HOME » NEWS » Entertainment » PRITHVIRAJ ACQUIRES MALAYALAM DISTRIBUTION RIGHTS FOR KGF CHAPTER 2 ZP

KGF: Chapter 2: ರಾಕಿ ಭಾಯ್​ಯ ರಿ ಎಂಟ್ರಿಗೆ ಮಲಯಾಳಂ ಸ್ಟಾರ್ ನಟನ ಸಾಥ್..!

ಕೆಜಿಎಫ್ ಚಿತ್ರವನ್ನು ಮೀರಿಸುವಂತೆ ನಿರ್ದೇಶಕ ಪ್ರಶಾಂತ್ ನೀಲ್ ಚಾಪ್ಟರ್-2 ಗೆ ಆ್ಯಕ್ಷನ್ ಕಟ್ ಹೇಳಿದ್ದು, ಮತ್ತೊಮ್ಮೆ ಭಾರತೀಯ ಸಿನಿರಂಗದ ಬಾಕ್ಸಾಫೀಸ್​ನ್ನು ರಾಕಿ ಭಾಯ್ ಬೇಟೆಯಾಡಲಿರುವುದಂತು ಕನ್ಫರ್ಮ್​ ಎನ್ನಬಹುದು.

news18-kannada
Updated:January 6, 2021, 9:16 PM IST
KGF: Chapter 2: ರಾಕಿ ಭಾಯ್​ಯ ರಿ ಎಂಟ್ರಿಗೆ ಮಲಯಾಳಂ ಸ್ಟಾರ್ ನಟನ ಸಾಥ್..!
Yash
  • Share this:
ಕೆ.ಜಿ.ಎಫ್...ಪವರ್​ಫುಲ್ ಪೀಪಲ್ ಕಮ್ ಫ್ರಂ ಪವರ್​​ಫುಲ್ ಪ್ಲೇಸ್ ಎಂದು ಇಡೀ ಜಗತ್ತಿಗೆ ಸಾರಿದ್ದ ರಾಕಿ ಭಾಯ್​ ರಿ ಎಂಟ್ರಿ ಕೊಡಲು ರೆಡಿಯಾಗುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರನ್ನು ಇಡೀ ಚಿತ್ರರಂಗದ ಕಿಂಗ್ ಆಗಿ ಮೆರೆಸಿದ್ದ 'ಕೆ.ಜಿ.ಎಫ್' ಚಿತ್ರದ ಮುಂದುವರೆದ ಭಾಗವನ್ನು ವಿಶ್ವ ಚಿತ್ರಪ್ರೇಮಿಗಳು ಕಾತುರದಿಂದ ಕಾಯುತ್ತಿರುವುದು ಗೊತ್ತಿರುವ ವಿಷಯ.

ಹೌದು, ರಾಕಿಂಗ್ ಸ್ಟಾರ್ ಫ್ಯಾನ್ಸ್​ ಯಶ್ ಹುಟ್ಟುಹಬ್ಬಕ್ಕೆ ದಿನಗಣನೆಗೆ ಶುರುವಾಗಿದೆ. ಆದರೆ ಈ ಬಾರಿ ಕೊರೋನಾ ಕಾರಣದಿಂದ ರಾಕಿ ಭಾಯ್​ಯ ಬರ್ತ್​ ಡೆ ಸೆಲೆಬ್ರೇಷನ್ ಇರುವುದಿಲ್ಲ. ಇದಾಗ್ಯೂ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಲು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅದರಂತೆ ಜನವರಿ 8 ರಂದು ರಾಕಿ ಭಾಯ್​ಯ ರಿ ಎಂಟ್ರಿಯ ಭರ್ಜರಿ ಟೀಸರ್ ಬಿಡುಗಡೆಯಾಗಲಿದೆ.

ಈ ಸುದ್ದಿಗಳ ಬೆನ್ನಲ್ಲೇ ಅತ್ತ ಮಾಲಿವುಡ್​ನಿಂದ ಕೂಡ ಕೆಜಿಎಫ್ ಚಾಪ್ಟರ್-2 ಚಿತ್ರದ ಬಿಗ್ ಅಪ್​ಡೇಟ್​ವೊಂದು ಹೊರಬಿದ್ದಿದೆ. ಕೆಜಿಎಫ್‌ ಮೊದಲ ಭಾಗವನ್ನು ಹಿಂದಿಯಲ್ಲಿ ಫರ್ಹಾನ್ ಅಖ್ತರ್-ಅನಿಲ್ ತಡಾನಿ ರಿಲೀಸ್ ಮಾಡಿದ್ದರು. ತೆಲುಗಿನಲ್ಲಿ ವರಾಹಿ ಸಂಸ್ಥೆಯ ಸಹಯೋಗದೊಂದಿಗೆ ಬಿಡುಗಡೆ ಮಾಡಲಾಗಿತ್ತು. ಇನ್ನು ತಮಿಳಿನಲ್ಲಿ ನಟ ವಿಶಾಲ್‌ ಸಾಥ್ ನೀಡಿದ್ದರು. ಇದೀಗ ಮಲಯಾಳಂನಲ್ಲೂ ಬಿಗ್ ಬ್ಯಾನರ್​ವೊಂದು ಕೆಜಿಎಫ್ 2 ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಆ ಪ್ರೊಡಕ್ಷನ್ ಹೌಸ್ ಮತ್ಯಾರದ್ದೂ ಅಲ್ಲ. ಮಾಲಿವುಡ್ ಸ್ಟಾರ್ ನಟ ಪೃಥ್ವಿರಾಜ್ ಅವರದ್ದು ಎಂಬುದು ವಿಶೇಷ. ಹೀಗಾಗಿ ಕೆಜಿಎಫ್​ ಚಾಪ್ಟರ್-2 ಬಗ್ಗೆ ಈಗಾಗಲೇ ಕೇರಳದಲ್ಲಿ ದೊಡ್ಡ ಹೈಪ್ ಕ್ರಿಯೇಟ್ ಆಗಿದೆ. ಅಲ್ಲದೆ ನಟ ಪೃಥ್ವಿರಾಜ್ ನಾನು ಕೆಜಿಎಫ್ ಚಿತ್ರದ ದೊಡ್ಡ ಅಭಿಮಾನಿ ಎಂದಿದ್ದಾರೆ. ಈ ಹಿಂದೆ ಪೃಥ್ವಿರಾಜ್ ನಿರ್ದೇಶಿಸಿ ನಟಿಸಿದ್ದ ಸೂಪರ್ ಡೂಪರ್ ಹಿಟ್​ ಲೂಸಿಫರ್ ಚಿತ್ರ ಮಾಲಿವುಡ್​ನಲ್ಲೇ 150 ಕೋಟಿ ಅಧಿಕ ಕಲೆಕ್ಷನ್ ಮಾಡಿತ್ತು.ಈ ವೇಳೆ ಹೊಂಬಾಳೆ ಫಿಲಂಸ್ ಪೃಥ್ವಿರಾಜ್ ಪ್ರೊಡಕ್ಷನ್ ಜೊತೆ ಮುಂದಿನ ಸಿನಿಮಾಗಳ ಬಗ್ಗೆ ಚರ್ಚೆ ನಡೆಸಿದ್ದರು. ಇದೀಗ ಅವರ ಸಿನಿಮಾವನ್ನು ಜನರ ಮುಂದಿಡುವ ಅವಕಾಶ ನಮಗೆ ದೊರೆಕಿದೆ. ಲಕ್ಷಾಂತರ ಅಭಿಮಾನಿಗಳಂತೆ ನಾನು ಕೂಡ ರಾಕಿ ಭಾಯ್​ಯ ರಿ ಎಂಟ್ರಿಯನ್ನು ನೋಡಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ಪೃಥ್ವಿರಾಜ್ ತಿಳಿಸಿದ್ದಾರೆ.

ಈ ಒಂದು ಅನೌನ್ಸ್ ಇದೀಗ ಕೇರಳದ ರಾಕಿ ಭಾಯ್​ಯ ಫ್ಯಾನ್ಸ್​ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಏಕೆಂದರೆ ಅಪಾರ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟ ಪೃಥ್ವಿರಾಜ್ ಕೆಜಿಎಫ್ 2 ಚಿತ್ರವನ್ನು ಕೇರಳದಲ್ಲಿ ಬಿಡುಗಡೆ ಮಾಡುತ್ತಿರುವುದರಿಂದ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಗಲಿದೆ. ಅದರೊಂದಿಗೆ ಕೇರಳ ಕಡಲ ಕಿನಾರೆಯಲ್ಲೂ ಈ ಬಾರಿ ರಾಕಿ ಭಾಯ್​ ಹವಾ ಜೋರಾಗಿ ಬೀಸಲಿರುವುದು ಖಚಿತ ಆದಂತಾಗಿದೆ.

ಒಟ್ಟಿನಲ್ಲಿ ಕೆಜಿಎಫ್ ಚಿತ್ರವನ್ನು ಮೀರಿಸುವಂತೆ ನಿರ್ದೇಶಕ ಪ್ರಶಾಂತ್ ನೀಲ್ ಚಾಪ್ಟರ್-2 ಗೆ ಆ್ಯಕ್ಷನ್ ಕಟ್ ಹೇಳಿದ್ದು, ಮತ್ತೊಮ್ಮೆ ಭಾರತೀಯ ಸಿನಿರಂಗದ ಬಾಕ್ಸಾಫೀಸ್​ನ್ನು ರಾಕಿ ಭಾಯ್ ಬೇಟೆಯಾಡಲಿರುವುದಂತು ಕನ್ಫರ್ಮ್​ ಎನ್ನಬಹುದು.
Published by: zahir
First published: January 6, 2021, 9:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories