Priyanka-Nick ದಂಪತಿಯ ಮಗು ಅವಧಿಗೂ ಮುನ್ನ ಜನಿಸಿದ್ದಕ್ಕೆ ಕಾರಣ ಇದಾ? ಅಮೇರಿಕಾದ ಪತ್ರಿಕೆಯೊಂದರ ವರದಿ ಇದು

ಬಾಡಿಗೆ ತಾಯಿಯು ಏಪ್ರಿಲ್​ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ಅದಕ್ಕಾಗಿ ಪ್ರಿಯಾಂಕಾ ಮತ್ತು ನಿಕ್​ ಆ ತಿಂಗಳಲ್ಲಿ ಯಾವುದೇ ಕೆಲಸಗಳನ್ನೂ ಒಪ್ಪಿಕೊಳ್ಳದೇ ಬಿಡುವು ಮಾಡಿಕೊಳ್ಳಲು ನಿರ್ಧರಿಸಿದ್ದರು.

ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಾಸ್

ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಾಸ್

  • Share this:
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ನಿಕ್​ ಜೋನಸ್ (Nick Jonas) ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದಿರುವ ಬಗ್ಗೆ ಈಗಾಗ್ಲೆ ಎಲ್ಲರಿಗೂ ತಿಳಿದಿದೆ. ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್​ ಗುಡ್ ನ್ಯೂಸ್ ಕೊಟ್ಟಿದ್ದರು. ಪತಿ ನಿಕ್​ ಜೋನಸ್​ ಜೊತೆ ಸೇರಿ ಅವರು ಈ ಖುಷಿಯ ವಿಚಾರವನ್ನು ಅಭಿಮಾನಿಗಳೊಂದಿಗೆ ಜನವರಿ 21ರಂದು ತಮ್ಮ ಇನ್‌ಸ್ಟಾಗ್ರಾಮ್ (Instagram post) ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದರು. ಸರೋಗಸಿ (Surrogacy) ಮೂಲಕ ಮಗು ಪಡೆಯುವ ಪ್ರಿಯಾಂಕಾ ಚೋಪ್ರಾ ನಿರ್ಧಾರದ (Decision) ವಿರುದ್ಧ ಹಲವು ಟೀಕೆ ಟಿಪ್ಪಣಿಗಳು ವ್ಯಕ್ತವಾಗಿದ್ದವು.

ಗೌಪ್ಯತೆಗೆ ಪ್ರಿಯಾಂಕ ಮನವಿ
ಸೆಲೆಬ್ರಿಟಿ ದಂಪತಿ ಒಮ್ಮೆಲೆ ಗುಡ್ ನ್ಯೂಸ್ ತಿಳಿಸಿದ್ದರಿಂದ ಅಭಿಮಾನಿಗಳಿಗೆ ಅಚ್ಚರಿ ಆಯಿತು. ತಂದೆ-ತಾಯಿ ಆಗಿರುವ ನಿಕ್​ ಜೋನಸ್​-ಪ್ರಿಯಾಂಕಾ ಚೋಪ್ರಾ ಅವರಿಗೆ ಬಾಲಿವುಡ್, ಹಾಲಿವುಡ್ ಕಲಾವಿದರು, ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಈ ವಿಶೇಷ ಸಮಯದಲ್ಲಿ ನಾವು ನಮ್ಮ ಕುಟುಂಬದ ಮೇಲೆ ಕೇಂದ್ರೀಕರಿಸಲು ನಾವು ಗೌಪ್ಯತೆ ಕಾಪಾಡುವ ಸಹಕರಿಸಿ ಅಂತಾ ಪ್ರಿಯಾಂಕಾ ತಮ್ಮ ಪೋಸ್ಟ್‌ನಲ್ಲಿ ಕೇಳಿಕೊಂಡಿದ್ದರು.

ಆದರೆ ಮಗುವಿನ ಜನನದ ಕುರಿತು ಅನೇಕ ವಿವರಗಳನ್ನು ಈ ದಂಪತಿ ಮುಚ್ಚಿಟ್ಟಿದ್ದಾರೆ. ಜನಿಸಿರುವ ಮಗು ಗಂಡು ಅಥವಾ ಹೆಣ್ಣು ಎಂಬುದನ್ನು ಸಹ ತಿಳಿಸಿಲ್ಲ. ಈ ಎಲ್ಲಾ ಬೆಳವಣಿಗೆ ನಡುವೆ ಹೊಸದೊಂದು ಗಾಸಿಪ್ ಶುರುವಾಗಿದೆ. ಮಗುವಿನ ಆರೋಗ್ಯದ ಕುರಿತು ಈಗ ಕೆಲವು ಅನುಮಾನ ಮೂಡತೊಡಗಿದೆ. ಕೆಲವು ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿವೆ. ಅವಧಿಗಿಂತಲೂ ಮುನ್ನ ಪ್ರಿಯಾಂಕಾ ಮಗು ಜನಿಸಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Priyanka Chopra ತಾಯಿಯಾಗುತ್ತಿದ್ದಂತೆ “surrogacy” ಪದದ ಹುಡುಕಾಟ ನಡೆಸಿದ ನೆಟ್ಟಿಗರು

ಅವಧಿಪೂರ್ವ ಮಗು ಎಂದು ವರದಿ
ಕೆಲವು ಸಂದರ್ಭದಲ್ಲಿ ತಾಯಿ ಗರ್ಭದಿಂದ ಮಗು ಅವಧಿಪೂರ್ವವಾಗಿ ಹೊರ ಜಗತ್ತಿಗೆ ಬಂದು ಬಿಡುತ್ತದೆ. ಪ್ರಿಯಾಂಕಾ ದಂಪತಿ ವಿಚಾರದಲ್ಲೂ ಇದೇ ಆಗಿದ್ದು. ಹೌದು, ಪ್ರಿಯಾಂಕಾ ಮತ್ತು ನಿಕ್‌ಗೆ ಹೆಣ್ಣು ಮಗು 12 ವಾರಗಳ ಮುಂಚೆಯೇ ಜನಿಸಿದೆ. ಇದು ಅವಧಿಪೂರ್ವ ಮಗು ಆಗಿದ್ದು 6 ತಿಂಗಳಿಗೆ ಹುಟ್ಟಿದೆ ಎಂದು ‘ಡೈಲಿ ಮೇಲ್​’ ವರದಿ ಮಾಡಿದೆ. ದಕ್ಷಿಣ ಕ್ಯಾಲಿಫೋರ್ನಿಯಾದ ಲಾಸ್​ ಏಂಜಲೀಸ್​ ಹೊರವಲಯದಲ್ಲಿರುವ ಆಸ್ಪತ್ರೆಯೊಂದರಲ್ಲಿ ಮಗು ಜನಿಸಿದ್ದು, ವಿಶೇಷ ಆರೈಕೆಯೊಂದಿಗೆ ಮಗು ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕವಷ್ಟೇ ಆಸ್ಪತ್ರೆಯಿಂದ ಹೊರಬರಲಿದ್ದಾರೆ ಎಂದು ಸುದ್ದಿ ಮೂಲಗಳು ಹೇಳಿವೆ.

ಸ್ವತಃ ಗರ್ಭ ಧರಿಸಲು ಪ್ರಿಯಾಂಕಾ ಚೋಪ್ರಾ ಅವರಿಗೆ ದೈಹಿಕವಾಗಿ ಯಾವುದೇ ಸಮಸ್ಯೆಗಳು ಇರಲಿಲ್ಲ. ಪ್ರಿಯಾಂಕ ಮತ್ತು ನಿಕ್ ದಂಪತಿಗಳು ಬಹಳ ಸಮಯದಿಂದ ಮಗುವನ್ನು ಪಡೆಯಲು ಬಯಸಿದ್ದರು ಸಹ ಅವರ ಬ್ಯುಸಿ ಶೆಡ್ಯೂಲ್‌ನಿಂದ ಇದು ಸಾಧ್ಯವಾಗಿರಲಿಲ್ಲ. ಹೀಗಾಗಿ ಬಾಡಿಗೆ ತಾಯಿ ಮೂಲಕ ಮಗು ಪಡೆಯಲು SoCal ಏಜೆನ್ಸಿಯನ್ನು ಸಂಪರ್ಕಿಸಿದ್ದರು. ಪ್ರಿಯಾಂಕಾ ಸಂಪರ್ಕ ಮಾಡಿದ್ದ ಈ ಮಹಿಳೆಯದ್ದು ಐದನೇ ಬಾಡಿಗೆ ತಾಯ್ತನ ಎಂದು ಡೈಲಿಮೇಲ್ ಡಾಟ್ ಕಾಮ್‌ ವರದಿ ಹೇಳಿವೆ.

ದಂಪತಿಗೆ ಚಿಂತೆ ಶುರು
ಬಾಡಿಗೆ ತಾಯಿಯು ಏಪ್ರಿಲ್​ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ಅದಕ್ಕಾಗಿ ಪ್ರಿಯಾಂಕಾ ಮತ್ತು ನಿಕ್​ ಆ ತಿಂಗಳಲ್ಲಿ ಯಾವುದೇ ಕೆಲಸಗಳನ್ನೂ ಒಪ್ಪಿಕೊಳ್ಳದೇ ಬಿಡುವು ಮಾಡಿಕೊಳ್ಳಲು ನಿರ್ಧರಿಸಿದ್ದರು. ಆದರೆ ಮೂರು ತಿಂಗಳು ಮುಂಚಿತವಾಗಿ ಅಂದರೆ ಆರು ತಿಂಗಳಿಗೆ ಈ ಮಗು ಜನಿಸಿದೆ. ಇದೊಂದು ಪ್ರೀ-ಮೆಚ್ಯೂರ್​ ಮಗುವಾಗಿದ್ದು, ಅದರ ಆರೋಗ್ಯದ ಬಗ್ಗೆ ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್​ ದಂಪತಿಗೆ ಚಿಂತೆ ಶುರುವಾಗಿದೆ ಎಂದು ವರದಿ ಆಗಿದೆ.

ಇದನ್ನೂ ಓದಿ: Priyanka Chopra: ಬದಲಾದ Surname ಕುರಿತ ಊಹಾಪೋಹಗಳಿಗೆ ಫುಲ್ ಸ್ಟಾಪ್ ಇಟ್ಟ ಪ್ರಿಯಾಂಕಾ ಚೋಪ್ರಾ

ಮಗು ಜನಿಸಿದೆ ಎಂಬ ವಿಷಯವನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡ ಪ್ರಿಯಾಂಕಾ-ನಿಕ್​ ದಂಪತಿಯು ಮಗುವಿನ ಫೋಟೋ, ಹೆಣ್ಣು, ಗಂಡು ಯಾವ ವಿಚಾರಗಳನ್ನು ಬಿಟ್ಟು ಕೊಟ್ಟಿರಲಿಲ್ಲ. ಹೀಗಾಗಿ ಈ ರೀತಿಯ ಗುಸು ಗುಸು ಶುರುವಾಗಿದ್ದು ಈ ಬಗ್ಗೆ ಪ್ರಿಯಾಂಕಾ ದಂಪತಿಗಳೇ ಸ್ಪಷ್ಟನೆ ನೀಡಬೇಕು. ಅದೇನೇ ಆಗಲಿ ಪ್ರಿಯಾಂಕಾ ದಂಪತಿಯ ಮಗು ಆರೋಗ್ಯವಾಗಿ ಆಸ್ಪತ್ರೆಯಿಂದ ಹೊರಬರಲಿ ಎಂಬುದಷ್ಟೇ ನಮ್ಮ ಆಶಯ
Published by:vanithasanjevani vanithasanjevani
First published: