'ಸಾರ್ವಭೌಮ'ನಿಗಾಗಿ ಕನ್ನಡಕ್ಕೆ ಕಾಲಿಡಲಿರುವ 'ಪ್ರೇಮಂ' ಬೆಡಗಿ ಅನುಪಮಾ

news18
Updated:June 27, 2018, 9:38 PM IST
'ಸಾರ್ವಭೌಮ'ನಿಗಾಗಿ ಕನ್ನಡಕ್ಕೆ ಕಾಲಿಡಲಿರುವ 'ಪ್ರೇಮಂ' ಬೆಡಗಿ ಅನುಪಮಾ
news18
Updated: June 27, 2018, 9:38 PM IST
ಆನಂದ್ ಸಾಲುಂಡಿ, ನ್ಯೂಸ್ 18 ಕನ್ನಡ

ಪವರ್​ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ಪವನ್ ಒಡೆಯರ್ ಮತ್ತೆ ಒಂದಾಗಿರೋದು... ಇಬ್ಬರು ಸೇರಿ `ನಟಸಾರ್ವಭೌಮ' ಎಂಬ ಸಿನಿಮಾ ಮಾಡ್ತಿರೋದು... ಅದರಲ್ಲಿ ಡಿಂಪಲ್ ಚೆಲುವೆ ರಚಿತಾರಾಮ್ ನಾಯಕಿ ಅನ್ನೋದು ಹೀಗೆ ಆ ಸಿನಿಮಾ ಬಗೆಗಿನ ಪ್ರತಿಯೊಂದು ಮಾಹಿತಿಯನ್ನೂ ನಾವೇ ಕೊಟ್ಟಿದ್ದೇವೆ. ಆದರೆ ಈಗ `ನಟಸಾರ್ವಭೌಮ'ನ ಅಡ್ಡದಿಂದ ಮತ್ತೊಂದು ಹೊಸ ಸುದ್ದಿ ಬರುತ್ತಿದೆ.

`ನಟಸಾರ್ವಭೌಮ' ಕನ್ನಡ ಕಣ್ಮಣಿ ಡಾ.ರಾಜ್‍ಕುಮಾರ್ ಅವರ ಬಿರುದು. ಈ ಬಿರುದು ಸಿನಿಮಾ ಟೈಟಲ್ ಆಗುತ್ತಿದೆ ಅಂದಾಗಲೇ ಅದರ ಮೇಲೆ ಯಾವ ಪರಿ ನಿರೀಕ್ಷೆ ಹುಟ್ಟಿಕೊಂಡಿತು ಅಂತ ಬಾಯಿಬಿಟ್ಟು ಹೇಳಲೇಬೇಕಿಲ್ಲ. ಇಂತಹ ಬಹು ನಿರೀಕ್ಷಿತ ಸಿನಿಮಾದ ಅಡ್ಡದಿಂದ ಬರುತ್ತಿರುವ ಹೊಸ ಸುದ್ದಿ ಏನೆಂದರೆ 'ಪ್ರೇಮಂ' ಚಿತ್ರದ ಅರಳು ಕಂಗಳ ಬೆಡಗಿ ಸಾರ್ವಭೌಮನಿಗಾಗಿ ಕನ್ನಡಕ್ಕೆ ಬರುತ್ತಿರೋದು. 'ಪ್ರೇಮಂ' ಚಿತ್ರ ಹಿಟ್ ಆದ ನಂತರ ಮಲಾರ್ ಪಾತ್ರದ ಸಾಯಿಪಲ್ಲವಿ ಅಷ್ಟೇ ಅಲ್ಲದೆ ಅನುಪಮಾ ಪರಮೇಶ್ವರನ್‍ಗೂ ಕೂಡ ಸಾಕಷ್ಟು ಅವಕಾಶಗಳು ಬಂದವು. ಅದರಂತೆ ಮಲಯಾಳಂ ಚಿತ್ರರಂಗದಾಚೆ ತೆಲುಗು-ತಮಿಳು ಚಿತ್ರಗಳಲ್ಲಿಯೂ ಅನುಪಮಾ ತಮ್ಮದೇ ಚಾಪು ಮೂಡಿಸುವಲ್ಲಿ ಯಶಸ್ವಿಯಾದರು.

`ನಟಸಾರ್ವಭೌಮ'ನಿಗೆ ರಚಿತಾರಾಮ್ ನಾಯಕಿ ಅನ್ನೋದು ಈಗಾಗಲೇ ಗೊತ್ತಿದೆ. ಹಾಗಾದರೆ ಅನುಪಮಾ ಪಾತ್ರವೇನು ಅನ್ನೋ ಪ್ರಶ್ನೆ ನಿಮ್ಮಲ್ಲಿ ಹುಟ್ಟಬಹುದು. ಚಿತ್ರತಂಡದ ಪ್ರಕಾರ ಅನುಪಮಾ ಪರಮೇಶ್ವರನ್ ಒಂದು ರೀತಿ ಎರಡನೇ ನಾಯಕಿ ಪಾತ್ರ ನಿರ್ವಹಿಸಲಿದ್ದು, ಅನುಪಮಾ ಪಾತ್ರಕ್ಕೂ ಸಾಕಷ್ಟು ಸ್ಕೋಪ್ ಇದೆಯಂತೆ.

ಒಟ್ಟಾರೆ ಪುನೀತ್ -ಪವನ್ ಒಡೆಯರ್ ಅವರ ಜೋಡಿ, 'ನಟಸಾರ್ವಭೌಮ' ಎಂಬ  ಟೈಟಲ್ ಅಲ್ಲದೇ ಇನ್ನೂಈ ಸಾಕಷ್ಟು ಹೈಲೈಟ್‍ಗಳನ್ನ ಒಳಗೊಂಡಿರೋ ಈ ಚಿತ್ರ ಶೂಟಿಂಗ್ ಹಂತದಲ್ಲಿಯೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರೋದಂತೂ ಸತ್ಯ.

 

 
First published:June 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...