ಒಂದು ಜಾಹೀರಾತಿಗೆ ಕೋಟಿ ಪಡೆಯುವ ಕಣ್ ​ಸನ್ನೆ ಹುಡುಗಿ ಪ್ರಿಯಾ!

news18
Updated:July 10, 2018, 5:43 PM IST
ಒಂದು ಜಾಹೀರಾತಿಗೆ ಕೋಟಿ ಪಡೆಯುವ ಕಣ್ ​ಸನ್ನೆ ಹುಡುಗಿ ಪ್ರಿಯಾ!
news18
Updated: July 10, 2018, 5:43 PM IST
ನ್ಯೂಸ್​ 18 ಕನ್ನಡ 

ಕೇವಲ ಕಣ್ಣು ಹೊಡೆದೆ ರಾತ್ರೋರಾತ್ರಿ ಸೂಪರ್​ ಸ್ಟಾರ್​ ಆಗಿದ್ದ ಪ್ರಿಯಾ ವಾರಿಯರ್​ ಯಾರಿಗೆ ಗೊತ್ತಿಲ್ಲ ಹೇಳಿ. ಕೇವಲ ಮಲಯಾಳದ 'ಒರು ಆಡಾರ್ ಲವ್' ಸಿನಿಮಾದ ಹಾಡಿನ ತುಣುಕಿನಿಂದಲೇ ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟೀಸ್ ತನಕ ಎಲ್ಲರಿಗೂ ಪ್ರಿಯಾ ಪ್ರಕಾಶ್ ಚಿರಪರಿಚಿತರಾದವರು.

ಇದಾದ ನಂತರ ಪ್ರಿಯಾಗೆ ಅವಕಾಶಗಳ ಸುರಿ ಮಳೆಯೇ ಆಗಿತ್ತು. ಇನ್​ಸ್ಟಾಗ್ರಾಂನಲ್ಲೂ ಪ್ರಿಯಾ ಪ್ರಕಾಶ್​ ಪ್ರಕಟಿಸುವ ಒಂದು ಪೋಸ್ಟ್​ಗೆ 8 ಲಕ್ಷ ಸಂಭಾವನೆ ಪಡೆಯುತ್ತಿದ್ದರು. ಆದರೆ ಇದಾದ ನಂತರ ಅವರು ಏನು ಮಾಡುತ್ತಿದ್ದಾರೆ ಎಂದು ಎಲ್ಲರೂ ಹುಡುಕಾಟ ನಡೆಸುವಾಗಲೇ ಪ್ರಿಯಾ ಐಪಿಎಲ್​ ಹಾಜೀರಾತಿನಲ್ಲಿ ಕಾಣಿಸಿಕೊಂಡಿದ್ದರು.

ಪ್ರಿಯಾ ಪ್ರಕಾಶ್​ ಅವರ ಇನ್​ಸ್ಟಾಗ್ರಾಂ ಸುದ್ದಿಗಾಗಿ ಈ ಲಿಂಕ್​ ಕ್ಲಿಕ್​ ಮಾಡಿ....

https://kannada.news18.com/news/how-much-priya-warrior-charges-for-an-integrum-post-16269.html

ಇದಾದ ನಂತರ ಈ ಬೆಡಗಿಗೆ ಇತ್ತೀಚೆಗೆ ಒಂದು ಕೋಟಿ ಮೌಲ್ಯದ ಆಫರ್ ಅರಸಿ ಬಂದಿದೆಯಂತೆ. ಹಾಗೆಂದ ಕೂಡಲೇ ಇದು ಯಾವ ಸಿನಿಮಾ ಅವಕಾಶ, ನಾಯಕ ಯಾರು, ಯಾವ ಭಾಷೆಯ ಸಿನಿಮಾ ಎಂದೆಲ್ಲ ಯೋಚಿಸಿ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಕಾರಣ ಇದೇನು ಸಿನಿಮಾ ಅವಕಾಶ ಅಲ್ಲ. ಬದಲಾಗಿ ಇದೊಂದು ರಾಷ್ಟ್ರೀಯ ಜಾಹೀರಾತಿಗಾಗಿ ಪ್ರಿಯಾಗೆ ಸಿಗುತ್ತಿರುವ ದೊಡ್ಡ ಮೊತ್ತ.

ತೆರೆ ಮೇಲೆ ಕೆಲವೇ ಸೆಕೆಂಡ್​ಗಳಷ್ಟೇ ಬಂದು ಹೋಗುವ ಈ ಜಾಹೀರಾತಿಗಾಗಿ ಪ್ರಿಯಾ ಪ್ರಕಾಶ್ ಪರ್ಸಿಗೆ 1 ಕೋಟಿ ಸಂಭಾವನೆ ಜಮಾ ಆಗಲಿದೆ. ಇತ್ತೀಚೆಗಷ್ಟೆ ಈ ರಾಷ್ಟ್ರೀಯ ಜಾಹೀರಾತಿನ ಚಿತ್ರೀಕರಣ ಸಹ ನಡೆದಿದ್ದು, ಇನ್ನೊಂದೇ ಒಂದು ದಿನದ ಶೂಟಿಂಗ್ ಬಾಕಿ ಇದೆಯಷ್ಟೆ.
Loading...

ಜಾಹಿರಾತಿಗೇ 1 ಕೋಟಿ ಪಡೆದಿರೋ ಈ ಲಕ್ಕಿ ಲಡ್ಕಿ ಉಳಿದ ಸಿನಿಮಾಗಳಿಗೆ ಇನ್ನೆಷ್ಟು ಸಂಭಾವನೆ ಪಡೆಯಬಹುದು ಯೋಚನೆ ಮಾಡಿ. ಸದ್ಯ ಬಾಲಿವುಡ್‍ನ ರಣವೀರ್ ಸಿಂಗ್ ಜೊತೆ 'ಸಿಂಬ' ಚಿತ್ರದಲ್ಲೂ ಪ್ರಮುಖ ಪಾತ್ರವನ್ನ ನಿರ್ವಹಿಸುತ್ತಿರೋ ಪ್ರಿಯಾ ಪ್ರಕಾಶ್, ಮತ್ತೊಂದು ಬಿಗ್ ಬಜೆಟ್ ಚಿತ್ರದಲ್ಲೂ ಕಣ್ಣಿನ ಕಮಾಲ್​ ತೋರಿಸಲಿದ್ದಾರೆ.
First published:July 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...