ಕಣ್ಸನ್ನೆ ಬೆಡಗಿ ಪ್ರಿಯಾಗೆ ವಿಜಯ್ ಮೇಲೆ ಲವ್ವಾಗಿದೆಯಂತೆ..!

Priya Prakash Varrier - Vijay Deverakonda : ಒರು ಅಡಾರ್ ಲವ್ ಚಿತ್ರದ ಕಣ್ಸನ್ನೆಯಿಂದಲೇ ವಿಶ್ವ ಪ್ರಸಿದ್ಧಿ ಪಡೆದಿದ್ದ ಪ್ರಿಯಾ ಕೊನೆಗೂ ಲವ್ವಲ್ಲಿ ಬಿದ್ದಿದ್ದಾರೆ.

zahir | news18-kannada
Updated:August 8, 2019, 9:44 PM IST
ಕಣ್ಸನ್ನೆ ಬೆಡಗಿ ಪ್ರಿಯಾಗೆ ವಿಜಯ್ ಮೇಲೆ ಲವ್ವಾಗಿದೆಯಂತೆ..!
Priya Prakash Varrier
  • Share this:
ಒಬ್ಬರು ಕಣ್ಣಲ್ಲೇ ಮೋಡಿ ಮಾಡಿದ ಮದನಾರಿ..ಮತ್ತೊಬ್ಬರು ಸೌತ್ ಸಿನಿಮಾದ ಸೀರಿಯಲ್ ಕಿಸ್ಸರ್..! ಇಬ್ಬರೂ ಜೊತೆಗಿದ್ದರೆ ಅಂತೆ ಕಂತೆ ಹುಟ್ಟಿಕೊಳ್ಳಲು ಕಾರಣಬೇಕೇ. ಈಗ ಆಗಿರುವುದು ಕೂಡ ಅದೇ. ಟಾಲಿವುಡ್​ ರೌಡಿ ವಿಜಯ್ ದೇವರಕೊಂಡ ಜತೆಯಾಗಿ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಜೊತೆಗೂಡಿ ನಿಂತಿರುವ ಫೋಟೋವೊಂದನ್ನು ಮಾಲಿವುಡ್ ನಟಿ ಪ್ರಿಯಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಇಷ್ಟೇ ಆಗಿದ್ರೆ ಏನೂ ಆಗುತ್ತಿರಲಿಲ್ಲ. ಈ ಫೋಟೋಗೆ ಪ್ರಿಯಾ ವಾರಿಯರ್ ನೀಡಿದ ಶೀರ್ಷಿಕೆ ಈಗ ಹೊಸ ಗಾಸಿಪ್​ನ್ನು ಕ್ರಿಯೇಟ್ ಮಾಡಿದೆ. 'ಡಿಯರ್ ಕಾಮ್ರೇಡ್'​ ನಟನೊಂದಿಗಿನ ಚಿತ್ರವನ್ನು ನೀನಂದ್ರೆ ನನಗೆ ತುಂಬಾ ಇಷ್ಟ ಎಂಬ ಟ್ಯಾಗ್​ಲೈನ್​ನೊಂದಿಗೆ ಕಣ್ಸನ್ನೆ ಹುಡುಗಿ ಶೇರ್ ಮಾಡಿಕೊಂಡಿದ್ದಾರೆ.
 View this post on Instagram
 

Nuvvante naaku chala ishtam😋


A post shared by Priya Prakash Varrier💫 (@priya.p.varrier) on


ಈ ಫೋಟೋ ಇದೀಗ ಭಾರೀ ವೈರಲ್ ಆಗಿದ್ದು, ಇದರಿಂದ ನಟಿ ಪ್ರಿಯಾಗೆ 'ಅರ್ಜುನ್ ರೆಡ್ಡಿ'ಯೊಂದಿಗೆ ಲವ್ ಆಗಿದೆ ಎಂಬ ಮಾತುಗಳು ಕೇಳಿ ಬಂದಿವೆ. 'ಒರು ಅಡಾರ್ ಲವ್' ಚಿತ್ರದ ಕಣ್ಸನ್ನೆಯಿಂದಲೇ ವಿಶ್ವ ಪ್ರಸಿದ್ಧಿ ಪಡೆದಿದ್ದ ಪ್ರಿಯಾ ಕೊನೆಗೂ ಲವ್ವಲ್ಲಿ ಬಿದ್ರು..ಪ್ರಿಯಾ ಹಾಗೂ ವಿಜಯ್ ದೇವರಕೊಂಡ ನಡುವೆ ಪ್ರೀತಿ ಮೊಳಕೆ ಹೊಡೆದಿದೆ ಎಂಬ ಗಾಸಿಪ್​ಗಳು ಹರಿದಾಡುತ್ತಿವೆ.

ಆದರೆ ಇದು ಈ ಫೋಟೋ 'ಡಿಯರ್ ಕಾಮ್ರೇಡ್' ಚಿತ್ರೀಕರಣದ ವೇಳೆ ತೆಗೆದುಕೊಂಡ ಫೋಟೋ ಎನ್ನಲಾಗಿದೆ. ಆದರೆ ಇಬ್ಬರ ಭೇಟಿ ಕೂಡ ಹೊಸ ಕುತೂಹಲಕ್ಕೆ ಕಾರಣವಾಗಿದ್ದು, ಕಣ್ಸನ್ನೆ ಬೆಡಗಿ ಹಾಗೂ ವಿಜಯ್ ಟಾಲಿವುಡ್ ಚಿತ್ರದಲ್ಲಿ ಜೊತೆ ಸೇರಲಿದ್ದಾರೆಂಬ ಟಾಕುಗಳು ಕೇಳಿ ಬರುತ್ತಿದೆ.

ಇವೆಲ್ಲದಕ್ಕೂ ಉತ್ತರ ನೀಡಬೇಕಾದ ಪ್ರಿಯಾ ಮಾತ್ರ ನೀನಂದ್ರೆ ನನಗೆ ತುಂಬಾ ಇಷ್ಟ ಎಂದು ಮರೆಯಾಗಿದ್ದಾರೆ. ಒಟ್ಟಿನಲ್ಲಿ ಒಂದಷ್ಟು ದಿನಗಳ ಕಾಲ ಮರೆಯಾಗಿದ್ದ ಪ್ರಿಯಾ ಫೋಟೋವೊಂದರ ಮೂಲಕ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಹಲ್​ಚಲ್ ಎಬ್ಬಿಸಿದ್ದಾರೆ.

ಇದನ್ನೂ ಓದಿ: K.G.F Chapter 2: ರಾಕಿ ಭಾಯ್ ಅಡ್ಡಾಗೆ ಎಂಟ್ರಿ ಕೊಟ್ಟ ಕಾಲಿವುಡ್ ಯುವನಟ..!

First published:August 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ