ಮದುವೆ ಆದ್ಮೇಲೂ ಕಮ್ಮಿಯಾಗಿಲ್ಲ ಡಿಮ್ಯಾಂಡ್: ಪ್ರಿಯಾಮಣಿ ಕೈಯಲ್ಲಿ ಸಾಲು ಸಾಲು ಸಿನಿಮಾಗಳು !

ಸಿನಿಮಾರಂಗದಲ್ಲಿ ಈ ನಟಿ ಮಣಿಯರು ಅಂದ್ರೆ ಮದುವೆವರೆಗೂ ಮಾತ್ರ ಕ್ರೇಜ್​. ಆಮೇಲೆ ಅವರನ್ನ ಯಾರೂ ಕೇಳೋರಿರಲ್ಲ ಅನ್ನೋ ಮಾತಿದೆ. ರಿಸೆಂಟ್ ಆಗಿ ನಟಿ ಸಮಂತಾ ಕೂಡ ಇದೇ ಮಾತನ್ನ ಹೇಳಿಕೊಂಡಿದ್ರು. ಆದರೆ ನಟಿ ಪ್ರಿಯಾಮಣಿ ಮಾತ್ರ ಹೇಳೋದೇ ಬೇರೆ...!

Anitha E | news18
Updated:June 29, 2019, 5:23 PM IST
ಮದುವೆ ಆದ್ಮೇಲೂ ಕಮ್ಮಿಯಾಗಿಲ್ಲ ಡಿಮ್ಯಾಂಡ್: ಪ್ರಿಯಾಮಣಿ ಕೈಯಲ್ಲಿ ಸಾಲು ಸಾಲು ಸಿನಿಮಾಗಳು !
ನಟಿ ಪ್ರಿಯಾ ಮಣಿ
  • News18
  • Last Updated: June 29, 2019, 5:23 PM IST
  • Share this:
ಮದುವೆ ಆದ್ಮೇಲೆ ಹೀರೋಯಿನ್ಸ್‍ಗೆ ಆಫರ್ ಕಮ್ಮಿಯಾಗುತ್ತೆ ಅನ್ನೋ ಮಾತಿದೆ. ಇದಕ್ಕೆ ದನಿಗೂಡಿಸುವಂತೆ ಇತ್ತೀಚೆಗಷ್ಟೆ ಟಾಲಿವುಡ್ ನಟಿ ಸಮಂತಾ ಮದುವೆ ಆದ ಮೇಲೆ ನನಗೆ ಅವಕಾಶಗಳು ಬರ್ತಿಲ್ಲ ಅಂತೇಳಿಕೊಂಡಿದ್ರು. ಆದರೆ ಈ ಮಾತನ್ನ ನಟಿ ಪ್ರಿಯಾಮಣಿ ಒಪ್ಪೋದೇ ಇಲ್ಲ. ನಂಗೆ ಮದುವೆಗೆ ಮುಂಚೆಗಿಂತ ಈಗಲೇ ಹೆಚ್ಚು ಅವಕಾಶಗಳು ಬರ್ತಿವೆ ಅಂತಾರೆ.

ಹೌದು, ಸಿನಿಮಾರಂಗದಲ್ಲಿ ಈ ನಟಿ ಮಣಿಯರು ಅಂದ್ರೆ ಮದುವೆವರೆಗೂ ಮಾತ್ರ ಕ್ರೇಜ್​. ಆಮೇಲೆ ಅವರನ್ನ ಯಾರೂ ಕೇಳೋರಿರಲ್ಲ ಅನ್ನೋ ಮಾತಿದೆ. ರಿಸೆಂಟ್ ಆಗಿ ನಟಿ ಸಮಂತಾ ಕೂಡ ಇದೇ ಮಾತನ್ನ ಹೇಳಿಕೊಂಡಿದ್ರು.

 


ನಟಿ ಪ್ರಿಯಾಮಣಿ ಮಾತ್ರ ಇದಕ್ಕೆ ಅಪವಾದ. ಪುನೀತ್, ಗಣಿ ಸೇರಿದಂತೆ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿರೋ ಪ್ರಿಯಾಮಣಿಗೆ ಮದುವೆ ಆದ ಮೇಲೂ ಸಖತ್ ಡಿಮ್ಯಾಂಡ್ ಇದೆಯಂತೆ. ಈಗ ಅವರ ಕೈಯಲ್ಲಿ ನಾಲ್ಕಾರು ಸಿನಿಮಾಗಳಿರೋದಯಂತೆ.

ಇದನ್ನೂ ಓದಿ: Rashmika Mandanna: ಸಿನಿಮಾ ಆರಂಭಕ್ಕೂ ಮೊದಲೇ ಕೋಟಿಗೆ ಮಾರಾಟವಾಯ್ತು ರಶ್ಮಿಕಾರ ಚಿತ್ರದ ಪ್ರಸಾರ ಹಕ್ಕು​

ಅಂದಹಾಗೆ ಪ್ರಿಯಾಮಣಿ ಸದ್ಯ, 'ನನ್ನ ಪ್ರಕಾರ' ಸಿನಿಮಾದಲ್ಲಿ ಅಭಿನಯಿಸಿದ್ದು, ಅದು ರಿಲೀಸ್‍ಗೆ ರೆಡಿಯಿದೆ. ಅದರ ಜೊತೆ 'ಡಾಕ್ಟರ್ 56' ಚಿತ್ರ ಸಹ ಸಜ್ಜಾಗ್ತಿದ್ದು, 'ಶ್ರೀ ವೆನ್ನೆಲಾ' ಎಂಬ ತೆಲುಗು ಸಿನಿಮಾದ ಶೂಟಿಂಗ್ ನಡೀತಿದೆ. ಇದಲ್ಲದೆ ಇನ್ನೊಂದಿಷ್ಟು ಚಿತ್ರಗಳು ಮಾತುಕತೆಯ ಹಂತದಲ್ಲಿವೆಯಂತೆ.. ಅಲ್ಲಿಗೆ ಮದುವೆ ನಂತರವೂ ಪ್ರಿಯಾಮಣಿ ಬೇಡಿಕೆ ಕಮ್ಮಿಯಾಗಿಲ್ಲ ಅನ್ನಬಹುದು.

 

DBoss Darshan: ರಾಬರ್ಟ್​ ಚಿತ್ರೀಕರಣದ ನಡುವೆ ಧರ್ಮಸ್ಥಳಕ್ಕೆ ಭೇಟಿ ನೀಡಿದ ದರ್ಶನ್​


First published:June 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ