ಪ್ರೇಮಿಗಳ ದಿನಕ್ಕೆ ಕಣ್ಣಲ್ಲೇ ಕಚಗುಳಿ ಇಟ್ಟ ಈ ಬೆಡಗಿಗೆ ಬನ್ಸಾಲಿ ಚಿತ್ರದಲ್ಲಿ ನಟಿಸುವ ಆಸೆಯಂತೆ..!


Updated:February 14, 2018, 11:28 AM IST
ಪ್ರೇಮಿಗಳ ದಿನಕ್ಕೆ ಕಣ್ಣಲ್ಲೇ ಕಚಗುಳಿ ಇಟ್ಟ ಈ ಬೆಡಗಿಗೆ ಬನ್ಸಾಲಿ ಚಿತ್ರದಲ್ಲಿ ನಟಿಸುವ ಆಸೆಯಂತೆ..!
ನಟಿ ಪ್ರಿಯಾ ಪ್ರಕಾಶ್

Updated: February 14, 2018, 11:28 AM IST
-ನ್ಯೂಸ್ 18 ಕನ್ನಡ

ಪ್ರಿಯಾ ಪ್ರಕಾಶ್ ವಾರಿಯರ್.  ಬಹುಶಃ ಇಷ್ಟೊತ್ತಿಗೆ ಪಡ್ಡೆ ಹುಡುಗರ ಬಾಯಲ್ಲಿ ಈ ಹೆಸರು ಗುನುಡುತ್ತಿರುತ್ತದೆ. ಹೌದು, ರಾತ್ರೋರಾತ್ರಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಮಲೆಯಾಳಿ ಬೆಡಗಿ ಈಕೆ.

ಮುಂಬರುವ ಒರು ಆಧಾರ್ ಲವ್ ಮಲೆಯಾಳಿ ಚಿತ್ರದ ಮಾಣಿಕ್ಯ ಮಲರಾಯ ಪೂವಿ ಹಾಡಿನ ದೃಶ್ಯವೊಂದರಲ್ಲಿ ಪ್ರಿಯಾ ನೀಡಿರುವ ಎಕ್ಸ್​ಪ್ರೆಶನ್ ವೈರಲ್ ಆಗಿದೆ. ಯುವಕನ ಕಡೆ ನೋಡಿ ಕಣ್ಣು ಸನ್ನೆ ಮಾಡುವ ನಾಯಕಿ ಕಣ್ ಹೊಡೆದು ಸೆಳೆಯುವ ಆ ದೃಶ್ಯ ಪಡ್ಡೆಗಳ ಎದೆಗೆ ಕಿಚ್ಚು ಹಚ್ಚುತ್ತಿದ್ದು, ಎಲ್ಲೆಡೆ ಶರವೇಗದಲ್ಲಿ ಜನಪ್ರಿಯವಾಗಿದೆ..

ವಾಟ್ಸಾಪ್, ಫೇಸ್ಬುಕ್, ಯೂಟ್ಯೂಬ್ ಎಲ್ಲ ಸಾಮಾಜಿಕ ಜಾಲತಾಣಗಳಲ್ಲೂ  ದೃಶ್ಯ ಹರಿದಾಡುತ್ತಿದ್ದು,  ಪಡ್ಡೆ ಹುಡುಗರು ಪ್ರಿಯಾಳ ನೋಟಕ್ಕೆ ಫುಲ್ ಫಿದಾ ಆಗಿದ್ದಾರೆ. ನಾಳೆ ಪ್ರೇಮಿಗಳ ದಿನವಾಗಿದ್ದು, ಪ್ರೇಮಿಗಳ ದಿನದ ಸನಿಹದಲ್ಲಿ ಈ ದೃಶ್ಯ ಯುವ ಹೃದಯಗಳಿಗೆ ಕಚಗುಳಿ ಇಟ್ಟಿದೆ.

ಈ ಬಗ್ಗೆ ನ್ಯೂಸ್ 18 ಜೊತೆ ಮಾತನಾಡಿರುವ ಪ್ರಿಯಾ, ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಮಲೆಯಾಳಂ, ತಮಿಳು ಮತ್ತು ಬಾಲಿವುಡ್ ಚಿತ್ರರಂಗದಿಂದಲೂ ಆಫರ್ ಬರಲಾರಂಭಿಸಿವೆ. ಆದರೆ, ನನಗೆ ಪದ್ಮಾವತಿ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಚಿತ್ರದಲ್ಲಿ ನಟಿಸುವ ಆಸೆ ಇದೆ ಎಂದು ಹೇಳಿಕೊಂಡಿದ್ದಾರೆ. ನಮ್ಮ ಕುಟುಂಬ, ಶಿಕ್ಷಕರು ಎಲ್ಲರೂ ಈ ದೃಶ್ಯವನ್ನ ಮೆಚ್ಚಿಕೊಂಡಿದ್ದಾರೆ. ಈ ಗೆಲುವನ್ನ ಹೇಗೆ ಅರಗಿಸಿಕೊಳ್ಳುವುದೋ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

 
First published:February 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ