ಮಹೇಶ್​ ಬಾಬು ಅಭಿನಯದ ಮಹರ್ಷಿ ಸಿನಿಮಾದ ಸ್ಟೋರಿ ಲೀಕ್​: ಅಭಿಮಾನಿಗಳು ಶಾಕ್​..!

ಬಾಹುಬಲಿ- ದ ಕನ್​ಕ್ಲೂಷನ್​ ಸಿನಿಮಾದ ಕತೆಯೂ ಚಿತ್ರೀಕರಣದ ಸಮಯದಲ್ಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಹಾಗೆಯೇ ಈಗ ಪ್ರಿನ್ಸ್​ ಮಹೇಶ್​ ಬಾಬು ಅಭಿನಯದ ಮಹರ್ಷಿ ಸಿನಿಮಾದ ಕತೆಯೂ ಲೀಕಾಗಿದ್ದು ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡ್​ ಆಗುತ್ತಿದೆಯಂತೆ.

Anitha E | news18
Updated:February 12, 2019, 4:34 PM IST
ಮಹೇಶ್​ ಬಾಬು ಅಭಿನಯದ ಮಹರ್ಷಿ ಸಿನಿಮಾದ ಸ್ಟೋರಿ ಲೀಕ್​: ಅಭಿಮಾನಿಗಳು ಶಾಕ್​..!
ಮಹರ್ಷಿ ಸಿನಿಮಾ ಪೋಸ್ಟರ್​
  • News18
  • Last Updated: February 12, 2019, 4:34 PM IST
  • Share this:
ಪ್ರಿನ್ಸ್​ ಮಹೇಶ್​ ಬಾಬು ಅಭಿನಯದ 'ಮಹರ್ಷಿ' ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಇರುವ ನಿರೀಕ್ಷೆ ಹಾಗೂ ಕುತೂಹಲದ ಬಗ್ಗೆ ಹೇಳಬೇಕಿಲ್ಲ. ಅದರಲ್ಲೂ ಮಹೇಶ್​ ಅವರ 25ನೇ ಸಿನಿಮಾ ಇದಾಗಿರುವ ಕಾರಣ ಅಭಿಮಾನಿಗಳು ಕಾತರರಾಗಿದ್ದಾರೆ. ಹೀಗಿರುವಾಗಲೇ 'ಮಹರ್ಷಿ' ಸಿನಿಮಾದ ಕತೆ ಇದು ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಆಗುತ್ತಿದೆ. ಇದನ್ನು ಕಂಡ ಪ್ರಿನ್ಸ್​ ಅಭಿಮಾನಿಗಳಿಗೆ ಶಾಕ್​ ಆಗಿದೆ.

ಇದನ್ನೂ ಓದಿ: Movie Review: ನೋಡಲೇಬೇಕಾದ ಸಿನಿಮಾ 'ಗಲ್ಲಿ ಬಾಯ್​': ರಣವೀರ್​-ಅಲಿಯಾ ಅಭಿನಯಕ್ಕೆ ಫಿದಾ ಆದ ಪ್ರೇಕ್ಷಕ

ವಂಶಿ ಪೈಡಿಪಲ್ಲಿ ನಿರ್ದೇಶನದ ಈ ಸಿನಿಮಾದ ಬಹುಪಾಲು ಚಿತ್ರೀಕರಣ ಮುಗಿದ್ದು, ಉಳಿದ ಭಾಗದ ಶೂಟಿಂಗ್​ ವೇಗದಲ್ಲಿ ನಡೆಯುತ್ತಿದೆ. ಈ ಸಿನಿಮಾ ಮೂಲಕ ಮಹೇಶ್​ ಮತ್ತೊಮ್ಮೆ ಸಂಚಲ ಸೃಷ್ಟಿಸಲಿದ್ದಾರೆ ಎಂದು ನಂಬಿದ್ದಾರೆ ಅಭಿಮಾನಿಗಳು.

ಈ ಸಿನಿಮಾದಲ್ಲಿ ಪ್ರಿನ್ಸ್​ ಮತ್ತೊಮ್ಮೆ ಶ್ರೀಮಂತನಾಗಿ ಅಭಿನಯಿಸುತ್ತಿದ್ದು, ವಿದೇಶದಲ್ಲಿರುವ ಕಾರ್ಪೋರೇಟ್​ ಕಂಪೆನಿಯ ಸಿಇಒ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲೂ ತನ್ನ ಸ್ನೇಹಿತನಿಗಾಗಿ ಭಾರತಕ್ಕೆ ಬರುವ ಮಹರ್ಷಿ, ಎಲ್ಲವನ್ನೂ ಬಿಟ್ಟು ಸ್ನೇಹಿತನೊಂದಿಗೆ ಸಾಮಾನ್ಯನಂತೆ ಜೀವನ ನಡೆಸುವುದೇ ಈ ಸಿನಿಮಾದ ಕತೆಯಂತೆ. ಇದೇ ಕಥೆ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: Yajamana Trailer: ಅಭಿಮಾನಿಗಳೊಂದಿಗೆ 'ಯಜಮಾನ'ನ ಸಂಭ್ರಮಾಚರಣೆ..!

ಸಿನಿಮಾ ತೆರೆ ಕಂಡ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಇಡೀ ಸಿನಿಮಾವನ್ನೇ ನೋಡಬಹುದಾದ ಕಾಲದಲ್ಲಿ, ಚಿತ್ರದ ಚಿತ್ರೀಕರಣ ಮುಗಿಯುವ ಮುನ್ನವೇ ಸಿನಿಮಾ ಕತೆ ಲೀಕ್​ ಆಗಿದೆ ಎನ್ನಲಾಗುತ್ತಿದೆ. ಅದರಂತೆ ಈ ಹಿಂದೆ 'ಬಾಹುಬಲಿ- ದ ಕನ್​ಕ್ಲೂಷನ್​' ಸಿನಿಮಾದ ಕತೆಯೂ ಆಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಆದರೆ ಅದರಿಂದ ಸಿನಿಮಾಗೆ ಯಾವುದೇ ತೊಂದರೆಯಾಗಲಿಲ್ಲ.

ಏನೇ ಆಗಲಿ ಸಿನಿಮಾದ ಕತೆ ಗೊತ್ತಾದರೂ ಸಹ  ಕತೆ ಚೆನ್ನಾಗಿದ್ದರೆ ಪ್ರಿನ್ಸ್​ ಅಭಿನಯ ನೋಡಲು ಅಭಿಮಾನಿಗಳು ಚಿತ್ರಮಂದಿರಕ್ಕೆ ಹೋಗದೆ ಇರುವುದಿಲ್ಲ.PHOTOS: ಇದೇ ಶುಕ್ರವಾರ ತೆರೆಗಪ್ಪಳಿಸಲಿದೆ 'ಕೆಮಿಷ್ಟ್ರಿ ಆಫ್​ ಕರಿಯಪ್ಪ' ಸಿನಿಮಾ..!
First published:February 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading