Priya Varrier: ನೆಟ್ಟಿಗರನ್ನು ತರಾಟೆಗೆ ತೆಗೆದುಕೊಂಡ ಪ್ರಿಯಾ ಪ್ರಕಾಶ್​ ವಾರಿಯರ್​ ಸಿಟ್ಟಾಗಿದ್ದೇಕೆ ಗೊತ್ತಾ..?

ಪ್ರಿಯಾ ಪ್ರಕಾಶ್ ವಾರಿಯರ್ ಅವರ ಪುಟ್ಟ ವಿಡಿಯೋ ತುಣುಕು ಅವರಿಗೆ ರಾತ್ರೋರಾತ್ರಿ ಸ್ಟಾರ್ ಪಟ್ಟ ತಂದುಕೊಟ್ಟಿತ್ತು. ಆದರೆ ಈಗ ಇದೇ ನಟಿಯ ಮತ್ತೊಂದು ವಿಡಿಯೋ ನಟಿಗೆ ಸಿಟ್ಟು ತರಿಸಿದೆ. ಹೌದು, ತಮ್ಮ ವಿಡಿಯೋ ಶೇರ್ ಮಾಡುತ್ತಿರುವ ಕೆಲ ನೆಟ್ಟಿಗರು ಹಾಗೂ ಮಾಧ್ಯಮದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಪ್ರಿಯಾ ವಾರಿಯರ್​.

ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್​ ವಾರಿಯರ್​

ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್​ ವಾರಿಯರ್​

  • Share this:
ರಾತ್ರೋರಾತ್ರಿ ಸ್ಟಾರ್​ ​ ಆದ ಮಾಲೆಯಾಳಂನ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್​ ಕಳೆದ ಕೆಲವು ದಿನಗಳಿಂದ ವಿದೇಶದಲ್ಲಿ ಸ್ನೇಹಿತರೊಂದಿಗೆ ಸುತ್ತಾಡುತ್ತಿದ್ದಾರೆ. ಸ್ನೇಹಿತರ ಜೊತೆ ರಷ್ಯಾದಲ್ಲಿ ಫ್ರೆಂಡ್ಸ್ ಜತೆ ಎಂಜಾಯ್​ ಮಾಡುತ್ತಿದ್ದಾರೆ. ರಷ್ಯಾ ಪ್ರವಾಸದಲ್ಲಿರುವ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಪ್ರವಾಸದ ಸಾಕಷ್ಟು ವಿಡಿಯೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಈ ವಿಡಿಯೋಗಳು ವೈರಲ್​ ಆಗುತ್ತಿವೆ. ಸ್ನೇಹಿತರ ಜೊತೆ ಹಾಡುತ್ತಾ, ಕುಣಿಯುತ್ತಾ ಸಖತ್ತಾಗಿ ಕಾಲ ಕಳೆಯುತ್ತಿದ್ದಾರೆ ಪ್ರಿಯಾ ಪ್ರಕಾಶ್​. ರಷ್ಯಾದ ಮಾಸ್ಕೋದಲ್ಲಿ ತೆಗೆದ ಫೋಟೋವನ್ನು ಪ್ರಿಯಾ ಮೊದಲು ಹಂಚಿಕೊಂಡಿದ್ದು, ನಂತರ ಸಾಲು ಸಾಲು ವಿಡಿಯೋಗಳನ್ನು ಶೇರ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋ ಒಂದರಿಂದಾಗಿ ಪ್ರಿಯಾ ಪ್ರಕಾಶ್​ ಫುಲ್ ಗರಂ ಆಗಿದ್ದಾರೆ. ಪ್ರಿಯಾ ಅವರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಕೆಲ ನೆಟ್ಟಿಗರು ಹಾಗೂ ಕೆಲ ಮಾಧ್ಯಮದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

ಅಷ್ಟಕ್ಕೂ ಪ್ರಿಯಾ ವಾರಿಯರ್ ಅವರು ಸಿಟ್ಟಾಗಲು ಕಾರಣವೇನಂತಿರಾ..? ಅವರ ಪ್ರವಾಸದ ವಿಡಿಯೋಗಳನ್ನು ಹಂಚಿಕೊಂಡಿದ್ದರೆ ಪ್ರಿಯಾ ಪ್ರಕಾಶ್ ವಾರಿಯರ್ ಅವರಿಗೆ ಕೋಪ ಬರುತ್ತಿರಲಿಲ್ಲ.  ಪ್ರಿಯಾ ಅವರು ಸ್ನೇಹಿತರ ಜೊತೆಗಿರುವ ವಿಡಿಯೋಗೆ ಕೊಡುತ್ತಿರುವ ಶೀರ್ಷಿಕೆಯಿಂದಾಗಿ ಪ್ರಿಯಾ ಪ್ರಕಾಶ್ ಅವರಿಗೆ ಕೋಪ ಬಂದಿದೆ.












ಅಷ್ಟಕ್ಕೂ ಆಗಿರುವುದಾದರೂ ಏನು ಅಂತೀರಾ..? ಪ್ರಿಯಾ ಪ್ರಕಾಶ್​ ಅವರ ಕೆಲವು ವಿಡಿಯೋಗಳ ತುಣುಕುಗಳನ್ನುಕತ್ತರಿಸಿ, ಜೋಡಿಸಿ ಅದಕ್ಕೆ ತಪ್ಪಾಗಿ ಶೀರ್ಷಿಕೆ ಕೊಟ್ಟು ಪೋಸ್ಟ್​ ಮಾಡಲಾಗುತ್ತಿದೆಯಂತೆ. ಅದರಲ್ಲೂ ಪ್ರಿಯಾ ಪ್ರಕಾಶ್ ಅವರು ತಮ್ಮ ಪ್ರೀತಿಯ​ ಬಗ್ಗೆ ಬಹಿರಂಗಪಡಿಸಿದ್ದಾರೆ ಎಂದೆಲ್ಲ ಬರೆದು ಪೋಸ್ಟ್ ಮಾಡಲಾಗುತ್ತಿದೆಯಂತೆ.

ಇದನ್ನೂ ಓದಿ: Jaggesh: ನಡುರಸ್ತೆಯಲ್ಲಿ ಬೂಟಿನಿಂದ ಹೊಡೆತ ತಿಂದು ಆತ್ಮಹತ್ಯೆಗೆ ಯತ್ನಿಸಿದ್ದ ನಟ ಜಗ್ಗೇಶ್​..!

ತಮ್ಮ ಇನ್​ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಈ ಕುರಿತಾಗಿ ಪ್ರಿಯಾ ಪ್ರಕಾಶ್​ ವಾರಿಯರ್ ಅವರು ಬರೆದುಕೊಂಡಿದ್ದಾರೆ. ನನ್ನ ವಿಡಿಯೋಗಳನ್ನು ಕತ್ತರಿಸಿ ತುಂಡುಗಳಾಗಿ ಪೋಸ್ಟ್​ ಮಾಡುತ್ತಿರುವ ನಿಮ್ಮ ಕಾಳಜಿಯನ್ನು ನಾನು ಮೆಚ್ಚಿಕೊಳ್ಳುತ್ತೇನೆ. ಇದು ಅನಾವಶ್ಯಕ ಚರ್ಚೆಯಾಗಿದ್ದು, ಏನಾದರೂ ಪೋಸ್ಟ್​ ಮಾಡುವುದಾದರೆ ಸರಿಯಾದ ಮಾಹಿತಿ ಹಾಗೂ ಅಧಿಕೃತವಾಗಿದೆಯೇ ಎಂದು ಖಚಿತಪಡಿಸಿಕೊಂಡು ಮಾಡಿ ಎಂದಿದ್ದಾರೆ ಪ್ರಿಯಾ.
ಎಲ್ಲದಕ್ಕಿಂತ ಮುಖ್ಯವಾಗಿ ನಾನು ನನ್ನ ಸ್ನೇಹಿತರ ಜೊತೆ ಏನು ಮಾಡುತ್ತೇನೆ ಹಾಗೂ ನನ್ನ ಜೀವನವನ್ನು ನನ್ನ ವೈಯಕ್ತಿಕ ಆಯ್ಕೆಗಳ ಮೇಲೆ ಜೀವಿಸುತ್ತೇನೆ. ಹೀಗಾಗಿ ನಿಮ್ಮ ಅಭಿಪ್ರಾಯಗಳನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ ಎಂದು ಖಾರವಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Jaggesh: 10ನೇ ತರಗತಿ ಫಲಿತಾಂಶ: ಪೋಷಕರಿಗೆ ಕಿವಿ ಮಾತು ಹೇಳಿದ ನಟ ಜಗ್ಗೇಶ್​..!

ಪ್ರಿಯಾ ಪ್ರಕಾಶ್ ವಾರಿಯರ್​ ಕಡೆಯದಾಗಿ ನಟಿಸಿದ್ದು ತೆಲುಗಿನ ಚೆಕ್​ ಸಿನಿಮಾ. ಚೆಕ್ ಸಿನಿಮಾದಲ್ಲಿ ನಿತಿನ್ ಜೊತೆ ಪ್ರಿಯಾ ವಾರಿಯರ್​ ಖಳನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇನ್ನು ಮುಂದೆ ಇಷ್ಕ್ ಸಿನಿಮಾದಲ್ಲಿ ಪ್ರಿಯಾ ನಟಿಸುತ್ತಿದ್ದು, ಎಸ್​ ಎಸ್ ರಾಜು ಅವರ ನಿರ್ದೇಶನ ಈ ಸಿನಿಮಾ ಏಪರಿಲ್​ 23ಕ್ಕೆ ರಿಲೀಸ್ ದಿನಾಂಕ ಪ್ರಕಟಿಸಿತ್ತು. ಆದರೆ ಕೊರೋನಾ ಎರಡನೇ ಅಲೆಯಿಂದಾಗಿ ಸಿನಿಮಾ ರಿಲೀಸ್ ದಿನಾಂಕ ಜುಲೈ 30ಕ್ಕೆ ಹೋಗಿದೆ.



ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Anitha E
First published: