ಟಾಲಿವುಡ್​ನ ಪ್ರಿನ್ಸ್​ ಮಹೇಶ್​ ಬಾಬು ಈಗ ವಿಶ್ವದ ಐದನೇ ಅತಿದೊಡ್ಡ ಶ್ರೀಮಂತ ..!

Anitha E | news18
Updated:December 26, 2018, 3:25 PM IST
ಟಾಲಿವುಡ್​ನ ಪ್ರಿನ್ಸ್​ ಮಹೇಶ್​ ಬಾಬು ಈಗ ವಿಶ್ವದ ಐದನೇ ಅತಿದೊಡ್ಡ ಶ್ರೀಮಂತ ..!
ನಟ ಮಹೇಶ್​ ಬಾಬು
  • News18
  • Last Updated: December 26, 2018, 3:25 PM IST
  • Share this:
ಈಗಾಗಲೇ ಟೀಸರ್​, ಫಸ್ಟ್​ಲುಕ್​ ಹಾಗೂ ಪೋಸ್ಟರ್​ಗಳಿಂದಲೇ ಕೂತೂಹಲ ಹೆಚ್ಚಿಸಿದೆ ಪ್ರಿನ್ಸ್​ ಮಹೇಶ್​ ಬಾಬು ಅಭಿನಯದ 'ಮಹರ್ಷಿ' ಸಿನಿಮಾ. ಈ ಇದರಲ್ಲಿ ಪೂಜಾ ಹೆಗ್ಡೆ ನಾಯಕಿಯಾದರೆ, ಅಲ್ಲರಿ ನರೇಶ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಮಗನಿಗೆ ಅಭಿನಯದ ಪಾಠ ಮಾಡಿದ ರೆಬೆಲ್​ ವಿಡಿಯೋ: ಮಗನ ಸಿನಿಮಾ ಸೆಟ್​ಗೆ ಭೇಟಿ ನೀಡಿದ್ದ ಅಂಬರೀಷ

'ಭರತ್​ ಅನೆ ನೇನು' ಸಿನಿಮಾದ ಯಶಸ್ಸಿನ ನಂತರ ಮಹೇಶ್​ ಬಾಬು ನಿರ್ದೇಶಕ ವಂಶಿ ಪೈಡಿಪಲ್ಲಿ ಅವರೊಂದಿಗೆ 'ಮಹರ್ಷಿ'ಗಾಗಿ ಕೈ ಜೋಡಿಸಿದ್ದಾರೆ. ಈ ಸಿನಿಮಾದಲ್ಲಿ ಕಾಲೇಜು ವಿದ್ಯಾರ್ಥಿಯ ಪಾತ್ರದಲ್ಲಿ ಮಹೇಶ್​ ಕಾಣಿಸಿಕೊಂಡಿರುವುದು ಈಗಾಗಲೇ ಟೀಸರ್​ನಿಂದ ಗೊತ್ತಾಗಿದೆ.

ಆದರೆ ಅದಕ್ಕೂ ಮಿಗಿಲಾಗಿ ಮಹೇಶ್​ ಅಭಿನಯಿಸುತ್ತಿರುವ ಪಾತ್ರದ ಕುರಿತು ಮಹತ್ತರ ವಿಷಯವೊಂದು ಹೊರ ಬಿದ್ದಿದೆ. ಅದು ಈ ಸಿನಿಮಾದಲ್ಲಿ ಮತ್ತೊಮ್ಮೆ ಪ್ರಿನ್ಸ್​ ಕೋಟ್ಯಧೀಶ್ವರನ ಪಾತ್ರದಲ್ಲಿ ಅಭಿನಯಿಸಲಿದ್ದಾರಂತೆ. ಕೇವಲ ಕೋಟ್ಯಧೀಶ್ವರನಲ್ಲ. ವಿಶ್ವದಲ್ಲೇ 5ನೇ ಅತಿ ದೊಡ್ಡ ಶ್ರೀಮಂತನಾಗಿದ್ದಾರಂತೆ. ಹೀಗೆಂದು ಟಾಲಿವುಡ್​ ಗಲ್ಲಿಯಲ್ಲಿ ವಿಷಯ ಹರಿದಾಡುತ್ತಿದೆ.

ಒಟ್ಟಾರೆ ಮಹೇಶ್​ ಬಾಬು ಅವರ ಈ ಸಿನಿಮಾ ಒಂದಲ್ಲ ಒಂದು ವಿಷಯಗಳಿಂದ ಸುದ್ದಿಯಾಗುತ್ತಿದ್ದು, ಅಭಿಮಾನಿಗಳು ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.

First published:December 26, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading