Priya Varrier: ವೈರಲ್​ ಆಗುತ್ತಿದೆ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್​ ಹೊಸ ಕಿಸ್ಸಿಂಗ್​ ವಿಡಿಯೋ

Priya Varrier: ಮತ್ತೆ ಸದ್ದು ಮಾಡುತ್ತಿದ್ದಾರೆ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್​. ತಮ್ಮದೇ ಕಿಸ್ಸಿಂಗ್​ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ಪ್ರಿಯಾಗೆ ಅಭಿಮಾನಿಗಳು ಬುದ್ಧಿ ಹೇಳುವಂತಾಗಿದೆ.

Anitha E | news18
Updated:July 24, 2019, 3:23 PM IST
Priya Varrier: ವೈರಲ್​ ಆಗುತ್ತಿದೆ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್​ ಹೊಸ ಕಿಸ್ಸಿಂಗ್​ ವಿಡಿಯೋ
ಕಿಸ್ಸಿಂಗ್​ ವಿಡಿಯೋದಲ್ಲಿ ಪ್ರಿಯಾ ಪ್ರಕಾಶ್​​ ವಾರಿಯರ್ ​
  • News18
  • Last Updated: July 24, 2019, 3:23 PM IST
  • Share this:
ಮಾಲಿವುಡ್​ ನಟಿ ಪ್ರಿಯಾ ವಾರಿಯರ್​ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಮಾಡಿದ್ದು ಒಂದೇ ಒಂದು ಸಿನಿಮಾ... ಅದರಲ್ಲೂ ಪುಟ್ಟದಾದ ಪಾತ್ರ... ಆದರೆ ಆ ಒಂದು ವಿಡಿಯೋ ತುಣುಕು ಆಕೆಯನ್ನು ರಾತ್ರೋರಾತ್ರಿ ಸ್ಟಾರ್ ಸೆಲೆಬ್ರಿಟಿಯನ್ನಾಗಿಸಿತ್ತು.

ಕೇವಲ ಒಂದೇ ಒಂದು ಕಣ್ಸನ್ನೆ ಮೂಲಕ ಸ್ಟಾರ್​ ಆದ ಪ್ರಿಯಾ ಅವರ ಒಂದೇ ಒಂದು ಪೋಸ್ಟ್​ಗೆ ಇನ್​ಸ್ಟಾಗ್ರಾಂನಲ್ಲಿ ಈಗಲೂ ಲಕ್ಷಗಟ್ಟಲೆ ಲೈಕ್ಸ್​ ಹಾಗೂ ವೀಕ್ಷಣೆ ಸಿಗುತ್ತದೆ. ಇಂತಹ ನಟಿ ಪ್ರಿಯಾವಾರಿಯರ್​ ಅವರು ಈಗ ತಮ್ಮದೇ ಒಂದಿ ಕಿಸ್ಸಿಂಗ್​ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ.

 
 View this post on Instagram
 

Tb to this “ithenthinte kunjade?” moment with my fav @sinu_sidharth


A post shared by Priya Prakash Varrier💫 (@priya.p.varrier) on


ಈ ವಿಡಿಯೋಗೆ 1.5 ಮಿಲಿಯನ್​ (10.5 ಲಕ್ಷ) ವೀಕ್ಷಣೆ ಸಿಕ್ಕಿದೆ. ಈ ಇದೊಂದು ಪ್ರ್ಯಾಂಕ್​ ವಿಡಿಯೋ ಆಗಿದ್ದು, ಇದನ್ನು 'ಒರು ಆಡಾರ್​ ಲವ್'​ ಸಿನಿಮಾದ ಚಿತ್ರೀಕರಣದ ವೇಳೆ ಚಿತ್ರೀಕರಿಸಲಾಗಿದೆ ಎನ್ನಳಾಗುತ್ತಿದೆ. ಕಾರಣ ಇದರಲ್ಲಿ ಪ್ರಿಯಾ ತೊಟ್ಟಿರುವ ಬಟ್ಟೆ ಆ ಸಿನಿಮಾದಲ್ಲಿರುವ ಪಾತ್ರದದ್ದಾಗಿದೆ.

ಇದರಲ್ಲಿ ಪ್ರಿಯಾ ಹಾಗೂ ಸಿನಿಮಾಟೋಗ್ರಾಫರ್​ ಸೀನು ಸಿದ್ಧಾರ್ಥ್​ ಇದ್ದು, ಸೀನು ಪ್ರಿಯಾರನ್ನು ಚುಂಬಿಸುವ ರೀತಿಯಲ್ಲೇ ಬಂದು ಬಾಟಲಿಯಿಂದ ನೀರು ಕುಡಿಯುತ್ತಾರೆ. ಈ ವಿಡಯೋ ಪ್ರಿಯಾ ಅಭಿಮಾನಿಗಳಿಗೆ ಕೊಂಚ ವಿಚಿತ್ರವೆನಿಸಿದೆ. ಅದಕ್ಕೆ ಇಂತಹ ವಿಡಿಯೋಗಳನ್ನು ಮಾಡದಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Rana Daggubati: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನಟ ರಾಣಾಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

ಆದರೆ ಪ್ರಿಯಾರ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದ ತುಂಬೆಲ್ಲ ಹರಿದಾಡುತ್ತಿದ್ದು, ವೈರಲ್​ ಆಗುತ್ತಿದೆ. ಸದ್ಯ ಪ್ರಿಯಾ ವಾರಿಯರ್​ 'ಶ್ರೀದೇವಿ ಬಂಗ್ಲೊ' ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

 

Rashmika Mandanna: ಹೊಸ ಫೋಟೋಶೂಟ್​ನಲ್ಲಿ ಮುದ್ದಾಗಿ ಮಿಂಚಿದ ರಶ್ಮಿಕಾ ಮಂದಣ್ಣ


 
First published:July 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ