ಜಗ್ಗೇಶ್​ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಪ್ರೀಮಿಯರ್​ ಪದ್ಮಿನಿ..!

ಹುಟ್ಟುಹಬ್ಬ ಎಂದ ಕೂಡಲೇ ನೆನಪಾಗೋದು ಗಿಫ್ಟ್​ಗಳು. ನಾಳೆ ನವರಸ ನಾಯಕ ಜಗ್ಗೇಶ್​ ಅವರ ಹುಟ್ಟುಹಬ್ಬ. ಅವರಿಗೆ ಉಡುಗೊರೆಯಾಗಿ ನಾಳೆ ಅವರಿಷ್ಟದ ಪ್ರೀಮಿಯರ್​ ಪದ್ಮಿನಿ ಉಡುಗೊರೆಯಾಗಿ ಸಿಗಲಿದೆ.

Anitha E | news18
Updated:March 16, 2019, 6:26 PM IST
ಜಗ್ಗೇಶ್​  ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಪ್ರೀಮಿಯರ್​ ಪದ್ಮಿನಿ..!
ನಾಳೆ (ಮಾ.17) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಜಗ್ಗೇಶ್​
Anitha E | news18
Updated: March 16, 2019, 6:26 PM IST
ನಾಳೆ (ಮಾ.17) ನವರಸ ನಾಯಕ ಜಗ್ಗೇಶ್​ ಹುಟ್ಟುಹಬ್ಬ. ಅಲ್ಲದೆ ಅವರಿಗೆ ಇತ್ತೀಚೆಗೆ ಪ್ರೀಮಿಯರ್​ ಪದ್ಮಿನಿ ಮೇಲೆ ತುಂಬಾ ಲವ್​ ಆಗಿದೆಯಂತೆ. ಅದಕ್ಕೆ ಅವರ ಹುಟ್ಟುಹಬ್ಬಕ್ಕೆ ಅವರಿಗೆ 'ಪ್ರೀಮಿಯರ್​ ಪದ್ಮಿನಿ'ಯನ್ನ ಉಡುಗೊರೆಯಾಗಿ ನೀಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಸೈನಾ ನೆಹ್ವಾಲ್​ ಜೀವನಾಧಾರಿತ ಚಿತ್ರದಲ್ಲಿ ಶ್ರದ್ಧಾ ಕಪೂರ್​ ಬದಲಾಗಿ ಪರಿಣಿತಿ ಚೋಪ್ರಾ..!

ಹೌದು, ಜಗ್ಗೇಶ್​ ಅವರ ಬಹು ನಿರೀಕ್ಷಿತ ಸಿನಿಮಾ 'ಪ್ರೀಮಿಯರ್​ ಪದ್ಮಿನಿ'. ಈ ಚಿತ್ರ ತಂಡದವರು ನವರಸ ನಾಯಕನಿಗೆ ಉಡುಗೊರೆಯಾಗಿ ನಾಳೆ ಸಿನಿಮಾದ ಟ್ರೈಲರ್​ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

#SudhaRani about @premierpadmini First Teaser Launch.@Jaggesh2 #ShrutiNaiduChitra #RameshIndra #KrishnaSarthak #SudhaRani #PramodPanju #HithaChandrashekar #VivekSimha #MadhooShah @Dbeatsmusik #PremierPadminiTeaserOnMar17 pic.twitter.com/D2Tsq7Ve1G


Loading...

ಜಗ್ಗೇಶ್ ಅವರು ಯಾವುದೇ ಶುಭ ಕಾರ್ಯ ಅಥವಾ ಶುಭ ದಿನವಿದ್ದರೂ ಅದನ್ನು  ಮಂತ್ರಾಲಯದಲ್ಲಿ ರಾಯರ ಜತೆ ಆಚರಿಸಿಕೊಳ್ಳುತ್ತಾರೆ. ಅದಕ್ಕಾಗಿಯೇ ಅವರು ಇಂದೇ ರಾಯರ ದರ್ಶನಕ್ಕೆ ಹೊರಟಿದ್ದಾರೆ.

ಆದರೆ, ಜೀವನದ ಭಾವನಾತ್ಮಕ ತುಮುಲಗಳ ಕಥೆ ಹೇಳುವ 'ಪ್ರೀಮಿಯರ್​ ಪದ್ಮಿನಿ' ಟ್ರೈಲರ್  ನಾಳೆ ಹೊರಬರಲಿದೆ. ಶೃತಿ ನಾಯ್ಡು ನಿರ್ಮಾಣ, ರಮೇಶ್ ಇಂದಿರಾ ಅವರ ನಿರ್ದೇಶನ ಈ ಚಿತ್ರಕ್ಕಿದೆ.

ಇದನ್ನೂ ಓದಿ: ತಾತ ದಿಲೀಪ್​ ಕುಮಾರ್​ ಹಾದಿಯಲ್ಲೇ ನಡೆದ ಸಯೇಷಾ: ತನಗಿಂತ 17 ವರ್ಷ ದೊಡ್ಡ ನಟನನ್ನು ಮದುವೆಯಾದ ನಟಿ..!

ನವರಸ ನಾಯಕ ಜಗ್ಗೇಶ್ ಅವರು ಏರಿರುವ ‘ಪ್ರೀಮಿಯರ್ ಪದ್ಮಿನಿ’ ಕಾರಿನ ಪಯಣದಲ್ಲಿ ತಮ್ಮೊಂದಿಗೆ ರೋಜಾ ಖ್ಯಾತಿಯ ಮಧುಬಾಲಾ ಮತ್ತು ಸುಧಾರಾಣಿ ಅವರನ್ನು ಕರೆದುಕೊಂಡು ಹೊರಟ್ಟಿದ್ದಾರೆ. ಮೇಲ್ನೋಟಕ್ಕೆ ಈ ಸಿನಿಮಾದಲ್ಲಿ ತ್ರಿಕೋನ ಪ್ರೇಮ ಕತೆ ಇರುವಂತೆ ಕಂಡರೂ, ಈಗಾಗಲೇ ಪ್ರೇಕ್ಷಕರಲ್ಲಿ ತುಂಬಾ ಕುತೂಹಲ ಹುಟ್ಟಿಸಿದೆ.

ಈಗ ‘ಪ್ರೀಮಿಯರ್ ಪದ್ಮಿನಿ’ ಎಂಬ ವಿಶಿಷ್ಟ  ಟೈಟಲ್​ ಇರುವ ಸಿನಿಮಾದಲ್ಲಿ ಜಗ್ಗೇಶ್​  ಇದುವರೆಗೂ ನಟಿಸದೇ ಇರುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ಮತ್ತೊಂದು ವಿಶೇಷ.

- ಅನಿತಾ ಈ, 

 

PHOTOS: ನಟಿ ರಾಧಿಕಾ ಪಂಡಿತ್​ರ ಹೊಸ ಲುಕ್​​: ಮತ್ತೊಂದು ಸಿನಿಮಾಗೆ ಸಿದ್ದರಾಗುತ್ತಿದ್ದಾರಾ ಯಶ್​ ಮಡದಿ..!

First published:March 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626