Super Star Krishna: ಪವನ್​ ಕಲ್ಯಾಣ್​ -ವೆಂಕಟೇಶ್​ಗೆ ಸವಾಲು ಹಾಕಿದ ಮಹೇಶ್​ ಬಾಬುರ ತಂದೆ ಸೂಪರ್ ಸ್ಟಾರ್​​ ಕೃಷ್ಣ 

Green India Challenge: ಕಳೆದ ಜುಲೈ29ಕ್ಕೆ ಆರಂಭಿಸಲಾಗಿರುವ ಗ್ರೀನ್​ ಚಾಲೆಂಜ್​ ಅಭಿಯಾನಕ್ಕಾಗಿ ರಾಜಕಾರಣಿಗಳು, ಪೊಲೀಸ್​ ಅಧಿಕಾರಿಗಳು ಹಾಗೂ ಸಿನಿಮಾ ತಾರೆಯರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ಯಾಗ್​ ಮಾಡಲಾಗುತ್ತಿತ್ತು. ಇದನ್ನು ಪ್ರಿನ್ಸ್​ ಮಹೇಶ್​ ಬಾಬು ಅವರ ತಂದೆ ಕೃಷ್ಣ ಅವರು ಈಗ ಮುಂದುವರೆಸುತ್ತಿದ್ದಾರೆ.

ಸೂಪರ್ ಸ್ಟಾರ್​ ಕೃಷ್ಣ

ಸೂಪರ್ ಸ್ಟಾರ್​ ಕೃಷ್ಣ

  • Share this:
ತೆಲುಗು ರಾಷ್ಟ್ರದಲ್ಲಿ ಸೆಲೆಬ್ರಿಟಿಗಳ ಗ್ರೀನ್​ ಚಾಲೆಂಜ್​ ಇನ್ನೂ ಜೋರಾಗಿಯೇ ನಡೆಯುತ್ತಿದೆ. ಖಾಸಗಿ ಸಂಸ್ಥೆಗಳೆರೆಡು ಆರಂಭಿಸಿದ ಈ ಗ್ರೀನ್​ ಇಂಡಿಯಾ ಚಾಲೆಂಜ್​ ಆಂಧ್ರದಲ್ಲಿ ಮುಂದುವರೆಯುತ್ತಿದೆ.

ಜಗತ್ತಿನ ದೊಡ್ಡ ಸಮಸ್ಯೆ ಎಂದರೆ ಹಸಿರು ಮನೆ ಪರಿಣಾಮ. ಇದರಿಂದ ಭೂಮಿಯನ್ನು ಉಳಿಸಲು ಹಸಿರು ಹೊದಿಕೆಯ ಪ್ರಮಾಣವನ್ನು ಹೆಚ್ಚಿಸುವ ಅಗತ್ಯವಿದೆ. ಇದಕ್ಕೆ ಆಂಧ್ರ ಸಹ ಹೊರತಾಗಿಲ್ಲ. ಅಲ್ಲಿಯೂ ಹಸಿರು ಹೊದಿಕೆಯ ಪ್ರಮಾಣ ಕಡಿಮೆ ಇದ್ದು, ಇದರಿಂದಾಗಿ ಅಲ್ಲಿನ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅತಿಯಾದ ಉಷ್ಣಾಂಶ ಹಾಗೂ ಮಳೆ ಗಣನೀಯ ಪ್ರಮಾಣದಲ್ಲಿ ಇಳಿಯಾಗಿದೆ. ಇದರಿಂದ ಜನರು ಕುಡಿಯುವ ನೀರಿಗೂ ಒದ್ದಾಡುವಂತಾಗಿದೆ. ರೈತರು ಬೆಳೆ ಬೆಳೆಯಲು ಈಗ ಮಳೆಗಾಗಿ ಆಕಾಶ ನೋಡುತ್ತಾ ಕೂರುವ ಪರಿಸ್ಥಿತಿ ನಿಮಾರ್ಣವಾಗಿದೆ.ಇದರಿಂದಾಗಿಯೇ ಇಗ್ನೈಟಿಂಗ್​ ಮೈಂಡ್ಸ್​ ಮತ್ತು ವಾಕ್​ ಫಾರ್ ವಾಟರ್​ ಸಂಸ್ಥೆಗಳು ಆಂಧ್ರದಲ್ಲಿ ಹಸಿರು ಹೊದಿಕೆ ಹೆಚ್ಚಿಸುವ ಕಾರ್ಯಕ್ಕೆ ಮುಂದಾಗಿವೆ. ಅದಕ್ಕಾಗಿಯೇ ಈ ಸಂಸ್ಥೆಗಳು  ಹರಾ ಹೈ ತೋ ಬರಾ ಹೈ ಎಂಬ ಅಡಿ ಬರಹದೊಂದಿಗೆ  ಗ್ರೀನ್​ ಚಾಲೆಂಜ್ ಅಭಿಯಾನ ಆರಂಭಿಸಿದ್ದಾರೆ.

ಕಳೆದ ಜುಲೈ29ಕ್ಕೆ ಆರಂಭಿಸಲಾಗಿರುವ ಈ ಅಭಿಯಾನಕ್ಕಾಗಿ ರಾಜಕಾರಣಿಗಳು, ಪೊಲೀಸ್​ ಅಧಿಕಾರಿಗಳು ಹಾಗೂ ಸಿನಿಮಾ ತಾರೆಯರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ಯಾಗ್​ ಮಾಡಲಾಗುತ್ತಿತ್ತು. ಇದನ್ನು ಪ್ರಿನ್ಸ್​ ಮಹೇಶ್​ ಬಾಬು ಅವರ ತಂದೆ ಕೃಷ್ಣ ಅವರು ಈಗ ಮುಂದುವರೆಸುತ್ತಿದ್ದಾರೆ. ಮೂರು ಸಸಿಗಳನ್ನು ನೆಟ್ಟಿರುವ ಸೂಪರ್​ ಸ್ಟಾರ್​ ಈ ಸವಾಲನ್ನು ಪವರ್​ ಸ್ಟಾರ್ ಪವನ್​ ಕಲ್ಯಾಣ್​ ಹಾಗೂ ನಟ ವೆಂಕಟೇಶ್​​ ಅವರಿಗೆ ವರ್ಗಾಯಿಸಿದ್ದಾರೆ.ಈ ಅಭಿಯಾನದಲ್ಲಿ ಹಸಿರು ಸವಾಲನ್ನು ಸ್ವೀಕರಿಸುವವರು ಮೂರು ಸಸಿಗಳನ್ನು ನೆಟ್ಟು ಅದನ್ನು ಮೂರು ವರ್ಷ ಪೋಷಿಸಬೇಕು. ಜತೆಗೆ ಮೂರು ಜನರಿಗೆ ಈ ಸವಾಲು ನೀಡಬೇಕು. ಗ್ರೀನ್​ ಚಾಲೆಂಜ್ ಅನ್ನು ನಟ ಮಹೇಶ್​ ಬಾಬು ಅವರಿಗೆ ನೀಡಲಾಗಿತ್ತು. ಅದನ್ನು ಸ್ವೀಕರಿಸಿರುವ ಮಹೇಶ್​ ತಮ್ಮ ಮನೆಯಂಗಳದಲ್ಲೇ ಮೂರು ಸಸಿಗಳನ್ನು ನೆಟ್ಟು, ತಮ್ಮ ಮಗ ಗೌತಮ್​, ಮಗಳು ಸಿತಾರಾ ಹಾಗೂ ನಿರ್ದೇಶಕ ವಂಶಿ ಅವರಿಗೆ ಸವಾಲನ್ನು ನೀಡಿದ್ದರು.

 

ಮಹೇಶ್​ ಬಾಬು ಅವರ ಮಗಳು ಹಾಗೂ ನಿರ್ದೇಶಕ ವಂಶಿ ಹಸಿರು ಸವಾಲನ್ನು ಸ್ವೀಕರಿಸಿದ್ದು, ಅದನ್ನು ಮತ್ತೆ ಮೂವರಿಗೆ ಪಾಸ್​ ಮಾಡಿದ್ದರು.

 

ಹೀಗೆ ಈ ಸವಾಲು ಮುಂದುವರಿಯುತ್ತಲೇ ಇದೆ. ಫಿಟ್​ನೆಸ್​ ಚಾಲೆಂಜ್​, ಬಾಟಲ್​ ಕ್ಯಾಪ್​ ಚಾಲೆಂಜ್​ಗಳಷ್ಟು ವೈರಲ್​ ಆಗದಸೇ ಹೋದರೂ ಪರಿಸರವನ್ನು ಉಳಿಸುವ ಈ ಅಭಿಯಾನ ಆಂಧ್ರದಲ್ಲಿ ಇನ್ನೂ ಉಸಿರಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.

ಹೇಗೆ ಬಟ್ಟೆ ತೊಡುತ್ತೀರಿ ಅನ್ನೋದು ಸೌಂದರ್ಯವನ್ನು ನಿರ್ಧರಿಸುತ್ತದೆ ಎಂದು ಬೋಲ್ಡ್​ ಫೋಟೋ ಹಂಚಿಕೊಂಡ ನಟಿ..!


 

First published: