ಜಯಲಲಿತಾ ಬಯೋಪಿಕ್​ನಲ್ಲಿ ಪ್ರಾಣ ಸ್ನೇಹಿತೆ ಶಶಿಕಲಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸ್ಯಾಂಡಲ್​​ವುಡ್​ನ ಈ ನಟಿ

ಈಗಾಗಲೇ ಪರುತ್ತಿವೀರನ್ ಚಿತ್ರದ ಮನೋಜ್ಞ ಅಭಿನಯದ ಮೂಲಕ ರಾಷ್ಟ್ರಪ್ರಶಸ್ತಿ ಗೆದ್ದಿರುವ ಕನ್ನಡತಿ ಈ ಬಾರಿ ಕೂಡ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

zahir | news18-kannada
Updated:December 6, 2019, 2:19 PM IST
ಜಯಲಲಿತಾ ಬಯೋಪಿಕ್​ನಲ್ಲಿ ಪ್ರಾಣ ಸ್ನೇಹಿತೆ ಶಶಿಕಲಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸ್ಯಾಂಡಲ್​​ವುಡ್​ನ ಈ ನಟಿ
jayalalitha-sasikala
  • Share this:
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಬಯೋಪಿಕ್‌ 'ತಲೈವಿ' ಚಿತ್ರದಲ್ಲಿ ಬಾಲಿವುಡ್‌ ನಟಿ ಕಂಗನಾ ರಣೌತ್‌ ನಟಿಸುತ್ತಿರುವುದು ಗೊತ್ತಿರುವ ವಿಷಯ. ಆದರೆ, ಜಯಲಲಿತಾ ಅವರ ಬದುಕಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಶಶಿಕಲಾ ಅವರ ರೋಲ್​​ನಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆಯೊಂದು ಕಾಲಿವುಡ್​ ಅಂಗಳದಲ್ಲಿತ್ತು. ಈ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

ಹೌದು, ತಮಿಳರ ಪಾಲಿನ ಅಮ್ಮನ ಸ್ನೇಹಿತೆ ಚಿನ್ನಮ್ಮ(ಶಶಿಕಲಾ) ಪಾತ್ರದಲ್ಲಿ ಸ್ಯಾಂಡಲ್​ವುಡ್ ನಟಿ ಪ್ರಿಯಾಮಣಿ ಅಭಿನಯಿಸಲಿದ್ದಾರೆ. ತಮಿಳುನಾಡು ರಾಜಕೀಯದಲ್ಲಿ ಪ್ರಮುಖ ಪಾತ್ರವಹಿಸಿದ್ದ ಶಶಿಕಲಾ ಅವರ ರೋಲ್​ ಅನ್ನು ಪ್ರಿಯಾ ಚಾಲೆಂಜ್ ಆಗಿ ಸ್ವೀಕರಿಸಿದ್ದಾರೆ.

ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಬರಲಿರುವ 'ತಲೈವಿ' ಪ್ರಿಯಾಮಣಿ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಲಿರುವುದಂತು ದಿಟ. ಈಗಾಗಲೇ 'ಪರುತ್ತಿವೀರನ್' ಚಿತ್ರದ ಮನೋಜ್ಞ ಅಭಿನಯದ ಮೂಲಕ ರಾಷ್ಟ್ರಪ್ರಶಸ್ತಿ ಗೆದ್ದಿರುವ ಕನ್ನಡತಿ ಈ ಬಾರಿ ಕೂಡ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

Actress Priya Mani
ನಟಿ ಪ್ರಿಯಾ ಮಣಿ


ಕನ್ನಡದಲ್ಲಿ ಕೊನೆಯ ಬಾರಿ ಪ್ರಿಯಾಮಣಿ 'ನನ್ನ ಪ್ರಕಾರ' ಸಿನಿಮಾದಲ್ಲಿ ವೈದ್ಯೆ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾದ ಅಭಿನಯಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು. ಇದೀಗ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಪ್ಯಾನ್ ಇಂಡಿಯಾ ಸಿನಿರಸಿಕರನ್ನು ಮನಗೆಲ್ಲಲು ಸ್ಯಾಂಡಲ್​ವುಡ್ ನಟಿ ಸಿದ್ಧರಾಗುತ್ತಿದ್ದಾರೆ.

ಇದನ್ನೂ ಓದಿ: ಡಿಸೆಂಬರ್ ತಿಂಗಳಲ್ಲಿ ಸಿನಿಪ್ರಿಯರಿಗೆ ಪ್ಯಾನ್ ಇಂಡಿಯಾ ಸಿನಿಮಾ ಸುಗ್ಗಿ

ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಮೇಲೆ ತಮಿಳಿಗರಿಗೆ ವಿಶೇಷವಾದ ಪೂಜ್ಯನೀಯ ಭಾವನೆ. ಅವರು ಸಾವನ್ನಪ್ಪಿ ಮೂರು ವರ್ಷಗಳೆದರೂ ಆ ಭಾವನೆ ಅಚ್ಚಳಿಯದಂತೆ ಉಳಿದಿದೆ. ಇಂದಿಗೂ ಕೂಡ ಅಮ್ಮ ಎಂದೇ ತಮಿಳಿಗರು ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದ ಜಯಲಲಿತಾಗಾಗಿ ದೇವಸ್ಥಾನವನ್ನು ಕಟ್ಟಿ ಪೂಜೆ ಮಾಡಲಾಗುತ್ತದೆ. ಜಯಲಲಿತಾ ಅವರ ಉತ್ತರಾಧಿಕಾರಿ ತಮಿಳುನಾಡು ರಾಜಕೀಯದಲ್ಲಿ ಅವರು ಬಿಂಬಿತರಾಗಿದ್ದ ಶಶಿಕಲಾ ಅವರು ಸದ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇವರುಗಳ ಸಿನಿಪಯಣ-ರಾಜಕೀಯ ಕಥೆಯನ್ನು ನಿರ್ದೇಶಕ ವಿಜಯ್ ಬೆಳ್ಳಿಪರದೆ ಮೇಲೆ ತೋರಿಸುವ ಪ್ರಯತ್ನದಲ್ಲಿದ್ದಾರೆ.ಇದನ್ನೂ ಓದಿ: ಮುಗಿಲ್​​ಪೇಟೆಯ ಮೂಗುತಿ ಸುಂದರಿ ಇವರೇ ನೋಡಿ

First published: December 6, 2019, 8:26 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading