Vajpayee Biopic: ತೆರೆಮೇಲೆ ಮಾಜಿ ಪ್ರಧಾನಿ ಜೀವನ ಚರಿತ್ರೆ, ಅಜಾತಶತ್ರು ಬಯೋಪಿಕ್ ಘೋಷಣೆ

‘ಅಟಲ್​‘ ಚಿತ್ರದ ಪೋಸ್ಟರ್​

‘ಅಟಲ್​‘ ಚಿತ್ರದ ಪೋಸ್ಟರ್​

ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರ ಜೀವನದ ಬಗ್ಗೆ ಬಾಲಿವುಡ್​ ನಲ್ಲಿ (Bollywood) ಒಂದು ಸಿನಿಮಾ ಸಿದ್ಧಗೊಳ್ಳುತ್ತಿದೆ. ಸದ್ಯಕ್ಕೆ ಟೈಟಲ್ ಪೋಸ್ಟರ್ (Poster)​ ಮತ್ತು ಟೈಟಲ್ ಟೀಸರ್​ ನ್ನು ಬಿಡುಗಡೆ ಮಾಡಲಾಗಿದೆ.

  • Share this:

ಮತ್ತೊಂದು ಮಹಾನ್ ನಾಯಕನ ಬಯೋಪಿಕ್ (Biopic) ತೆರೆಮೇಲೆ ಬರಲು ಸಿದ್ದವಾಗುತ್ತಿದೆ. ಈಗಾಗಲೇ ಹಲವು ರಾಜಕಾರಣಿಗಳು, ಚಿತ್ರರಂಗದ ಪ್ರಮುಖರು, ಮಾಜಿ ಮುಖ್ಯಮಂತ್ರಿಗಳು, ಸ್ವಾತಂತ್ರ್ಯ ಹೋರಾಟಗಾರರು, ಕ್ರೀಡಾಪಟುಗಳು, ಹೋರಾಟಗಾರರ ಬದುಕು ತೆರೆಕಂಡಿದೆ. ಅದೇ ರೀತಿ ಇದೀಗ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರ ಜೀವನದ ಬಗ್ಗೆ ಬಾಲಿವುಡ್​ ನಲ್ಲಿ (Bollywood) ಒಂದು ಸಿನಿಮಾ ಸಿದ್ಧಗೊಳ್ಳುತ್ತಿದೆ. ಸದ್ಯಕ್ಕೆ ಟೈಟಲ್ ಪೋಸ್ಟರ್ (Poster)​ ಮತ್ತು ಟೈಟಲ್ ಟೀಸರ್​ ನ್ನು ಬಿಡುಗಡೆ ಮಾಡಲಾಗಿದೆ. ಆದರೆ ವಾಜಪೇಯಿ ಅವರ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ, ಯಾವ ಯಾವ ಪಾತ್ರಗಳು ಇರಲಿವೆ ಎಂಬುದರ ಕುರಿತು ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.


‘ಅಟಲ್​‘ ಚಿತ್ರದ ಟೈಟಲ್ ಟೀಸರ್ ಬಿಡುಗಡೆ:


ಇನ್ನು, ವಾಜಪೇಯಿ ಅವರ ಜೀವನಾಧಾರಿತ ಚಿತ್ರ ಮಾಡುವುದಾಗಿ ಈಗಾಗಲೇ ಅಧಿಕೃತ ಘೋಷಣೆಯಾಗಿದೆ. ಅಲ್ಲದೇ ಈ ಸಂಬಂದ ಚಿತ್ರದ ಪೋಸ್ಟರ್​ ಮತ್ತು ಟೈಟಲ್​ ಟೀಸರ್​ ಅನ್ನು ಬಿಡುಗಡೆ ಮಾಡಲಾಗಿದೆ. ಚಿತ್ರಕ್ಕೆ ‘ಅಟಲ್‘ ಎಂದು ಹೆಸರಿಡಲಾಗಿದೆ. ಅಲ್ಲದೇ ಚಿತ್ರದ ಸಂಪೂರ್ನ ಹೆಸರು ಬಂದು, ‘ಮೇ ರಹೂ ಯಾ ನಾ ರಹೊ ಯೇ ದೇಶ್ ರೆಹ್ನಾ ಚಾಹಿಯೇ; ಅಟಲ್‘ ಎಂದಾಗಿದೆ. ಇದರರ್ಥ, ನಾನು ಇರಲಿ, ಇಲ್ಲದೇ ಇರಲಿ. ಈ ದೇಶ ಇರಬೇಕು; ಅಟಲ್‘ ಎಂದಾಗಿದೆ. ಈ ಚಿತ್ರದಲ್ಲಿ ಅವರ ಜೀವನ ಮತ್ತು ರಾಜಕೀಯ ಜೀವನ, ಪ್ರಧಾನಿ ಹುದ್ದೆ ಎಲ್ಲದರ ಚಿತ್ರಣ ಇರಲಿದೆ.



ತೆರಮೇಲೆ ವಾಜಪೇಯಿ ಅವರ ಜೀವನ:


ಪ್ರಸಿದ್ಧ ಲೇಖಕ ಉಲ್ಲೇಖ್ ಎನ್‌ಪಿ ಅವರ 'ದಿ ಅನ್‌ಟೋಲ್ಡ್ ವಾಜಪೇಯಿ: ಪೊಲಿಟೀಶಿಯನ್ ಆ್ಯಂಡ್ ಪ್ಯಾರಡಾಕ್ಸ್' ಪುಸ್ತಕವನ್ನು ಆಧರಿಸಿ ಈ ಚಿತ್ರ ನಿರ್ಮಿಸಲಾಗಿದೆ. ನಿರ್ಮಾಪಕರಾದ ವಿನೋದ್ ಭಾನುಶಾಲಿ ಮತ್ತು ಸಂದೀಪ್ ಸಿಂಗ್ ಅವರು ಪುಸ್ತಕದ ಹಕ್ಕುಗಳನ್ನು ಪಡೆದುಕೊಂಡಿರುವುದಾಗಿ ಇತ್ತೀಚೆಗೆ ಘೋಷಿಸಿದ್ದಾರೆ. ಈ ವೇಳೆ ಮಾತನಾಡಿದ ನಿರ್ಮಾಪಕ ವಿನೋದ್, ‘ನಾನು ವಾಜಪೇಯಿ ಅವರ ಕಟ್ಟಾ ಅಭಿಮಾನಿ. ನಮ್ಮ ದೇಶ ನಿರ್ಮಾಣಕ್ಕೆ ಅವರ ಕೊಡುಗೆ ಅಮೂಲ್ಯವಾದುದು. ಅದಕ್ಕಾಗಿಯೇ ಅವರ ಪರಂಪರೆಯನ್ನು ಬೆಳ್ಳಿತೆರೆಗೆ ತರುವುದನ್ನು ನಾವು ದೊಡ್ಡ ಗೌರವವೆಂದು ಪರಿಗಣಿಸುತ್ತೇವೆ‘ ಎಂದು ಅವರು ಹೇಳಿದ್ದಾರೆ.



2023ರ ವಾಜಪೇಯಿ ಜನ್ಮದಿನದಂದು ಚಿತ್ರ ಬಿಡುಗಡೆ:


ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದ ಇತಿಹಾಸದ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಚಿತ್ರವು ಅವರ ರಾಜಕೀಯ ಸಿದ್ಧಾಂತ ಮಾತ್ರವಲ್ಲದೆ ಮಾನವೀಯ ಮತ್ತು ಕಾವ್ಯಾತ್ಮಕ ಅಂಶಗಳನ್ನು ಅನ್ವೇಷಿಸುತ್ತದೆ ಎಂದು ವಿನೋದ್ ಹೇಳಿದ್ದಾರೆ. ಸದ್ಯ ವಾಜಪೇಯಿ ಪಾತ್ರವನ್ನು ನಿರ್ವಹಿಸುವ ನಟನನ್ನು ಹುಡುಕುತ್ತಿದ್ದೇವೆ. ಈ ಚಿತ್ರದ ನಿರ್ದೇಶಕರನ್ನು ಶೀಘ್ರದಲ್ಲೇ ಪ್ರಕಟಿಸುತ್ತೇವೆ. ಮುಂದಿನ ವರ್ಷದ ಆರಂಭದಲ್ಲಿ ಚಿತ್ರ ಸೆಟ್ಟೇರಲಿದೆ. ವಾಜಪೇಯಿ ಅವರ 99ನೇ ಜನ್ಮದಿನದ ಸಂದರ್ಭದಲ್ಲಿ 2023ರ ಕ್ರಿಸ್‌ಮಸ್‌ಗೆ ಪ್ರೇಕ್ಷಕರ ಮುಂದೆ ಬರಲಾಗುವುದು ಎಂದು ಮತ್ತೋರ್ವ ನಿರ್ಮಾಪಕ ಸಂದೀಪ್ ಸಿಂಗ್ ಹೇಳಿದ್ದಾರೆ.


ಇದನ್ನೂ ಓದಿ: Vikram: ಕನ್ನಡದಲ್ಲೂ ನೋಡಿ ಕಮಲ್ ಹಾಸನ್ ‘ವಿಕ್ರಮ್‘ ಚಿತ್ರ, OTT ರಿಲೀಸ್ ಡೇಟ್​ ಅನೌನ್ಸ್


ವಾಜಪೇಯಿ ಅವರ ಜೀವನ:


ಅಟಲ್ ಬಿಹಾರಿ ವಾಜಪೇಯಿ ಅವರು ಡಿಸೆಂಬರ್ 25, 1924 ರಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜನಿಸಿದರು. ಅಟಲ್ ಬಿಹಾರಿ ವಾಜಪೇಯಿ ಅವರು ಭಾರತೀಯ ಜನತಾ ಪಕ್ಷದ ಪರವಾಗಿ ಪ್ರಧಾನಿಯಾದ ಮೊದಲ ನಾಯಕ. ಅವರು ಬ್ರಹ್ಮಚಾರಿಯಾಗಿದ್ದರು. ಮೊದಲ ಬಾರಿಗೆ ಎರಡನೇ ಲೋಕಸಭೆಗೆ ಆಯ್ಕೆ ಸಹ ಆಗಿದ್ದರು. ಮಧ್ಯದಲ್ಲಿ 3 ಮತ್ತು 9ನೇ ಲೋಕಸಭೆಯನ್ನು ಹೊರತುಪಡಿಸಿ 14 ನೇ ಲೋಕಸಭೆಯ ಅಂತ್ಯದವರೆಗೆ ಸಂಸತ್ತನ್ನು ಪ್ರತಿನಿಧಿಸಿದ್ದರು. ಎರಡು ಬಾರಿ ರಾಜ್ಯಸಭೆಗೂ ಆಯ್ಕೆಯಾಗಿದ್ದರು. ಅವರು 1968 ರಿಂದ 1973ರ ವರೆಗೆ ಜನಸಂಘ ಪಕ್ಷದ ಅಧ್ಯಕ್ಷರಾಗಿದ್ದರು ಮತ್ತು 1980 ರಿಂದ 1986ರ ವರೆಗೆ ಭಾರತೀಯ ಜನತಾ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

top videos
    First published: