ನೀವು ಯಾವಾಗಲಾದರೂ ನಡು ರಸ್ತೆಯಲ್ಲಿ ಪುಟ್ಟ ವಿಮಾನ ಲ್ಯಾಂಡ್ (Plane land on road) ಆಗುವುದನ್ನು ನೋಡಿದ್ದೀರಾ..? ನೀವು ಯೋಚಿಸುತ್ತಿರಬಹುದು ರಸ್ತೆ ಮಧ್ಯೆ ವಿಮಾನ ಹೇಗೆ ಲ್ಯಾಂಡ್ ಆಗುತ್ತದೆ ಎಂದು. ಆದರೆ ಇಂತಹದೊಂದು ಘಟನೆ ನಡೆದಿದೆ. ಬಾಲಿವುಡ್ ನಟಿ ಪ್ರೀತಿ ಜಿಂಟಾ ರಸ್ತೆ ಮಧ್ಯೆ ಪ್ಲೇನ್ ಲ್ಯಾಂಡ್ ಆಗುವುದನ್ನು ನೋಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿರುವ ನಟಿ ಪ್ರೀತಿ ಜಿಂಟಾ ತಮ್ಮ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕೆಲವೇ ಗಂಟೆಗಳ ಹಿಂದೆ ಪ್ರೀತಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದು, ಅದು ವೈರಲ್ ಆಗುತ್ತಿದೆ.
ಕೆಲವೊಮ್ಮೆ ನಮ್ಮ ಕಣ್ಮುಂದೆ ನಡೆಯುವ ಘಟನೆಗಳನ್ನು ನೋಡಿದಾಗ ನಮ್ಮ ಕಣ್ಣುಗಳನ್ನು ನಾವೇ ನಂಬಲಾಗುವುದಿಲ್ಲ. ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರ ಜತೆ ಸಹ ಹೀಗೆ ಆಗಿದೆ. ಹೌದು, ಪ್ರೀತಿ ಕಾರಿನಲ್ಲಿ ಹೋಗುವಾಗ ದಾರಿ ಮಧ್ಯೆ ನಡೆದ ಘಟನೆಯ ವಿಡಿಯೋವನ್ನು ಪ್ರೀತಿ ಶೇರ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಪ್ರೀತಿ ಜಿಂಟಾ ಒಂದು ಪುಟ್ಟ ವಿಮಾನ ಕಾಣುತ್ತಿದೆ. ಪ್ರೀತಿ ಜಿಂಟಾ ಅವರ ಕಾರಿರುವ ಎದುರಿರುವ ರಸ್ತೆಯ ಮೇಲೆ ವಿಮಾನ ನಿಂತಿರುವುದನ್ನು ನೋಡಬಹುದು. ಅದರ ಸುತ್ತ-ಮುತ್ತ ಜನರು ನಿಂತಿರುವುದನ್ನೂ ಕಾಣಬಹುದು. ಪ್ರೀತಿ ಜಿಂಟಾ ಕಾರನ್ನು ಡ್ರೈವ್ ಮಾಡುತ್ತಾ ಹೋಗುವಾಗ ರಸ್ತೆ ಮಧ್ಯೆ ವಿಮಾನ ನಿಂತಿರುವುದನ್ನು ನೋಡಿದ್ದಾರೆ. ಅದು ಆ ಪುಟ್ಟ ವಿಮಾನ ದಾರಿ ಮಧ್ಯೆ ಲ್ಯಾಂಡ್ ಆಗಿತ್ತಂತೆ. ಅದನ್ನು ನೋಡಿದ ಕೂಡಲೇ ಪ್ರೀತಿ ವಿಡಿಯೋ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಕೆಲವೊಮ್ಮೆ ಎಲ್ಲವೂ ಮೊದಲ ಸಲ ಎನಿಸುತ್ತದೆ ಎಂದೂ ಬರೆದುಕೊಂಡಿದ್ದಾರೆ. ನಾನು ಅಂದುಕೊಂಡಿರಲಿಲ್ಲ, ಜೀವನದಲ್ಲಿ ರಸ್ತೆ ಮೇಲೆ ವಿಮಾನ ಲ್ಯಾಂಡ್ ಆಗುವುದನ್ನು ನೋಡುತ್ತೇನೆಂದು ಎಂದು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ದೇವರ ಕೃಪೆ ಯಾರಿಗೂ ಏನೂ ಆಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದಿದ್ದಾರೆ. ಜೊತೆಗೆ #onceinalifetime #ting ಎಂದೂ ಬರೆದುಕೊಂಡಿದ್ದಾರೆ.
ಬಾಲಿವುಡ್ನಲ್ಲಿ ಡಿಂಪಲ್ ಕ್ವೀನ್ ಎಂದೇ ಖ್ಯಾತರಾಗಿರುವ ಪ್ರೀತಿ ಜಿಂಟಾ ಅವರ ಸಿನಿಮಾಗಳ ವಿಷಯಕ್ಕೆ ಬಂದರೆ 2018ರಲ್ಲಿ ಬೈಯ್ಯಾಜಿ ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಮೂಲಕ ಪ್ರೀತಿ 7 ವರ್ಷಗಳ ಗ್ಯಾಪ್ ನಂತರ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದರು. ಈ ಸಿನಿಮಾದಲ್ಲಿ ಸನ್ನಿ ಡಿಯೋಲ್, ಹರ್ಷದ್ ವಾರ್ಸಿ ಅಮೀಷಾ ಪಟೇಲ್ ಸಹ ಈ ಸಿನಿಮಾದಲ್ಲಿದ್ದರು.
ಇದನ್ನೂ ಓದಿ: Mayuri Kyatari: ಮಗನೊಂದಿಗೆ ಫೋಟೋಶೂಟ್ಗೆ ಪೋಸ್ ಕೊಟ್ಟ ಅಶ್ವಿನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ನಟಿ ಮಯೂರಿ
ಪ್ರೀತಿ ಜಿಂಟಾ ಕುರಿತಾದ ಈ ವಿಷಯಗಳು ನಿಮಗೆ ಗೊತ್ತಾ..?
ಅವರಿಗೆ ನಾಯಿಗಳು ಎಂದರೆ ತುಂಬಾ ಪ್ರೀತಿ. ಅಲ್ಲದೆ ಇವರು ಸಿನಿಮಾ ಹಾಗೂ ವ್ಯವಹಾರದ ಜೊತೆಗೆ ಬಿಬಿಸಿಗೆ ಲೇಖನಗಳನ್ನೂ ಬರೆಯುತ್ತಿದ್ದರು. ಶಾಂದಾರ್ ಅಮರೋಹಿ ಎಂಬುವರು ಪ್ರೀತಿಯನ್ನು ದತ್ತು ಪಡೆದಿದ್ದರು ಎನ್ನಲಾಗುತ್ತದೆ. ಶಾನ್ದಾರ್ ಅಮರೋಹಿ ತಮ್ಮ 600 ಕೋಟಿ ಮೌಲ್ಯದ ಆಸ್ತಿಯನ್ನು ಪ್ರೀತಿಯ ಹೆಸರಿಗೆ ಬರೆಯಲು ಬಂದಾಗಲೂ ಬೇಡ ಎಂದು ತಿರಸ್ಕರಿಸಿದ್ದರಂತೆ. 2009ರಲ್ಲಿ ಪ್ರೀತಿ ರಿಷಿಕೇಷದಲ್ಲಿನ ಅನಾಥಾಶ್ರಮದವೊಂದರಲ್ಲಿ 34 ಹೆಣ್ಣು ಮಕ್ಕಳನ್ನು ದತ್ತು ಪಡೆದರು. ಈಗಲೂ ಅವರ ಜವಾಬ್ದಾರಿಯನ್ನೂ ಅವರೇ ನೋಡಿಕೊಳ್ಳುತ್ತಿದ್ದಾರಂತೆ. 2016 ಫೆ. 28ಕ್ಕೆ ಪ್ರೀತಿ ತಾವು ಪ್ರೀತಿಸುತ್ತಿದ್ದ ಜಿನೆ ಗುಡ್ಎನಫ್ ಜತೆ ವಿವಾಹವಾದರು. ಈಗಲೂ ಪತಿಯ ಜತೆ ವಿದೇಶದಲ್ಲೇ ನೆಲೆಸಿದ್ದಾರೆ ಈ ಡಿಂಪಲ್ ಕ್ವೀನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ