ಪ್ರಿಯಕರನಿ​ಗಾಗಿ ಸಮುದ್ರ ತಟದಲ್ಲಿ ನೂರು ಕೋಟಿ ಕೊಟ್ಟು ಮನೆ ಖರೀದಿಸಿದ್ದಾರಾ ಪ್ರಿಯಾಂಕಾ ಚೋಪ್ರಾ?

news18
Updated:June 26, 2018, 11:37 AM IST
ಪ್ರಿಯಕರನಿ​ಗಾಗಿ ಸಮುದ್ರ ತಟದಲ್ಲಿ ನೂರು ಕೋಟಿ ಕೊಟ್ಟು ಮನೆ ಖರೀದಿಸಿದ್ದಾರಾ ಪ್ರಿಯಾಂಕಾ ಚೋಪ್ರಾ?
news18
Updated: June 26, 2018, 11:37 AM IST
Loading...
ನ್ಯೂಸ್​ 18 ಕನ್ನಡ 


ಹಾಲಿವುಡ್​ಗೆ ಹಾರಿದ್ದೇ ತಡ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರ ಲೆವೆಲ್ಲೇ ಬೇರೆಯಾಗಿದೆ. ಸದ್ಯ ಪಿಗ್ಗಿ ಲೈಫ್​ಸ್ಟೈಲ್ ಯಾವ ಹಾಲಿವುಡ್ ನಟಿಗೂ ಕಮ್ಮಿಯಿಲ್ಲದಂತಾಗಿದೆ. ಅದು ಹೇಗೆ ಅಂತೀರಾ? ಆ ಕುರಿತ ಒಂದು ವರದಿ ಇಲ್ಲಿದೆ ಓದಿ.


ಬಾಲಿವುಡ್‍ನಿಂದ ಹಾಲಿವುಡ್‍ನತ್ತ ಪಿಗ್ಗಿ ಕ್ಯಾಟ್‍ವಾಕ್ ಮಾಡಿಕೊಂಡು ಹೋಗಿದ್ದೇ ಯಾವ ಹಾಲಿವುಡ್ ನಟಿಗೂ ಕಮ್ಮಿಯಿಲ್ಲದಂತೆ ಜೀವನ ನಡೆಸುತ್ತಿದ್ದರಂತೆ. ಅದಕ್ಕೆಉದಾಹರಣೆ ಅಂದರೆ ಹಾಲಿವುಡ್ ನಟ ನಿಕ್ ಜೋನಸ್ ಜೊತೆ ಲಿವಿಂಗ್ ರಿಲೇಷನ್‍ಶಿಪ್‍ನಲ್ಲಿರೋ ಗಾಳಿ ಸುದ್ದಿ ಹರಿಡಿರೋದು.


ಕಳೆದ ಕೆಲವು ವಾರಗಳಿಂದ ಹಾಲಿವುಡ್‍ನ ಸುರಸುಂದರಾಂಗ ನಟ ನಿಕ್ ಜೋನಸ್ ಜೊತೆ ಪಿಗ್ಗಿ ಡೇಟಿಂಗ್‍ನಲ್ಲಿರೋದು ಗುಟ್ಟಾಗಿ ಉಳಿದಿಲ್ಲ. ಇಬ್ಬರು ಜೊತೆಯಾಗಿ ಸುತ್ತಾಡೋ ಫೋಟೋಗಳು ಕೂಡ ಇದಕ್ಕೆ ಸಾಕ್ಷಿಯನ್ನ ಒದಗಿಸಿವೆ.
Priyanka Chopra and Nick Jonas snapped post dinner at #Bandra #mumbai #manavmanglani


A post shared by Manav Manglani (@manav.manglani) on


ಸದ್ಯ ಪಿಗ್ಗಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ನಿಕ್ ಜೊತೆ ಸಮಯ ಕಳೆಯಲೆಂದೆ ಮುಂಬೈನಲ್ಲಿ ಬಂಗಲೆ ಒಂದನ್ನ ಖರೀದಿ ಮಾಡಿದ್ದಾರಂತೆ. ಸಮುದ್ರ ತಟಕ್ಕೆ ಹತ್ತಿರವಾಗಿರೋ ಈ ಮನೆ ಗಂಧರ್ವ ಲೋಕದಂತಿದ್ದು, ಇದರ ವೆಚ್ಚ ಬರೋಬ್ಬರಿ ನೂರು ಕೋಟಿ ಅನ್ನೋದು ಬಾಲಿವುಡ್‍ನ ಬಿಸಿ ಬಿಸಿ  ಸುದ್ದಿಯಾಗಿದೆ.


ಇತ್ತೀಚೆಗೆ ಈ ಮನೆಯ ಗೃಹಪ್ರವೇಶವಾಗಿದ್ದು, ನಿಕ್ ಜೋನಸ್ ಸಹ ಈ ಶುಭ ಸಂಧರ್ಭದಲ್ಲಿ ಪಿಗ್ಗಿಗೆ ಜೊತೆಯಾಗಿದ್ದರಂತೆ. ಪ್ರಿಯಾಂಕಾ ಚೋಪ್ರಾ ಈಗ ಡೇಟಿಂಗ್ ಮೂಡ್‍ನಲ್ಲಿದ್ದು, ನಿಕ್ ಜೊತೆ ಈ ಮನೆಯಲ್ಲಿ ಕೆಲವು ವಾರಗಳ ಕಾಲ ಜೊತೆ ಇರುತ್ತಾರೆ ಅನ್ನೋದು ಬಿ-ಟೌನ್‍ನ ಹಾಟ್ ನ್ಯೂಸ್ ಆಗಿ ಹರಿದಾಡುತ್ತಿದೆ. ಆದ್ರೆ ಪ್ರಿಯಾಂಕಾ ಈಗ ತಮ್ಮ ವೃತ್ತಿಯಿಂದಾಗಿ ಸಂಪೂರ್ಣವಾಗಿ ಹಾಲಿವುಡ್‍ನತ್ತಲೇ ನೆಟ್ಟಿದ್ದಾರೆ.


ಇನ್ನು ನಿಕ್ ಕೂಡ ಹಾಲಿವುಡ್ ನಟ. ಹೀಗಾಗಿ ಇವರಿಬ್ಬರು ಮುಂಬೈನಲ್ಲೇಕೆ ವಾಸಿಸುತ್ತಾರೆ, ಒಂದು ವೇಳೆ ಮನೆ ಖರೀದಿಸುವುದಾದರೆ, ಯುಎಸ್‍ನಲ್ಲಿ ಖರೀದಿಸಬೇಕು ಅನ್ನೋದು ಕೆಲವರ ವಾದ. ಒಟ್ಟಾರೆ ಯಾವುದ ನಿಜವೋ? ಯಾವುದೋ ಸುಳ್ಳೋ ? ಪ್ರಿಯಾಂಕಾ ಮಾತ್ರ ಕಳೆದ ಕೆಲವು ವಾರಗಳಿಂದ ಬೇರೆ ಬೇರೆ ವಿಷಯಕ್ಕೆ 24 ಗಂಟೆ ಸುದ್ದಿಯಾಗುತ್ತಲೇ ಇದ್ದಾರೆ ಅನ್ನೋದಂತು ಸತ್ಯ.
First published:June 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...