• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Sandalwood ನಲ್ಲಿ ಮತ್ತೆ ಸೃಷ್ಟಿಯಾಗುತ್ತಾ ಪ್ರೇಮಲೋಕ? ಸ್ಕ್ರಿಪ್ಟ್ ರೆಡಿ ಮಾಡಿ, ಅವನಿಗಾಗಿ ಕಾಯ್ತಿದ್ದಾರೆ ಕ್ರೇಜಿಸ್ಟಾರ್!

Sandalwood ನಲ್ಲಿ ಮತ್ತೆ ಸೃಷ್ಟಿಯಾಗುತ್ತಾ ಪ್ರೇಮಲೋಕ? ಸ್ಕ್ರಿಪ್ಟ್ ರೆಡಿ ಮಾಡಿ, ಅವನಿಗಾಗಿ ಕಾಯ್ತಿದ್ದಾರೆ ಕ್ರೇಜಿಸ್ಟಾರ್!

ಪ್ರೇಮಲೋಕ ಪೋಸ್ಟರ್​

ಪ್ರೇಮಲೋಕ ಪೋಸ್ಟರ್​

ಆ ಕಾಲದಲ್ಲಿ ಕಾಸ್ಟ್ಲಿ ಸೆಟ್ಸ್ (Costly Sets) ​​, ಗ್ರ್ಯಾಂಡ್​ ಶೂಟಿಂಗ್ (Grand Shooting)​, ಕೋಟಿ ಕೋಟಿ ಖರ್ಚು ಮಾಡುತ್ತಿದ್ದವರು ಅಂದರೆ ಅದು ನಮ್ಮ ಕ್ರೇಜಿ ಸ್ಟಾರ್​ ರವಿಚಂದ್ರನ್​. ಅವರ ಒಂದೊಂದು ಸಿನಿಮಾ ಕೂಡ ಈಗ ಬಿಡುಗಡೆಯಾದರೂ ಹೌಸ್​ಫುಲ್​ ಪ್ರದರ್ಶನವಾಗುತ್ತೆ. ಅದರಲ್ಲೂ ಪ್ರೇಮಲೋಕ ಬಗ್ಗೆ ಹೇಳುವುದೇ ಬೇಡ.

ಮುಂದೆ ಓದಿ ...
  • Share this:

ಚಿತ್ರರಂಗದಲ್ಲಿ ಎಲ್ಲಾ ರೀತಿಯ ಏಳು ಬೀಳುಗಳನ್ನು ನೋಡಿದ ನಟರಲ್ಲಿ ರವಿಚಂದ್ರನ್ (Ravichandran) ಒಬ್ಬರೂ, ಮೊದಲು ಸ್ಯಾಂಡಲ್​ವುಡ್ (Sandalwood)​ ಹೇಗಿತ್ತು, ಈಗ ಹೇಗಿದೆ ಎಲ್ಲವನ್ನು ಬಲ್ಲ ನಟನಾ ಚತುರ ಇವರು. ಬಾಲ ನಟನಾಗಿ ಚಿತ್ರರಂಗಕ್ಕೆ ಬಂದು ನಂತರ ವಿಲನ್ (Villain) ಆಗಿ , ನಂತರ ನಟನಾಗಿ ಎಲ್ಲಕ್ಕಿಂತ ಹೆಚ್ಚಾಗಿ ಕ್ರೇಜಿ ಸ್ಟಾರ್ (Crazy Star)​ ಆಗಿ ಮೆರೆದ ಈ ನಟ, ಇಂದಿನ ಅದೆಷ್ಟೋ ನಟರಿಗೆ ಸ್ಫೂರ್ತಿ. ರವಿಚಂದ್ರನ್ ಸೃಷ್ಟಿಸಿದ  ದಾಖಲೆ (Record) ಗಳನ್ನು ಯಾರಿಂದಲೂ ಮುರಿಯಲು ಸಾಧ್ಯವಾಗಲಿಲ್ಲ. ಮುರಿಯುವುದಿರಲಿ, ಅವರ ದಾಖಲೆಗಳ ಬಳಿ ಹೋಗಲು ಆಗುತ್ತಿರಲಿಲ್ಲ. ಆ ಕಾಲದಲ್ಲಿ ಕಾಸ್ಟ್ಲಿ ಸೆಟ್ಸ್ (Costly Sets) ​​, ಗ್ರ್ಯಾಂಡ್​ ಶೂಟಿಂಗ್ (Grand Shooting)​, ಕೋಟಿ ಕೋಟಿ ಖರ್ಚು ಮಾಡುತ್ತಿದ್ದವರು ಅಂದರೆ ಅದು ನಮ್ಮ ಕ್ರೇಜಿ ಸ್ಟಾರ್​ ರವಿಚಂದ್ರನ್​. ಅವರ ಒಂದೊಂದು ಸಿನಿಮಾ ಕೂಡ ಈಗ ಬಿಡುಗಡೆಯಾದರೂ ಹೌಸ್​ಫುಲ್​ ಪ್ರದರ್ಶನವಾಗುತ್ತೆ. ಅದರಲ್ಲೂ ಪ್ರೇಮಲೋಕ ಬಗ್ಗೆ ಹೇಳುವುದೇ ಬೇಡ.


ಸ್ಯಾಂಡಲ್​ವುಡ್​ನಲ್ಲಿ ಮತ್ತೆ ಸೃಷ್ಟಿಯಾಗುತ್ತಾ ಪ್ರೇಮಲೋಕ!


ಪ್ರೇಮಲೋಕ ಸಿನಿಮಾ ಅಂದರೆ ಥಟ್​ ಅಂತ ರಿಚ್​ನೆಸ್​ ನೆನಪಿಗೆ ಬರುತ್ತೆ. ಅಬ್ಬಬ್ಬಾ ಒಂದೊಂದು ಹಾಡುಗಳು ಕೂಡ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಹಾಗೇ ಉಳಿದಿದೆ. ಜೂಹಿ ಚಾವ್ಲಾ ಹಾಗೂ ರವಿಚಂದ್ರನ್​ ಪ್ರೇಮಲೋಕದಲ್ಲಿ ಹೊಸ ಲೋಕವನ್ನೇ ಸೃಷ್ಟಿ ಮಾಡಿದ್ದರು. ಪ್ರೇಮಲೋಕ ಬಂದು ಇಷ್ಟು ವರ್ಷಗಳು ಕಳೆದರು, ಇನ್ನೂ ಆ ಫೀಲ್ ಹೋಗಿಲ್ಲ. ಇದೀಗ ರವಿಚಂದ್ರನ್​ ಪ್ರೇಮಲೋಕದ ಬಗ್ಗೆ ಮತ್ತೆ ಮಾತನಾಡಿದ್ದಾರೆ. ಈ ಬಾರಿ ಅವರ ಪ್ರೇಮಲೋಕದ ಬಗ್ಗೆ ಮಾತನಾಡಿಲ್ಲ. ಮತ್ತೊಮ್ಮೆ ಪ್ರೇಮಲೋಕ ಸೃಷ್ಟಿಸುವ ಬಗ್ಗೆ ಮಾತನಾಡಿದ್ದಾರೆ. ಈ ವಿಚಾರ ಇದೀಗ ಸಖತ್​ ವೈರಲ್​ ಆಗುತ್ತಿದೆ.


ಪ್ರೇಮಲೋಕ 2 ಸ್ಕ್ರಿಪ್ಟ್​ 2 ರೆಡಿ ಇದೆ ಎಂದ ರವಿಮಾಮ!


ಇತ್ತೀಚೆಗೆ ಆ್ಯಂಕರ್​ ಅನುಶ್ರೀ ಅವರ ಯೂಟ್ಯೂಬ್​ ಚಾನೆಲ್​​ಗೆ ರಕ್ಷಿತ್​ ಶೆಟ್ಟಿ ಭಾಗವಹಿಸಿದ್ದರು. ಜೊತೆಗೆ ಸ್ಯಾಂಡಲ್​ವುಡ್​ ಕ್ರೇಜಿಸ್ಟಾರ್​ ರವಿಚಂದ್ರನ್​ ಕೂಡ ಭಾಗಿಯಾಗಿದ್ದರು. ಅಪೂರ್ವ ಸಂಗಮ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಎಪಿಸೋಡ್​ನಲ್ಲಿ ಹಲವಾರು ವಿಚಾರಗಳನ್ನು ಇಬ್ಬರು ನಟರು ಹಂಚಿಕೊಂಡಿದ್ದಾರೆ. ಇದೇ ವೇಳೆ ರವಿಚಂದ್ರನ್​ ಪ್ರೇಮಲೋಕ 2 ಹಾಗೂ ರಣಧೀರ 2 ಕಥೆಗಳು ರೆಡಿಯಾಗಿದೆ. ರವಿ ಬೋಪಣ್ಣ ಸಿನಿಮಾ ಮುಗಿದ ಕೂಡಲೇ ಈ ಸಿನಿಮಾಗಳನ್ನು ಕೈಗೆತ್ತಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.


ಇದನ್ನೂ ಓದಿ:  ಸ್ಯಾಂಡಲ್​ವುಡ್ ಕ್ವೀನ್​ ಬಗ್ಗೆ ಶೆಟ್ರು ಹಿಂಗ್ಯಾಕ್​ ಅಂದ್ರು! ಏನಿಲ್ಲ ಏನಿಲ್ಲ ಅಂತಾನೇ ​ಚಮಕ್​ ಕೊಟ್ರಾ?


ಪ್ರೇಮಲೋಕಕ್ಕೆ ಆ ನಟನೇ ಬೇಕು ಎಂದ ರವಿಚಂದ್ರನ್​!


ಹೌದು, ಎರಡು ಸಿನಿಮಾಗಳ ಕಥೆಗಳು ರೆಡಿಯಿದೆ. ನನ್ನ ಮಕ್ಕಳಿಗೆ ಅಂತಾನೆ ಕಥೆ ರೆಡಿಮಾಡಿ ಇಟ್ಟಿದ್ದೇನೆ ಅವರೇ ಮಾಡಬೇಕು ಎಂದು ರವಿಚಂದ್ರನ್​ ಹೇಳಿದ್ದಾರೆ. ಬೇರೆ ನಟರಿಗಿಂತ ನನ್ನ ಮಕ್ಕಳು ಈ ಸಿನಿಮಾಗಳಲ್ಲಿ ನಟಿಸಬೇಕು ಎಂದು ಅವರು ಹೇಳಿದ್ದಾರೆ. ಇದು ತಾನು ನಟಿಸಿದ ಸಿನಿಮಾಗಳ ಸೀಕ್ವೆಲ್​ ಅಲ್ಲ. ಇದು ಈಗಿನ ಜನರೇಶನ್​ ಸಿನಿಮಾ ಮಾಡುತ್ತೇನೆ ಎಂದು ರವಿಚಂದ್ರನ್​ ಹೇಳಿದ್ದಾರೆ. ಈ ವಿಚಾರ ತಿಳಿದು ರವಿಚಂದ್ರನ್​ ಅಭಿಮಾನಿಗಳು ಫುಲ್​ ಖುಷಿಯಾಗಿದ್ದಾರೆ.


ಇದನ್ನೂ ಓದಿ: ಇಂದು ಸ್ಯಾಂಡಲ್​ವುಡ್​ ಕ್ರೇಜಿಸ್ಟಾರ್​ ಜನ್ಮದಿನ - 'ಬೋಪಣ್ಣ'ಗೆ ಭರ್ಜರಿ ಬರ್ತ್ ಡೇ ಗಿಫ್ಟ್


'ಕುಲಗೌರವ' ಚಿತ್ರದಲ್ಲಿ ಬಾಲನಟನಾಗಿ ಡಾ ರಾಜ್​ಕುಮಾರ್ ಜೊತೆಗೆ ರವಿಚಂದ್ರನ್ ಮೊದಲು ಬಣ್ಣ ಹಚ್ಚಿದ್ದರು. ನಂತರ 1982ರಲ್ಲಿ ‘ಖದೀಮ ಕಳ್ಳರು’ ಚಿತ್ರದಲ್ಲಿ ವಿಲನ್ ಆಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ, ಈ ಹೀರೋ ನಂತರ ತಿರುಗಿ ನೋಡಿಲ್ಲ. ರಣಧೀರ, ಅಂಜದ ಗಂಡು, ರಾಮಚಾರಿ, ಹಳ್ಳಿ ಮೇಷ್ಟ್ರು, ಯುದ್ಧಕಾಂಡ, ಅಣ್ಣಯ್ಯ, ಪುಟ್ನಂಜ, ಸಿಪಾಯಿ, ಯಾರೇ ನೀನು ಚೆಲುವೆ, ರೋಜಾ, ಮಾಂಗಲ್ಯಂ ತಂತುನಾನೇನಾ, ಪ್ರೀತ್ಸೋದ್ ತಪ್ಪಾ., ಇವರ ಅದ್ಭುತ ಚಿತ್ರಗಳ ಲಿಸ್ಟ್​ ಮಾಡುತ್ತಾ ಹೋದರೆ ಮುಗಿಯುವುದಿಲ್ಲ.

Published by:Vasudeva M
First published: