ಇನ್​ಸ್ಟಾಗ್ರಾಂಗೆ ಮರಳಿದ ಪ್ರಿಯಾ ವಾರಿಯರ್​: ಖಾತೆ ನಿಷ್ಕ್ರಿಯಗೊಳಿಸಿದ್ದಕ್ಕೆ ಕಾರಣ ಕೊಟ್ಟ ಕಣ್ಸನ್ನೆ ಹುಡುಗಿ..!

Priya Prakash Varrier: ಪ್ರಿಯಾ ಅವರ ಜನಪ್ರಿಯತೆ ಹೆಚ್ಚುತ್ತಿದ್ದಂತೆಯೇ ಇನ್​ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್​ಗೆ 8 ಲಕ್ಷ ಹಣ ನೀಡಲಾಗುತ್ತದೆ. ಅವರ ಒಂದು ಪೋಸ್ಟ್​ಗೆ ಲಕ್ಷಗಟ್ಟಲೆ ವೀಕ್ಷಣೆ ಸಹ ಸಿಗುತ್ತದೆ. ಹೀಗಿದ್ದರೂ ಪ್ರಿಯಾ ಪ್ರಕಾಶ್​ ವಾರಿಯರ್​ ಇನ್​ಸ್ಟಾಗ್ರಾಂನಿಂದ ಹೊರ ಹೋಗಿದ್ದರು. ತಮ್ಮ ಖಾತೆ ನಿಷ್ಕ್ರಿಯಗೊಳಿಸಿದ್ದರು.

ಪ್ರಿಯಾ ಪ್ರಕಾಶ್​ ವಾರಿಯರ್​​

ಪ್ರಿಯಾ ಪ್ರಕಾಶ್​ ವಾರಿಯರ್​​

  • Share this:
ಕೆಲವೇ ಸೆಕೆಂಡ್​ಗಳ ವಿಡಿಯೋ ತುಣುಕೊಂದು ಅಂದು ರಾತ್ರಿ ವೈರಲ್​ ಆಗಿತ್ತು. ಶಾಲಾ ವಿದ್ಯಾರ್ಥಿಯ ಪಾತ್ರದಲ್ಲಿ ನಟಿಸಿದ್ದ ಪ್ರಿಯಾ ವಾರಿಯರ್​ ಅವರ ಕಣ್ಸನ್ನೆ ಮಾಡುವ ವಿಡಿಯೋ ಭಾರೀ ವೈರಲ್​ ಆಗಿತ್ತು. ರಾತ್ರೋರಾತ್ರಿ ಪ್ರಿಯಾ ವಾರಿಯರ್​ ಸ್ಟಾರ್ ಆಗಿ ಹೋಗಿದ್ದರು.

'ಒರು ಆಡಾರ್​ ಲವ್'​ ಎಂಬ ಮಲಯಾಳಂ ಸಿನಿಮಾದ ಆ ವಿಡಿಯೋ ತುಣುಕಿನಲ್ಲಿ ಪ್ರಿಯಾ, ನಾಯಕನನ್ನು ನೋಡಿ ಕಣ್ಣು ಹೊಡೆಯುತ್ತಾರೆ. ಅವರು ಕಣ್ಸನೆ ಮಾಡಿದ ರೀತಿ ನೋಡಿದ ಪಡ್ಡೆಗಳು ಫಿದಾ ಆಗಿದ್ದರು. ಆಗಲೇ ಒಂದೇ ದಿನದಲ್ಲಿ ಪ್ರಿಯಾ ಪ್ರಕಾಶ್​ ವಾರಿಯರ್​ ಅವರ ಇನ್​ಸ್ಟಾಗ್ರಾಂ ಖಾತೆಗೆ ಲಕ್ಷ ಲಕ್ಷ ಹಿಂಬಾಲಕರಾಗಿದ್ದರು.

  
View this post on Instagram
 

I’m here to stay. #selfportrait


A post shared by Priya Prakash Varrier💫 (@priya.p.varrier) on


ಪ್ರಿಯಾ ಅವರ ಜನಪ್ರಿಯತೆ ಹೆಚ್ಚುತ್ತಿದ್ದಂತೆಯೇ ಇನ್​ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್​ಗೆ 8 ಲಕ್ಷ ಹಣ ನೀಡಲಾಗುತ್ತದೆ. ಅವರ ಒಂದು ಪೋಸ್ಟ್​ಗೆ ಲಕ್ಷಗಟ್ಟಲೆ ವೀಕ್ಷಣೆ ಸಹ ಸಿಗುತ್ತದೆ. ಹೀಗಿದ್ದರೂ ಪ್ರಿಯಾ ಪ್ರಕಾಶ್​ ವಾರಿಯರ್​ ಇನ್​ಸ್ಟಾಗ್ರಾಂನಿಂದ ಹೊರ ಹೋಗಿದ್ದರು. ತಮ್ಮ ಖಾತೆ ನಿಷ್ಕ್ರಿಯಗೊಳಿಸಿದ್ದರು.

ಇದನ್ನೂ ಓದಿ: ನಾಗ್​ ಅಶ್ವಿನ್​ ನಿರ್ದೇಶನದ ಸಿನಿಮಾದಲ್ಲಿ ಪ್ರಭಾಸ್​ಗೆ ಜೊತೆಯಾದ ಕನ್ನಡತಿ..!

ಪ್ರಿಯಾ ಹೀಗೆ ಸಾಮಾಜಿಕ ಜಾಲತಾಣದಿಂದ ಇದ್ದಕ್ಕಿದ್ದಂತೆ ಮಾಯವಾಗಿದ್ದು, ಅಭಿಮಾನಿಗಳಿಗೆ ಬೇಸರವುಂಟು ಮಾಡಿತ್ತಾದರೂ, ಈಗ ಅವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಪ್ರಿಯಾ ಮತ್ತೆ ಇನ್​ಸ್ಟಾಗ್ರಾಂಗೆ ಮರಳಿದ್ದಾರೆ.

Priya Prakash varrier came back to Instagram reveals the reason why she deactivated her insta account
ಪ್ರಿಯಾ ವಾರಿಯರ್​


ಪ್ರಿಯಾ ಕಳೆದ ಎರಡು ವಾರಗಳ ಹಿಂದೆ ತಮ್ಮ ಇನ್​ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರು. ಆ ಎರಡು ವಾರಗಳು ಅವರು ತುಂಬಾ ಖುಷಿಯಾಗಿದ್ದರಂತೆ. ಸಖತ್ ಎಂಜಾಯ್ ಮಾಡಿದ್ದರಂತೆ. ಆದರೆ ಬಣ್ಣ ಜಗತ್ತಿನಲ್ಲಿರುವ ಕಲಾವಿದರು ಶಾಶ್ವತವಾಗಿ ಸಾಮಾಜಿಕ ಜಾಲತಾಣದಿಂದ ದೂರ ಉಳಿಯಲು ಆಗುವುದಿಲ್ಲ ಅನ್ನೋ ಸತ್ಯದ ಅರಿವು ಪ್ರಿಯಾ ಅವರಿಗಿದೆ. ಇದೇ ಕಾರಣದಿಂದ ಅವರು ಮತ್ತೆ ಮರಳಿದ್ದಾರಂತೆ.

ಇದನ್ನೂ ಓದಿ: ಮಕ್ಕಳೊಂದಿಗೆ ಸೈಕಲ್​ ತುಳಿಯುತ್ತಾ ಎಂಜಾಯ್​ ಮಾಡಿದ ಪ್ರಿನ್ಸ್​ ಹೆಂಡತಿ ನಮ್ರತಾ ಶಿರೋಡ್ಕರ್​..!

ಅಷ್ಟಕ್ಕೂ ಪ್ರಿಯಾ ಇನ್​ಸ್ಟಾಗ್ರಾಂನಿಂದ ಈ ರೀತಿ ಮಾಯವಾಗಲು ಕಾರಣವಾದರೂ ಏನು ಅಂತೀರಾ..? ಅದಕ್ಕೆ ಉತ್ತರ ಖುದ್ದು ಅವರೇ ನೀಡಿದ್ದಾರೆ. 
View this post on Instagram

 

A post shared by Priya Prakash Varrier💫 (@priya.p.varrier) on


ಲಾಕ್​ಡೌನ್​ ಸಮಯದಲ್ಲಿ ಎಲ್ಲರೂ ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ಸಕ್ರಿಯವಾಗುತ್ತಾರೆ. ಆದರೆ ನಾನು ಆಗಲೇ ಮನಸ್ಸಿನ ನೆಮ್ಮದಿಗಾಗಿ ಈ ನಿರ್ಧಾರಕ್ಕೆ ಬಂದೆ. ಮಾನಸಿಕ ಆರೋಗ್ಯ ನನಗೆ ತುಂಬಾ ಮುಖ್ಯ. ಅದಕ್ಕಾಗಿ ಶಾರ್ಟ್​ ಬ್ರೇಕ್​ ತೆಗೆದುಕೊಂಡಿದ್ದೆ ಎಂದು ಪ್ರಿಯಾ ಹೇಳಿಕೊಂಡಿದ್ದಾರೆ. ಇದನ್ನು ಹೊರತುಪಡಿಸಿ ಮತ್ತಾವುದೇ ಕಾರಣವಿಲ್ಲ ಎಂದಿದ್ದಾರೆ ಪ್ರಿಯಾ.

ಇದನ್ನೂ ಓದಿ: Kishore Kumar: ಗೋಡೆ ಮೇಲಿನ ಬರವಣಿಗೆ ಅಂತ ಬೆರಣಿ ಜೊತೆ ಸೆಲ್ಫಿ ತೆಗೆದುಕೊಂಡ ಸ್ಯಾಂಡಲ್​ವುಡ್ ನಟ ಕಿಶೋರ್​..!

​ಪ್ರಿಯಾ ಮಾಡಿದ ಮಲಯಾಳಂ ಸಿನಿಮಾ ಬಾಕ್ಸಾಫಿಸ್​ನಲ್ಲಿ ಸದ್ದು ಮಾಡಲಿಲ್ಲ. ಅವರ ಅಭಿನಯದ ಶ್ರೀದೇವಿ ಬಂಗ್ಲೊ ಚಿತ್ರದ ಟೀಸರ್ ಬಿಡುಗಡೆಯಾಯಿತು. ನಂತರ ಅದರ ಸುದ್ದಿಯೇ ಇಲ್ಲ. ಇನ್ನು ಕನ್ನಡ ಸಿನಿಮಾದಲ್ಲೂ ಪ್ರಿಯಾ ನಟಿಸಲಿದ್ದಾರೆ ಅನ್ನೋ ಸುದ್ದಿ ಇತ್ತು. ಆದರೆ ಲಾಕ್​ಡೌನ್​ನಿಂದಾಗಿ ಈಗ ಎಲ್ಲಕ್ಕೂ ಬ್ರೇಕ್​ ಬಿದ್ದಿದೆ.

First published: