್ನು ಆಚರಿಸಿದ್ದರು. ಈ ಸಂದರ್ಭದಲ್ಲಿ ಪ್ರಿಯಾಂಕಾ ಅವರ ತಾಯಿ ಮಧು ಚೋಪ್ರಾ ಸಹ ಅವರೊಡನೆ ಆಚರಣೆಯಲ್ಲಿ ಭಾಗಿಯಾಗಿದ್ದರು. ಇದು ಪ್ರಿಯಾಂಕಾ ಅವರ ಮಗಳಿಗೆ ಪ್ರಥಮ ದೀಪಾವಳಿಯ ಸಂಭ್ರಮವಾಗಿತ್ತು.


ಈ ಸಂದರ್ಭದಲ್ಲಿ ನಟಿ ಚೋಪ್ರಾ ತಮ್ಮ ದೀಪಾವಳಿ ಆಚರಣೆಯ ಹಲವು ಚಿತ್ರಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ಮೂರು ಸದಸ್ಯರ ಆ ಕುಟುಂಬವು ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿದ್ದು ಆಚರಣೆಯಲ್ಲಿ ಭಾಗಿಯಾಗಿರುವುದನ್ನು ನೋಡಬಹುದಾಗಿದೆ.


ಇದನ್ನೂ ಓದಿ: Sandalwood Queen Ramya: ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಹಿಂದೆ ಬಿದ್ದ ಹಾಸ್ಟೆಲ್ ಹುಡುಗರು! ಯಾಕೆ? ಏನಾಯ್ತು?


ಈ ಸಮಯದಲ್ಲೂ ನಟಿ ತನ್ನ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದರು. ಅದರಲ್ಲಿ ಅವರು, "ಎಲ್ಲರಿಗೂ ಪ್ರೀತಿ, ಶಾಂತಿ ಹಾಗೂ ಸಮೃದ್ಧಿ ಬಯಸುತ್ತೇನೆ. ಅಭಿಮಾನದಿಂದ ತುಂಬಿರುವ ಹೃದಯದ ಮೂಲಕ ನಾನು ನಿಮ್ಮೆಲ್ಲರಿಗೂ ದೀಪಾವಳಿಯ ಶುಭ ಕಾಮನೆಗಳನ್ನು ಕಳುಹಿಸುತ್ತಿದ್ದೇನೆ. ಕೊಂಚ ವಿಳಂಬವಾಗಿ ಹಾರೈಸುತ್ತಿರುವುದಕ್ಕೆ ಕ್ಷಮಿಸಿ. ಆದರೆ ನಾನು ಈ ಅದ್ಭುತವಾದ ವಾತಾವರಣದಲ್ಲಿ ಇನ್ನಷ್ಟು ಸಮಯ ಕಳೆಯಲು ಬಯಸಿದ್ದೆ" ಎಂದು ಬರೆದುಕೊಂಡಿದ್ದರು.


ಇದೇ ಸಂದರ್ಭದಲ್ಲಿ ಪ್ರಿಯಾಂಕಾ ಅವರ ಪತಿಯೂ ಸಹ ದೀಪಾವಳಿಯ ಶುಭ ಹಾರೈಕೆಯನ್ನು ಹಾರೈಸಿದ್ದರು. ತಮ್ಮ ಪೋಸ್ಟಿನಲ್ಲಿ ಅವರು, "ನನ್ನ ಗೆಳತಿಯೊಂದಿಗೆ ಅದ್ಭುತವಾದ ದೀಪಾವಳಿ ಇದಾಗಿದೆ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ನಿಮ್ಮೆಲ್ಲರಿಗೂ ಬೆಳಕು ಹಾಗೂ ಸಂತಸದ ಕ್ಷಣಗಳನ್ನು ಕಳುಹಿಸುತ್ತಿದ್ದೇನೆ" ಎಂದು ಬರೆದುಕೊಂಡಿದ್ದರು.


ಇದನ್ನೂ ಓದಿ: Aishwarya Rai Bachchan: ಸಿ ಸೆಕ್ಷನ್ ಬೇಡ ಎಂದು ನಾರ್ಮಲ್ ಡೆಲಿವರಿ ಆಯ್ಕೆ ಮಾಡಿದ್ದ ಐಶ್, ನನ್ ಸೊಸೆ ಗಟ್ಟಿಗಿತ್ತಿ ಎಂದ ಬಿಗ್ ಬಿ


ಸರೋಗಸಿ ಅಂದರೆ ಬಾಡಿಗೆ ತಾಯ್ತನದ ಮೂಲಕ ಪ್ರಿಯಾಂಕಾ ಹಾಗೂ ಅವರ ಪತಿ ನಿಕ್ ಜೋನಸ್ ಅವರು ಈ ವರ್ಷದ ಆರಂಭದಲ್ಲಿ ಅಂದರೆ ಜನವರಿಯಲ್ಲಿ ತಮ್ಮ ಮಗಳನ್ನು ಸ್ವಾಗತಿಸಿದ್ದರು.

Published by:Divya D
First published: