Rashmika Mandanna: ರಶ್ಮಿಕಾ ಕಂಡರೆ ಪ್ರಿನ್ಸ್ ಮಹೇಶ್​ಗೆ ಭಯವಂತೆ: ಕಿರಿಕ್​ ಬ್ಯೂಟಿ ಗ್ಲಾಮರಸ್​ ಪಾತ್ರಕ್ಕೆ ಒಪ್ಪುವುದಿಲ್ಲವಾ..?

Sarileru Neekevvaru: ಇಂತಹ ನಟಿಯನ್ನು ಇಷ್ಟಪಟ್ಟು ಪ್ರಿನ್ಸ್​ ಮಹೇಶ್​ ಬಾಬು ಅಭಿನಯದ ಸರಿಲೇರು ನೀಕೆವ್ವರು ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು. ಆದರೆ ಈಗ ರಶ್ಮಿಕಾ ನಾಯಕಿಯಾಗಿರುವ ಕಾರಣಕ್ಕೆ ಮಹೇಶ್​ ಬಾಬುಗೆ ಭಯವಾಗುತ್ತಿದೆಯಂತೆ. 

Anitha E | news18-kannada
Updated:October 9, 2019, 10:21 AM IST
Rashmika Mandanna: ರಶ್ಮಿಕಾ ಕಂಡರೆ ಪ್ರಿನ್ಸ್ ಮಹೇಶ್​ಗೆ ಭಯವಂತೆ: ಕಿರಿಕ್​ ಬ್ಯೂಟಿ ಗ್ಲಾಮರಸ್​ ಪಾತ್ರಕ್ಕೆ ಒಪ್ಪುವುದಿಲ್ಲವಾ..?
ಪ್ರಿನ್ಸ್​ ಮಹೇಶ್​ ಬಾಬು ಹಾಗೂ ರಶ್ಮಿಕಾ ಮಂದಣ್ಣ
Anitha E | news18-kannada
Updated: October 9, 2019, 10:21 AM IST
ರಶ್ಮಿಕಾ ಟಾಲಿವುಡ್​ನಲ್ಲಿ ಬೇಡಿಕೆಯಲ್ಲಿರುವ ನಟಿ. ಈಗಾಗಲೇ ಇವರು ಅಭಿನಯಿಸಿರುವ ಸಿನಿಮಾಗಳಲ್ಲಿ 'ದೇವ್​ದಾಸ್​' ಒಂದು ಹೊರತುಪಡಿಸಿದರೆ, ಉಳಿದೆಲ್ಲ ಸಿನಿಮಾಗಳು ಬಾಕ್ಸಾಫಿಸ್​ನಲ್ಲಿ ಸದ್ದು ಮಾಡಿವೆ.

ಇಂತಹ ನಟಿಯನ್ನು ಇಷ್ಟಪಟ್ಟು ಪ್ರಿನ್ಸ್​ ಮಹೇಶ್​ ಬಾಬು ಅಭಿನಯದ 'ಸರಿಲೇರು ನೀಕೆವ್ವರು' ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು. ಆದರೆ ಈಗ ರಶ್ಮಿಕಾ ನಾಯಕಿಯಾಗಿರುವ ಕಾರಣಕ್ಕೆ ಮಹೇಶ್​ ಬಾಬುಗೆ ಭಯವಾಗುತ್ತಿದೆಯಂತೆ.

Destroy the evil...Celebrate



Loading...

ಹೌದು, ಅಭಿನಯಿಸಿದ ಚಿತ್ರಗಳಿಂದಲೇ ಹೆಸರು ಮಾಡಿರುವ ನಟಿ ರಶ್ಮಿಕಾರಿಂದ ಎಲ್ಲಿ ತಮ್ಮ ಚಿತ್ರ ನೆಲಕಚ್ಚುತ್ತದೆಯೋ ಅನ್ನೋ ಆತಂಕ ಮಹೇಶ್​ ಬಾಬು ಅವರಿಗೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಲೀಕ್​ ಆಯ್ತು ನಿರ್ದೇಶಕ ರಾಜಮೌಳಿ ಕನಸಿನ ಪ್ರಾಜೆಕ್ಟ್​ RRR ಟೈಟಲ್

ಕಾರಣ ಇಷ್ಟೆ, ಎಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ಅಭಿನಯಿಸಿರುವ ರಶ್ಮಿಕಾ ಎಲ್ಲಿ ಗ್ಲಾಮರಸ್ ಪಾತ್ರಕ್ಕೆ ಒಗ್ಗುವಲ್ಲಿ ಎಡವುತ್ತಾರೋ ಅನ್ನೋ ಭಯ ಪ್ರಿನ್ಸ್​ಗೆ ಆರಂಭವಾಗಿದೆಯಂತೆ. ಅದಕ್ಕೆ ಸಿನಿಮಾಗೆ ಗ್ಲಾಮರಸ್​ ಟಚ್​ ಕೊಡೋಕೆ ಪೂಜಾ ಹೆಗ್ಡೆ ಹಾಗೂ ತಮನ್ನಾರನ್ನು ಈ ಸಿನಿಮಾದಲ್ಲಿ ತರಲು ನಿರ್ದೇಶಕರು ಆಲೋಚಿಸುತ್ತಿದ್ದಾರಂತೆ.

ಆದರೆ, ರಶ್ಮಿಕಾ ಈ ಹಿಂದೆ ಕೆಲವು ಫೋಟೋಶೂಟ್​ಗಳಲ್ಲಿ ತುಂಡುಗೆ ತೊಟ್ಟು ಗ್ಲಾಮಸರ್​ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಟ್ರಾಲ್​ಗೂ ಬಲಿಯಾಗಿದ್ದರು.

Rashmika Mandanna creates a new controversy in Kollywood
ರಶ್ಮಿಕಾ ಮಂದಣ್ಣ


'ಮಹರ್ಷಿ' ಸಿನಿಮಾದಲ್ಲಿ ಮಹೇಶ್​ ಜತೆ ನಟಿಸಿರುವ ಪೂಜಾ ಹಾಗೂ ತಮನ್ನಾ 'ಸರಿಲೇರು ನೀಕೆವ್ವರು' ಚಿತ್ರದಲ್ಲಿ ಐಟಂ ಹಾಡಿಗೆ ಸೊಂಟ ಬಳುಕಿಸುವ ಮೂಲಕ ಸಿನಿಮಾಗೆ ಗ್ಲಾಮರಸ್​ ಟಚ್​ ಕೊಡಲಿದ್ದಾರೆ ಎನ್ನಲಾಗುತ್ತಿದೆ.

ಅನಿಲ್​ ರಾವಿಪುಡಿ ನಿರ್ದೇಶನದ ಈ ಚಿತ್ರದಲ್ಲಿ ವಿಜಯ ಶಾಂತಿ ಮತ್ತೆ ಬಣ್ಣ ಹಚ್ಚಲಿದ್ದಾರೆ. ದಸರಾ ಹಬ್ಬದ ಅಂಗವಾಗಿ ಮಹೇಶ್​ ಬಾಬು ನಿನ್ನೆಯಷ್ಟೆ ಚಿತ್ರದ ಹೊಸ ಪೋಸ್ಟರ್​ ಅನ್ನು ಹಂಚಿಕೊಂಡಿದ್ದರು.

Rashmika Mandanna: ರಾಯಲ್​ ಲುಕ್​ನಲ್ಲಿ ಮಿಂಚಿದ ಕಿರಿಕ್​ ಹುಡುಗಿ ರಶ್ಮಿಕಾ ಮಂದಣ್ಣ..!


First published:October 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...