Mahesh Babu: ಮಹೇಶ್​ ಬಾಬುಗೆ ಮೆನಿಕ್ಯೂರ್​​ ಮಾಡಿದ ಹೊಸ ಬ್ಯೂಟಿಷಿಯನ್​..!

Prince Mahesh Babu: ಲಾಕ್​ಡೌನ್​ನಿಂದಾಗಿ ಬ್ಯೂಟಿಪಾರ್ಲರ್​ಗಳು ಬಂದ್​ ಆಗಿದ್ದವು. ಜೊತೆಗೆ ಬ್ಯೂಟಿಷಿಯನ್​ ಸಹ ಲಾಕ್​ ಆಗಿದ್ದರು. ಆದರೆ ಈಗ ಲಾಕ್​ಡೌನ್​ ಸಡಿಲಿಕೆ ಮಾಡಿದ ನಂತರ ಷರತ್ತು ಬದ್ಧವಾಗಿ ಸಲೂನ್​ ಹಾಗೂ ಪಾರ್ಲರ್​ ತೆಗೆಯಬೇಕಾಗಿದೆ. ಇದಕ್ಕೆ ಸಿನಿಮಾ ತಾರೆಯರೂ ಹೊರತಾಗಿಲ್ಲ.

Anitha E | news18-kannada
Updated:May 23, 2020, 4:20 PM IST
Mahesh Babu: ಮಹೇಶ್​ ಬಾಬುಗೆ ಮೆನಿಕ್ಯೂರ್​​ ಮಾಡಿದ ಹೊಸ ಬ್ಯೂಟಿಷಿಯನ್​..!
ಕೊರೋನಾ ಲಾಕ್​ಡೌನ್​ನಿಂದಾಗಿ ಮಹೇಶ್​ ಬಾಬು ಮನೆಯಲ್ಲಿ ಮಕ್ಕಳೊಂದಿಗೆ ಸಖತ್​ ಮಸ್ತಿ ಮಾಡುತ್ತಿದ್ದಾರೆ.
  • Share this:
ಸಿನಿಮಾ ಸ್ಟಾರ್​ಗಳು ಕೆಲಸವಿಲ್ಲದೆ ಮನೆಯಲ್ಲಿದ್ದರೂ ಫಿಟ್ನೆಸ್​ ಜೊತೆಗೆ ತಮ್ಮ ಅಂದಚೆಂದ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಅದಕ್ಕೆ ಎಲ್ಲರೂ ಡಯಟ್​ ಫುಡ್​ ಜೊತೆಗೆ ವ್ಯಾಯಾಮವನ್ನೂ ಮಾಡುತ್ತಿದ್ದಾರೆ. 

ಲಾಕ್​ಡೌನ್​ನಿಂದಾಗಿ ಬ್ಯೂಟಿಪಾರ್ಲರ್​ಗಳು ಬಂದ್​ ಆಗಿದ್ದವು. ಜೊತೆಗೆ ಬ್ಯೂಟಿಷಿಯನ್​ ಸಹ ಲಾಕ್​ ಆಗಿದ್ದರು. ಆದರೆ ಈಗ ಲಾಕ್​ಡೌನ್​ ಸಡಿಲಿಕೆ ಮಾಡಿದ ನಂತರ ಷರತ್ತು ಬದ್ಧವಾಗಿ ಸಲೂನ್​ ಹಾಗೂ ಪಾರ್ಲರ್​ ತೆಗೆಯಬೇಕಾಗಿದೆ. ಇದಕ್ಕೆ ಸಿನಿಮಾ ತಾರೆಯರೂ ಹೊರತಾಗಿಲ್ಲ.

  View this post on Instagram
 

The Lion’s den !! #stayhomestaysafe


A post shared by Namrata Shirodkar (@namratashirodkar) on


ಸಿನಿಮಾ ತಾರೆಯರಿಗೆ ತಮ್ಮ ಪರ್ಸನಲ್​ ಬ್ಯೂಟಿಷಿಯನ್​ಗಳು ಇರುತ್ತಾರೆ. ಲಾಕ್​ಡೌನ್​ನಿಂದಾಗಿ ಅವರೂ ಮನೆ ಬಿಟ್ಟು ಹೊರ ಬರುವಂತಿರಲಿಲ್ಲ. ಇದೇ ಕಾರಣಕ್ಕೆ ಇರಬೇಕು ಪ್ರಿನ್ಸ್​ ಮಹೇಶ್​ ಬಾಬು ಹೊಸ ಬ್ಯೂಟಿಷಿಯನ್​ ಹುಡುಕಿಕೊಂಡಿದ್ದಾರೆ.

 
ಅಷ್ಟಕ್ಕೂ ಯಾರೀ ಹೊಸ ಬ್ಯೂಟಿಷಿಯನ್​ ಅಂತೀರಾ..? ಅದು ಅವರ ಮಗಳು ಸಿತಾರಾ. ಅಪ್ಪನಿಗೆ ಮನೆಯಲ್ಲಿ ಮೆನಿಕ್ಯೂರ್​ ಮಾರ್​ ಮಾಡಿದ್ದಾರೆ. ಅದರ ವಿಡಿಯೋವನ್ನ ಅಮ್ಮ ನಮ್ರತಾ ಶಿರೋಡ್ಕರ್ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಸಿತಾರಾ ಮಹೇಶ್​ ಬಾಬು ಅವರ ಉಗುರುಗಳನ್ನು ಫೈಲ್​ ಮಾಡುತ್ತಾ ಶೇಪ್​ ಕೊಡುತ್ತಿದ್ದಾರೆ. ಮನೆಯಲ್ಲಿ ಮಕ್ಕಳೊಂದಿಗೆ ಹೇಗೆಲ್ಲ ಕಾಲ ಕಳೆಯಬಹುದೋ ಹಾಗೆಲ್ಲ ಎಂಜಾಯ್​ ಮಾಡುತ್ತಿದ್ದಾರೆ ಮಹೇಶ್​ ಬಾಬು.

ಇದನ್ನೂ ಓದಿ: Tamannaah Bhatia: ಆತ ಚಾನ್ಸ್​ ಕೊಟ್ರೆ ಹತ್ತು ಸಲವಾದರೂ ಸಿದ್ಧ?: ತಮನ್ನಾ ಭಾಟಿಯಾ..!

ಸಿತಾರಾ ಬಳಿ ಅಪಾಯಿಂಟ್ಮೆಂಟ್​ ತೆಗೆದುಕೊಳ್ಳಲು ನೆಟ್ಟಿಗರು ಹಾಗೂ ಸೆಲೆಬ್ರಿಟಿಗಳು ಮೆಸೇಜ್​ ಮಾಡುತ್ತಿದ್ದಾರೆ. ಸೆಲೆಬ್ರಿಟಿ ಬ್ಯೂಟಿಷಿಯನ್​ ಎಷ್ಟು ಹಣ ಚಾರ್ಜ್​ ಮಾಡ್ತಾರೆ ಅಂತೆಲ್ಲ ಅಭಿಮಾನಿಗಳು ತಮಾಷೆ ಸಹ ಮಾಡುತ್ತಿದ್ದಾರೆ.

Parineeti Chopra: ಬೀಚ್​ನಲ್ಲಿ ಕಳೆದ ದಿನಗಳ ನೆನಪಿನಲ್ಲಿ ಪರಿಣೀತಿ ಚೋಪ್ರಾ..!
First published: May 23, 2020, 4:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading