ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಹಿಂಬಾಲಕರ ದಂಡೇ ಇದೆ. ಇನ್ಸ್ಟಾಗ್ರಾಂ ಹಾಗೂ ಟ್ವಿಟರ್ನಲ್ಲಿ ಲಕ್ಷಾಂತರ ಮಂದಿ ಅಭಿಮಾನಿಗಳು ಅವರೊಂದಿಗೆ ಸಂಪರ್ಕದಲ್ಲಿರುತ್ತಾರೆ.
ಮಹೇಶ್ ಬಾಬು ಅವರ ಸಿನಿಮಾದ ಪೋಸ್ಟರ್, ಟ್ರೇಲರ್ ಹಾಗೂ ಹಾಡುಗಳು ರಿಲೀಸ್ ಆಗುತ್ತಿದ್ದಂತೆಯೇ ಟ್ರೆಂಡ್ ಆಗುತ್ತವೆ. ಅಷ್ಟರ ಮಟ್ಟಿಗೆ ಅಭಿಮಾನಿಗಳು ಮಹೇಶ್ ಅವರನ್ನು ಇಷ್ಟಪಡುತ್ತಾರೆ. ಇಂತಹ ಫ್ಯಾನ್ಸ್ಗಳ ಋಣ ತೀರಿಸಲಾಗದು ಎಂದಿದ್ದಾರೆ ಪ್ರಿನ್ಸ್.
![Keerthy Suresh is going to share a screen with Prince Mahesh Babu in Sarkaru Vaari Pata movie]()
ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್
ಮಹೇಶ್ ಬಾಬು ಟ್ವಿಟರ್ನಲ್ಲಿ ಹೀಗೆ ಅಭಿಮಾನಿಗಳ ಕುರಿತು ಭಾವುಕರಾಗಿ ಟ್ವೀಟ್ ಮಾಡಲು ಕಾರಣವಿದೆ. ಅದು ಟ್ವಿಟರ್ನಲ್ಲಿ ಅವರನ್ನು ಹಿಂಬಾಲಿಸುವವರ ಸಂಖ್ಯೆ ಒಂದು ಕೋಟಿ ಮುಟ್ಟಿದೆ. ಇದೇ ಖುಷಿಯನ್ನು ಹಂಚಿಕೊಂಡಿರುವ ಪ್ರಿನ್ಸ್, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಟ್ವಿಟರ್ನಲ್ಲಿ ಒಂದು ಕೋಟಿ ಹಿಂಬಾಲಕರನ್ನು ಹೊಂದಿರುವ ಏಕೈಕ ದಕ್ಷಿಣ ಭಾರತದ ನಟ ಎಂಬ ಹೆಗ್ಗಳಿಕೆಯೂ ಮಹೇಶ್ ಬಾಬು ಅವರದ್ದಾಗಿದೆ. ಇನ್ನು ಸಿನಿಮಾ ವಿಷಯಕ್ಕೆ ಬಂದರೆ ಪರಶುರಾಮ್ ನಿರ್ದೇಶನದಲ್ಲಿ ಮಹೇಶ್ ಬಾಬು ಸರ್ಕಾರು ವಾರಿ ಪಾಟ ಸಿನಿಮಾ ಮಾಡುತ್ತಿದ್ದಾರೆ. ಇದರಲ್ಲಿ ಕೀರ್ತಿ ಸುರೇಶ್ ಹಾಗೂ ನಿವೇತಾ ಥಾಮಸ್ ನಾಯಕಿಯರಾಗಿದ್ದಾರೆ.
Urvashi Rautela: ಕಿರುತೆರೆ ನಟನೊಂದಿಗೆ ಸಪ್ತಪದಿ ತುಳಿದ್ರಾ ಐರಾವತ ಬೆಡಗಿ ಊರ್ವಶಿ ರೌಟೆಲ..!
ಇದನ್ನೂ ಓದಿ: ಪರಿಸ್ಥಿತಿ ಸರಿಹೋದ ನಂತರ ಅಭಿಮಾನಿಗಳನ್ನು ಭೇಟಿ ಮಾಡುತ್ತೇನೆ ಎಂದ ಶಿವರಾಜ್ ಕುಮಾರ್..! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ