Priyanka Chopra: ಲಾಸ್​ ಎಂಜಲೀಸ್​ನಲ್ಲಿ ಪ್ರಿಯಾಂಕಾ - ನಿಕ್​ರ ಹೊಸ ಮನೆ: ಬಂಗಲೆಯ ಬೆಲೆ ಕೇಳಿದ್ರೆ ದಂಗಾಗುತ್ತೀರಾ​..!

Priyanka Chopra: ಲಾಸ್​ ಏಂಜಲೀಸ್​ನಲ್ಲಿ ನಿಕ್,​ ಪ್ರಿಯಾಂಕಾಗಾಗಿ 50 ಕೋಟಿ ಕೊಟ್ಟು ಖರೀದಿಸಿದ್ದ ಐಷಾರಾಮಿ ಬಂಗಲೆ ಈಗ ಮಾರಾಟವಾಗಿದೆ. ಇದರ ಬೆನ್ನಲ್ಲೇ ಇದಕ್ಕಿಂತ ಐಷಾರಾಮಿ ಸೌಲಭ್ಯಗಳಿರುವ ಬಂಗಲೆಗಾಗಿ ನಿಕ್​ ಹುಡುಕಾಡುತ್ತಿದ್ದಾರಂತೆ. ಅದಕ್ಕಾಗಿ 141.83 ಕೋಟಿ ಮೌಲ್ಯದ ಮನೆಯನ್ನು ನೋಡಿದ್ದಾರಂತೆ.

Anitha E | news18
Updated:August 7, 2019, 3:53 PM IST
Priyanka Chopra: ಲಾಸ್​ ಎಂಜಲೀಸ್​ನಲ್ಲಿ ಪ್ರಿಯಾಂಕಾ - ನಿಕ್​ರ ಹೊಸ ಮನೆ: ಬಂಗಲೆಯ ಬೆಲೆ ಕೇಳಿದ್ರೆ ದಂಗಾಗುತ್ತೀರಾ​..!
ವೈರಲ್​ ಆದ ಪ್ರಿಯಾಂಕಾ-ನಿಕ್​ ಬೆಡ್​ ರೂಮ್​ ಫೋಟೋ
  • News18
  • Last Updated: August 7, 2019, 3:53 PM IST
  • Share this:
ಸೆಲೆಬ್ರಿಟಿ ಜೋಡಿ ಪ್ರಿಯಾಂಕಾ ಹಾಗೂ ನಿಕ್​ ಜೋನಸ್​ ಒಂದಲ್ಲಾ ಒಂದು ಕಾರಣದಿಂದ ಸದಾ ಸುದ್ದಿಯಲ್ಲಿರುತ್ತಾರೆ. 2018ರ ಡಿಸೆಂಬರ್​ನಲ್ಲಿ ನಿಕ್​ ಜೋನಸ್​ ಜತೆ ವಿವಾಹ ಬಂಧನಕ್ಕೊಳಗಾಗ ಪ್ರಿಯಾಂಕಾ ಮೊದಲು ನ್ಯೂಯಾರ್ಕ್​ನಲ್ಲಿ ನೆಲೆಸಿದ್ದರು.

ವಿವಾಹವಾದ ನಂತರ ಗಂಡ ನಿಕ್​ ಜತೆ ಲಾಸ್​ ಏಂಜಲೀಸ್​ಗೆ ಬಂದು ನೆಲೆಸಿದರು. ಲಾಸ್​ ಏಂಜಲೀಸ್​ನಲ್ಲಿ ನಿಕ್​ ಪ್ರಿಯಾಂಕಾಗಾಗಿ 50 ಕೋಟಿ ಮೌಲ್ಯದ ಐಷಾರಾಮಿ ಬಂಗಲೆಯನ್ನು ಖರೀದಿಸಿದ್ದರು. ಆದರೆ ಈ ಜೋಡಿ ಈಗ ಬಂಗಲೆಯನ್ನು 48.92 ಕೋಟಿಗೆ ಮಾರಾಟ ಮಾಡಿದ್ದಾರೆ ಎಂದು elle.com. ಸುದ್ದಿ ಮಾಡಿದೆ.

Priyanka Chopra, Nick Jonas' New house in Los Angeles to Cost Rs 141 Crore?
ನಿಕ್​ ಹಾಗೂ ಪ್ರಿಯಾಂಕಾ


ಪ್ರಿಯಾಂಕಾ ಹಾಗೂ ನಿಕ್​ ಸದ್ಯ ಲಾಸ್​ ಏಂಜಲೀಸ್​ನಲ್ಲೇ ಈಗ ಇರುವ ಮನೆಗಿಂತ ದೊಡ್ಡದಾದ ಹಾಗೂ ವಿಶಾಲವಾದ ಬಂಗಲೆಗಾಗಿ ಹುಡುಕುತ್ತಿದ್ದಾರಂತೆ. ಬೆವೆರ್ಲೆ ಹಿಲ್ಸ್​ ಹಾಗೂ ಬೆಲ್​ ಏರ್​ ಪ್ರದೇಶಗಳಲ್ಲಿ ಅವರು ಮನೆಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: Comali Movie: ರಜಿನಿಯನ್ನು ಕೆಣಕಿದ್ರೆ ಕಮಲ್ ತಗೋತಾರೆ ಕ್ಲಾಸ್ : ಕೋಮಾಲಿ ತಂಡಕ್ಕೆ ಬಿಸಿ ಮುಟ್ಟಿಸಿದ ಉಳಗ ನಾಯಕನ್​

ನಿಕ್​ ಹಾಗೂ ಪ್ರಿಯಾಂಕಾ ಜೋಡಿ 375.85 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರಂತೆ. ಸದ್ಯ ಇವರು ಅಂದಾಜು 141.83 ಕೋಟಿ ಬೆಲೆಯ ಅರಮನೆಯಂತಿರುವ ಮನೆಯನ್ನು ಕೊಳ್ಳಲು ಮುಂದಾಗಿದ್ದಾರಂತೆ. ಹೀಗೆಂದು elle.com. ಮಾಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Nick Jonas and Priyanka Chopra
ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಿಯಾಂಕಾ ಚೋಪ್ರಾ
ಸದ್ಯ ನಿಕ್​ ಅವರ ತಮ್ಮ ಜೋ ಜೋನಸ್​ ವಿವಾಹವಾಗಿರುವ ಸಂಭ್ರಮದಲ್ಲಿ ನಿಕ್​ ದಂಪತಿ ಸಹ ಪ್ರವಾಸದಲ್ಲಿದ್ದಾರೆ. ಸದ್ಯ ನಿಕ್​ ಮಾರಾಟ ಮಾಡಿರುವ ಮನೆಯಲ್ಲು ಐದು ಬೆಡ್​ರೂಮ್​  ಹಾಗೂ ಒಂದು ಈಜುಕೊಳವಿತ್ತಂತೆ. ಆದರೆ ಈಗ ಕೊಳ್ಳಲಿರುವ ಮನೆ ಇದಕ್ಕೂ ವಿಶಾಲವಾಗಿರಲಿದ್ದು, ಅದರಲ್ಲಿ ಇನ್ನೂ ಐಷಾರಾಮಿ ಸೌಲಭ್ಯಗಳು ಇರಲಿವೆಯಂತೆ.

Shriya Saran: ಜೋರು ಮಳೆಯಲ್ಲಿ ಬಳ್ಳಿಯಂತಹ ನಡುವನ್ನು ಬಳುಕಿಸಿದ ಶ್ರೇಯಾ...!

First published: August 7, 2019, 3:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading