ಮಲಯಾಳಂ (Malayalam) ಫಿಲ್ಮ್ ಇಂಡಸ್ಟ್ರಿಯಲ್ಲಿ (Film Industry) ಪೃಥ್ವಿರಾಜ್ ಸುಕುಮಾರ್ ಸಾಕಷ್ಟು ಕೀರ್ತಿ ಸಂಪಾದಿಸಿದ್ದಾರೆ. ಒಳ್ಳೆಯ ಹೆಸರು ಮಾಡಿಕೊಂಡ ನಟ ನಿರ್ದೇಶಕ, ನಿರ್ಮಾಪಕರೂ ಹೌದು. ಪ್ರತಿಭಾವಂತ ಕಲಾವಿದರಾಗಿ ಖ್ಯಾತಿ ಗಳಿಸಿರುವ ಪೃಥ್ವಿರಾಜ್ ದೊಡ್ಡ ದೊಡ್ಡ ನಟರಿಗೆ ಆ್ಯಕ್ಷನ್ ಕಟ್ ಹೇಳುವಷ್ಟರ ಮಟ್ಟಿಗೆ ಸಿನಿ ಇಂಡಸ್ಟ್ರಿಯಲ್ಲಿ ಪ್ರಗತಿ ಸಾಧಿಸಿದ್ದಾರೆ. ಇದೀಗ ತಮಿಳಿನ ಖ್ಯಾತ ನಟ ಸೂರ್ಯ ಅವರನ್ನು ನಾಯಕ ನಟನಾಗಿಸಿಕೊಂಡು ಪೃಥ್ವಿರಾಜ್ ಬಯೋಪಿಕ್ ಒಂದನ್ನು ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಇಂಡಸ್ಟ್ರಿಯಲ್ಲಿ ಹಾರಿದಾಡುತ್ತಿದ್ದು, ಪೃಥ್ವಿ ತಂಡವು ಇಂತಹ ಯಾವುದೇ ಯೋಚನೆ, ಯೋಜನೆ ಇಲ್ಲ ಎಂದು ಸ್ಪಷ್ಟೀಕರಿಸಿದೆ.
ಕೆಲವೊಂದು ಮಾಧ್ಯಮಗಳಲ್ಲಿ ಈ ಸುದ್ದಿ ಹರಿದಾಡಿದ್ದು, ಪೃಥ್ವಿಯವರು ಕೈಗೆತ್ತಿಕೊಂಡಿರುವ ಕೆಲವೊಂದು ಪ್ರಾಜೆಕ್ಟ್‌ಗಳಲ್ಲಿ ಅವರು ಕಾರ್ಯನಿರತರಾಗಿದ್ದಾರೆ ಎಂದು ಪೃಥ್ವಿ ತಂಡ ಸ್ಪಷ್ಟೀಕರಿಸಿದೆ.
ನಟನ ಮುಂದಿನ ದೊಡ್ಡ ಪ್ರಾಜೆಕ್ಟ್‌ಗಳಾದ ಎಲ್2 ಎಂಪುರಾನ್ ಹಾಗೂ ಟೈಸನ್‌ನಲ್ಲಿ ಪೃಥ್ವಿ ಬ್ಯುಸಿಯಾಗಿದ್ದಾರೆ ಎಂದು ತಂಡ ತಿಳಿಸಿದೆ.
ಟ್ವಿಟರ್‌ನಲ್ಲಿ ಸ್ಪಷ್ಟೀಕರಣ ನೀಡಿದ ಪೃಥ್ವಿ ತಂಡ
ಸೂರ್ಯ ನಟಿಸಲಿರುವ ಬಯೋಪಿಕ್ ಒಂದನ್ನು ಪೃಥ್ವಿ ನಿರ್ದೇಶಿಸುತ್ತಿಲ್ಲ ಎಂದು ತಂಡ ಸ್ಪಷ್ಟನೆ ನೀಡಿದೆ. ಇಂಡಸ್ಟ್ರಿಯಲ್ಲಿ ಸದ್ದುಮಾಡುತ್ತಿರುವ ರೂಮರ್ ಅನ್ನು ತಂಡ ನಿರಾಕರಿಸಿದ್ದು ಈ ಸುದ್ದಿಯಲ್ಲಿ ಹುರುಳಿಲ್ಲ ಎಂದು ತಿಳಿಸಿದೆ.
ನಿರ್ದೇಶಕರ ಮುಂದಿನ ಚಿತ್ರಗಳಾದ ಎಲ್2, ಹಾಗೂ ಟೈಸನ್‌ನಲ್ಲಿ ಪೃಥ್ವಿರಾಜ್ ಹೆಚ್ಚಿನ ನಿರೀಕ್ಷೆ ಇರಿಸಿದ್ದು ಆ ಪ್ರಯುಕ್ತ ಬ್ಯುಸಿಯಾಗಿದ್ದಾರೆ ಎಂದು ತಂಡ ತಿಳಿಸಿದೆ.
ತಂಡ ಈ ಕುರಿತು ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿದ್ದು, ಸೂರ್ಯ ಅವರು ಲೀಡ್ ರೋಲ್‌ನಲ್ಲಿರುವ ಯಾವುದೇ ಬಯೋಪಿಕ್ ಅನ್ನು ಪೃಥ್ವಿರಾಜ್ ನಿರ್ದೇಶಿಸುತ್ತಿಲ್ಲ ಅಂತೆಯೇ ನಟನ ಮುಂದಿನ ದೊಡ್ಡ ಪ್ರಾಜೆಕ್ಟ್‌ಗಳು ಎಲ್2 ಹಾಗೂ ಟೈಸನ್ ಎಂದು ತಿಳಿಸಿದೆ.
ಪೃಥ್ವಿ ಕೈಯಲ್ಲಿರುವ ಚಿತ್ರಗಳು
ಪೃಥ್ವಿ ಪ್ರಸ್ತುತ ಸಲಾರ್ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಪ್ರಭಾಸ್‌ನೊಂದಿಗೆ ಇದೇ ಮೊದಲ ಬಾರಿಗೆ ಪೃಥ್ವಿ ತೆರೆ ಹಂಚಿಕೊಂಡಿದ್ದು, ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ.
ಕೆಜಿಎಫ್‌ನ ಪ್ರಶಾಂತ್ ನೀಲ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಪ್ಟೆಂಬರ್ 28 ರಂದು ಸಲಾರ್ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ. ಇನ್ನು ಮೋಹನ್‌ಲಾಲ್ ನಟಿಸಲಿರುವ ಎಲ್2 ಚಿತ್ರದ ಚಿತ್ರೀಕರಣ ಕಾರ್ಯವನ್ನು ಪೃಥ್ವಿರಾಜ್ ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಿದ್ದಾರೆ.
ಪೃಥ್ವಿ ನಿರ್ದೇಶನದ ಎಲ್2 ಲೂಸಿಫರ್‌ನ ಮುಂದುವರಿದ ಭಾಗ
ಲೂಸಿಫರ್ ಚಿತ್ರದ ನಂತರದ ಅವತರಣಿಕೆ ಎಲ್2 ಚಿತ್ರವಾಗಿದೆ. ಚಿತ್ರದ ನಿರ್ದೇಶನಕ್ಕಾಗಿ ಪೃಥ್ವಿ ತಮ್ಮ ಚಿತ್ರಗಳಿಂದ ಬ್ರೇಕ್ ತೆಗೆದುಕೊಂಡು ಎಲ್2 ಚಿತ್ರೀಕರಣದ ನಿರ್ದೇಶನ ಕೈಗೆತ್ತಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೂಡ ಇದ್ದು ಈ ವರ್ಷದ ಆಗಸ್ಟ್ ಮೊದಲ ವಾರದಿಂದ ಸಿನಿಮಾ ಚಿತ್ರೀಕರಣ ಆರಂಭಗೊಳ್ಳಲಿದೆ.
ಅಕ್ಷಯ್ ಜೊತೆಗೆ ಪೃಥ್ವಿ
ಪೃಥ್ವಿರಾಜ್ ಇತರ ಪ್ರಾಜೆಕ್ಟ್‌ಗಳೆಂದರೆ ಆಡುಜೀವಿತಂ, ಖಲೀಫಾ, ವಿಲಾಯತ್ ಬುದ್ಧ ಮತ್ತು ಕಾಲಿಯಾನ್ ಮೊದಲಾದವುಗಳಾಗಿವೆ. ಪೃಥ್ವಿರಾಜ್ ಕೂಡ ಅಕ್ಷಯ್ ಕುಮಾರ್ ಜೊತೆಗೆ ಬಡೇ ಮಿಯಾನ್ ಚೋಟೆ ಮಿಯಾನ್ ಚಿತ್ರದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ.
ಸೂರ್ಯ ಅವರ ಮುಂಬರಲಿರುವ ಪ್ರಾಜೆಕ್ಟ್‌ಗಳು
ಸೂರ್ಯ ಅವರು ಕೂಡ ತಮ್ಮ ಮುಂಬರುವ ಚಿತ್ರಗಳಲ್ಲಿ ಬ್ಯುಸಿಯಾಗಿದ್ದು, ತಮ್ಮ 42 ನೇ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು ದಿಶಾ ಪಟಾನಿ ಚಿತ್ರದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ.
ಇದನ್ನೂ ಓದಿ: Deepika Padukone: ಆಸ್ಕರ್ ಅವಾರ್ಡ್ ಪ್ರಸೆಂಟರ್ ಆಗಿ ಡಿಂಪಲ್ ಕ್ವೀನ್! ಭಾರತೀಯ ಚಿತ್ರರಂಗಕ್ಕೆ ಹೊಸ ಹಿರಿಮೆ
ಪ್ಯಾನ್ ಇಂಡಿಯಾ ಚಿತ್ರವಾಗಿ ಸೂರ್ಯ ಅಭಿನಯದ 42 ನೇ ಚಿತ್ರ ಸೆಟ್ಟೇರಲಿದ್ದು ಬಹುನಿರೀಕ್ಷಿತ ಚಿತ್ರವಾಗಿ ಭರವಸೆ ಹೊಂದಿದೆ ಎಂದು ಇಂಡಸ್ಟ್ರಿ ವಲಯಗಳು ಸುದ್ದಿಮಾಡಿವೆ.
ನಿರ್ದೇಶಕ ವೆಟ್ರೀಮಾರನ್ ಚಿತ್ರ ವಾಡಿವಾಸಲ್‌ನಲ್ಲಿ ಕೂಡ ಸೂರ್ಯ ಮಿಂಚಲಿದ್ದು, ಲಾಕ್‌ಡೌನ್ ಹಾಗೂ ಕೋವಿಡ್ ಕಾರಣದಿಂದ ವಿಳಂಬಗೊಂಡಿದ್ದ ಚಿತ್ರೀಕರಣವನ್ನು ವೆಟ್ರಿಮಾರನ್ ಪುನಃ ಕೈಗೆತ್ತಿಕೊಳ್ಳಲಿದ್ದಾರೆ ಹಾಗೂ ಚಿತ್ರ ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂದು ತಮಿಳು ನಿರ್ದೇಶಕ ತಮಿಳ ದೃಢೀಕರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ