ಈ ವರ್ಷದ ಆರಂಭದಲ್ಲಿ ಬಾಲಿವುಡ್ (Bollywood) ಮತ್ತು ಹಾಲಿವುಡ್ನ (Hollywood) ಫೇಮಸ್ ಕಪಲ್ ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ನಿಕ್ ಜೋನಾಸ್ (Nick Jonas) ದಂಪತಿಗಳು ತಮ್ಮ ಮೊದಲ ಮಗುವನ್ನು ಬಾಡಿಗೆ ತಾಯಿಯ ಮೂಲಕ ಪಡೆದಿರುವಾಗಿ ಸುದ್ದಿಯಾಗಿತ್ತು. ಈ ಬಗ್ಗೆ ದಂಪತಿಗಳು ಅಧಿಕೃತವಾಗಿ ಘೋಷಣೆ ಮಾಡದಿದ್ದರೂ ಸಹ , ಈ ಸುದ್ದಿ ದೃಢಪಟ್ಟಿತ್ತು. ನಂತರ ದಂಪತಿಗಳೇ ಸಾಮಾಜಿಕ ಜಾಲಾತಾಣದ ಮೂಲಕ ಸ್ಪಷ್ಟಪಡಿಸಿದ್ದರು. ಹೆಣ್ಣು ಮಗುವಿನ ಪೋಷಕರಾಗಿರುವ ನಿಕ್ ಮತ್ತು ಪಿಂಕಿ ಮೂರು ತಿಂಗಳ ನಂತರ ತಮ್ಮ ಮಗಳಿಗೆ ಹೆಸರಿಟ್ಟಿದ್ದಾರೆ ಎಂದು TMZ ವರದಿ ಮಾಡಿದೆ.
ಮಾಲ್ತಿ ಮೇರಿ ಚೋಪ್ರಾ ಜೋನಾಸ್
ಪ್ರಿಯಾಂಕಾ ಮತ್ತು ನಿಕ್ ಮಗುವಿನ ಜನನ ಪ್ರಮಾಣಪತ್ರವನ್ನು ಪಡೆದಿರುವ TMZ ಮ್ಯಾಗಜೀನ್ ಪ್ರಕಾರ, ದಂಪತಿಗಳು ತಮ್ಮ ಪ್ರೀತಿಯ ಪುತ್ರಿಗೆ ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಎಂದು ಹೆಸರಿಟ್ಟಿದ್ದಾರೆ. ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿ ಜನವರಿ 15 ರಂದು ರಾತ್ರಿ 8 ಗಂಟೆಯ ಸಯಮದಲ್ಲಿ ಮಾಲ್ತಿ ಜನಿಸಿದ್ದು ಎಂದು ಡಾಕ್ಯುಮೆಂಟ್ನಲ್ಲಿದ್ದು, ದಂಪತಿಗಳು ಮಗುವಿನ ಹೆಸರಿನ ಬಗ್ಗೆ ಇನ್ನೂ ಯಾವುದೇ ಸ್ಪಷ್ಠೀಕರಣ ನೀಡಿಲ್ಲ. ಕೆಲ ಮೂಲಗಳ ಪ್ರಕಾರ ಈ ಹೆಸರು ಜೋಡಿಗೆ ಬಹಳ ವಿಶೇಷ ಎನ್ನಲಾಗುತ್ತಿದೆ.
ಇಬ್ಬರ ಸಂಪ್ರದಾಯಕ್ಕೆ ತಕ್ಕ ಹೆಸರು
ದಂಪತಿಗಳು ತಮ್ಮ ಮಗುವಿನ ಮಗಳ ಹೆಸರಿನಲ್ಲಿ ತಮ್ಮ ಎರಡೂ ಸಂಪ್ರದಾಯಗಳನ್ನು ಗೌರವಿಸುವುದನ್ನು ಮುಂದುವರೆಸಿದ್ದಾರೆ ಮತ್ತು ಆದ್ದರಿಂದ ಹಿಂದೂ ಹೆಸರು ಮತ್ತು ಮಧ್ಯದ ಹೆಸರು ಮೇರಿ ಅನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಪ್ರಿಯಾಂಕ ಅವರ ತಾಯಿಯ ಹೆಸರು ಮಧುಮಾಲತಿ ಹಾಗಾಗಿ ಮಗುವಿನ ಮೊದಲ ಹೆಸರನ್ನು ಮಾಲ್ತಿ ಎಂದು ಇಟ್ಟಿದ್ದಾರೆ ಎಂಬುದು ಅಭಿಮಾನಿಗಳ ಅಂಬೋಣ.
ಜನವರಿ 21 ರಂದು ಪ್ರಿಯಾಂಕಾ ಮತ್ತು ನಿಕ್ ದಂಪತಿಗಳು ತಮ್ಮ ಮಗುವನ್ನು ಸ್ವಾಗತಿಸುವ ಸಂತೋಷದ ಸುದ್ದಿಯನ್ನು ತಿಳಿಸಿದ್ದರು. ಕೆವಲ ಒಂದು ಪೋಸ್ಟ್ ಮಾಡುವ ಮೂಲಕ ಈ ವಿಷಯವನ್ನು ದಂಪತಿಗಳು ಅಭಿಮಾನಿಗಳಿಗೆ ತಿಳಿಸಿದ್ದಾರೆ. "ನಾವು ಬಾಡಿಗೆ ತಾಯಿಯ ಮೂಲಕ ಮಗುವನ್ನು ಸ್ವಾಗತಿಸಿದ್ದೇವೆ ಎಂದು ಹೇಳಲು ನಾವು ತುಂಬಾ ಸಂತೋಷಪಡುತ್ತೇವೆ ಎಂದು ತಿಳಿಸಿದ್ದಾರೆ. ಇನ್ನು ತಮ್ಮ ಮಗಳು ಹುಟ್ಟಿದಾಗಿನಿಂದ, ದಂಪತಿಗಳು ಯಾವುದೇ ಸಾರ್ವಜನಿಕ ಹೇಳಿಕೆಗಳನ್ನು ಇದುವರೆಗೂ ನೀಡಿಲ್ಲ ಹಾಗೂ ಅವರು ತಮ್ಮ ಪುಟ್ಟ ಮಗುವಿನ ಯಾವುದೇ ಫೋಟೋಗಳನ್ನು ಸಹ ಹಂಚಿಕೊಂಡಿಲ್ಲ.
ಇದನ್ನೂ ಓದಿ: KGF 2ಗೆ ಫಿದಾ ಆದ ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ತಂಡ, ರಾಕಿ ಬಾಯ್ ಹವಾ ಹೇಗಿದೆ ನೋಡಿ
ಪ್ರಿಯಾಂಕಾ ಇತ್ತೀಚೆಗೆ ಆಪ್ತ ಸ್ನೇಹಿತೆ ಲಿಲ್ಲಿ ಸಿಂಗ್ ಅವರೊಂದಿಗೆ ಮಾತನಾಡುವಾಗ ಪೋಷಕರಾಗಿ ತನ್ನ ಹೊಸ ಜವಾಬ್ದಾರಿಯ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ. ಅಲ್ಲಿ ಅವರು ತಮ್ಮ ಕನಸುಗಳು ಮತ್ತು ಆಕಾಂಕ್ಷೆಗಳ ಮೇಲೆ ಯಾವುದೇ ಮಿತಿಗಳನ್ನು ಹಾಕದೆ ಮಗುವನ್ನು ಬೆಳೆಸುವ ಬಗ್ಗೆ ಸಹ ಮಾತನಾಡಿದ್ದಾರೆ.
ಈ ವಿಶೇಷ ಸಮಯದಲ್ಲಿ ದಂಪತಿಗಳು ಮಾಧ್ಯಮದವರಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳುವಂತೆ ವಿನಂತಿಸಿದ್ದಾರೆ. "ನಾವು ನಮ್ಮ ಕುಟುಂಬದ ಮೇಲೆ ಗಮನ ಕೇಂದ್ರೀಕರಿಸುವುದರಿಂದ ಈ ವಿಶೇಷ ಸಮಯದಲ್ಲಿ ನಾವು ಗೌರವಯುತವಾಗಿ ಗೌಪ್ಯತೆಯನ್ನು ವಿನಂತಿಸುತ್ತಿದ್ದೇವೆ. ತುಂಬಾ ಧನ್ಯವಾದಗಳು," ಎಂದು ಅವರು ಬರೆದುಕೊಂಡಿದ್ದರು.
ಇದನ್ನೂ ಓದಿ: ಇನ್ಮೇಲೆ ತಂಬಾಕಿನ ಜಾಹೀರಾತಿನಲ್ಲಿ ನಾನು ಇರಲ್ಲ ಎಂದ ನಟ, ಕೋಟ್ಯಂತರ ರೂಪಾಯಿ ದಾನ!
ಮುಂಚಿತವಾಗಿ ಜನಿಸಿದ ಮಗು
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಾಸ್ ಅವರ ಮಗಳು ದಕ್ಷಿಣ ಕ್ಯಾಲಿಫೋರ್ನಿಯಾ ಆಸ್ಪತ್ರೆಯಲ್ಲಿ 12 ವಾರಗಳ ಮುಂಚಿತವಾಗಿ ಜನಿಸಿತ್ತು ಎಂದು ವರದಿಯಾಗಿದೆ. ಮಗು ದಂಪತಿಗಳೊಂದಿಗೆ ಆರೋಗ್ಯವಾಗಿ ಮನೆಗೆ ಮರಳುವವರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿಯೇ ಇತ್ತು ಎಂದು ಮೂಲಗಳು ಸುದ್ದಿ ಮಾಧ್ಯಮಕ್ಕೆ ಮಾಹಿತಿ ನೀಡಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ