Preity Zinta: ಹೋಂ ಕ್ವಾರಂಟೈನ್​ ಎಫೆಕ್ಟ್​: ಕ್ಯೂಟ್​ ವಿಡಿಯೋ ಹಂಚಿಕೊಂಡ ಪ್ರೀತಿ ಜಿಂಟಾ ..!

Preity Zinta Viral Videos: ಲೆಟೆಸ್ಟ್ ಆಗಿ ಪ್ರೀತಿ ಹೋಂ ಕ್ವಾರಂಟೈನ್​ನ ಸೈಡ್ ಎಫೆಕ್ಟ್​ ಎನ್ನುತ್ತಾ ಒಂದು ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಖತ್​ ಕ್ಯೂಟ್​ ಆಗಿದ್ದು, ನೆಟ್ಟಿಗರಿಗೆ ಇಷ್ಟವಾಗುತ್ತಿದೆ.

ಗಂಡ ಹಾಗೂ ಮುದ್ದಿನ ನಾಯಿ ಜೊತೆ ಪ್ರೀತಿ ಜಿಂಟಾ

ಗಂಡ ಹಾಗೂ ಮುದ್ದಿನ ನಾಯಿ ಜೊತೆ ಪ್ರೀತಿ ಜಿಂಟಾ

  • Share this:
ನಟಿ ಪ್ರೀತಿ ಜಿಂಟಾ ಪತಿ ಯೊಂದಿಗೆ ವಿದೇಶದಲ್ಲೇ ಸೆಟಲ್​ ಆಗಿದ್ದಾರೆ. ಸದ್ಯ ಕೊರೋನಾ ವೈರಸ್​ ಭೀತಿಯಿಂದಾಗಿ ಅವರೂ ಹೋಂ ಕ್ವಾರಂಟೈನ್​ ಆಗಿದ್ದಾರೆ. ಮನೆಯಲ್ಲಿ ಪ್ರೀತಿ , ಗಂಡ ಹಾಗೂ ಮುದ್ದಿನ ಸಾಕು ನಾಯಿ ಜೊತೆ ಹೇಗೆಲ್ಲ ಕಾಲಕಳೆಯುತ್ತಿದ್ದಾರೆ ಎಂದು ಆಗಾಗ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. 

ಲೆಟೆಸ್ಟ್ ಆಗಿ ಪ್ರೀತಿ ಹೋಂ ಕ್ವಾರಂಟೈನ್​ನ ಸೈಡ್ ಎಫೆಕ್ಟ್​ ಎನ್ನುತ್ತಾ ಒಂದು ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಖತ್​ ಕ್ಯೂಟ್​ ಆಗಿದ್ದು, ನೆಟ್ಟಿಗರಿಗೆ ಇಷ್ಟವಾಗುತ್ತಿದೆ.

 




ಈ ವಿಡಿಯೋದಲ್ಲಿ ಪ್ರೀತಿ ಒಂದು ರೀತಿಯ ಶಬ್ದ ಮಾಡುತ್ತಾರೆ. ಅದನ್ನು ಕೇಳಿದ ಕೂಡಲೇ ಅವರ ಪತಿ ಹಾಗೂ ಸಾಕು ನಾಯಿ ಬ್ರುನೊ ತಮ್ಮ ತಲೆಯನ್ನು ಒಂದು ಕಡೆ ವಾಲಿಸುತ್ತಾರೆ. ಪ್ರೀತಿ ಹಂಚಿಕೊಂಡಿರುವ ಈ ವಿಡಿಯೋ ಸಖತ್​ ಮುದ್ದಾಗಿದೆ. ಈ ವಿಡಿಯೋಗೆ ಹೋಂ ಕ್ವಾರಂಟೈನ್​ ಎಫೆಕ್ಟ್​ ಎಂದು ಶೀರ್ಷಿಕೆ ಕೊಟ್ಟಿದ್ದಾರೆ.

 




ಈ ವಿಡಿಯೋ ನೋಡಿದ ಮೇಲೆ ನಿಮ್ಮ ಮುಖದಲ್ಲಿ ನಗು ಮೂಡಿದರೆ ಅಷ್ಟೇ ಸಾಕು. ಮನೆಗಳಲ್ಲಿದ್ದು, ಒತ್ತಡದಲ್ಲಿರುವವರ ಮುಖದಲ್ಲಿ ನಗು ಮೂಡಿಸುವ ಸಣ್ಣದೊಂದು ಪ್ರಯತ್ನ ಎಂದಿದ್ದಾರೆ ಪ್ರೀತಿ ಜಿಂಟಾ. ಪ್ರೀತಿ, ಮನೆಯಲ್ಲಿ ಸಾಕು ನಾಯಿಯೊಂದಿಗೆ ಹೇಗೆಲ್ಲ ಕಾಲ ಕಳೆಯುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ಇಲ್ಲಿವೆ ಕೆಲವು ವಿಡಿಯೋಗಳು.

 











First published: