ಟಾಲಿವುಡ್​ ಪ್ರಿನ್ಸ್​​ ಮಹೇಶ್​ ಬಾಬು ಹುಟ್ಟುಹಬ್ಬಕ್ಕೆ ತಿಂಗಳ ಮುಂಚೆಯೇ ಶುಭಾಷಯಗಳ ಸುರಿಮಳೆ

news18
Updated:June 29, 2018, 9:52 AM IST
ಟಾಲಿವುಡ್​ ಪ್ರಿನ್ಸ್​​ ಮಹೇಶ್​ ಬಾಬು ಹುಟ್ಟುಹಬ್ಬಕ್ಕೆ ತಿಂಗಳ ಮುಂಚೆಯೇ ಶುಭಾಷಯಗಳ ಸುರಿಮಳೆ
news18
Updated: June 29, 2018, 9:52 AM IST
ನ್ಯೂಸ್​ 18 ಕನ್ನಡ 

ಟಾಲಿವುಡ್​ ಹಾಗೂ ಕಾಲಿವುಡ್​ನಲ್ಲಿ ಸಿನಿ ತಾರೆಯರ ಅಭಿಮಾನಿಗಳು ತಮ್ಮ ಹುಚ್ಚು ಅಭಿಮಾನಕ್ಕೆ ಹೆಸರುವಾಸಿ. ನೆಚ್ಚಿನ ತಾರೆಯರಿಗೆ ಕೆಲವರು ದೇವಾಲಯಗಳನ್ನು ನಿರ್ಮಿಸಿದರೆ, ಮತ್ತೆ ಕೆಲವರು ದಾನ-ಧರ್ಮ ಮಾಡುತ್ತಾರೆ. ಇನ್ನೂ ಸ್ಟಾರ್​ಗಳ ಹುಟ್ಟುಹಬ್ಬ ಬಂದರಂತೂ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇರುವುದಿಲ್ಲ.

ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚುತ್ತಿದ್ದಂತೆಯೇ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರ ಹುಟ್ಟುಹಬ್ಬಕ್ಕೆ ಉತ್ಸವಗಳನ್ನೇ ಆಚರಿಸಲು ಪ್ರಾರಂಭಿಸಿದ್ದಾರೆ.  ಈಗ ಟಾಲಿವುಡ್​ ಪ್ರಿನ್ಸ್​ ಮಹೇಶ್ ಬಾಬು ಅವರ ಹುಟ್ಟುಹಬ್ಬಕ್ಕೆ ಶುಭಾಷಯಗಳ ಸುರಿಮಳೆಯೇ ಆಗುತ್ತಿದೆ.

ಮಹೇಶ್ ಬಾಬು ಸದ್ಯ ತಮ್ಮ 25ನೇ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆಗಸ್ಟ್ 9 ಕ್ಕೆ ಪ್ರಿನ್ಸ್ ಹುಟ್ಟುಹಬ್ಬ. ಅದಕ್ಕೆ ಇನ್ನೂ ಒಂದು ತಿಂಗಳು ಇರುವಾಗಲೇ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಪ್ರಿನ್ಸ್​ ಹುಟ್ಟುಹಬ್ಬಕ್ಕೆ ಶುಭ ಕೋರಲು ಆರಂಭಿಸಿದ್ದಾರೆ.


Loading...

First published:June 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...