Preity Zinta: ಯಾರ ಮೇಲೆ ಯುದ್ಧ ಮಾಡೋಕೆ ಸಿದ್ಧರಾಗುತ್ತಿದ್ದಾರೆ ಪ್ರೀತಿ ಜಿಂಟಾ: ವಿಡಿಯೋ ನೋಡಿ..!

Tactical Shooting: ಪ್ರೀತಿ ಜಿಂಟಾ ಸಾಹಕ್ಕೆ ಕೈ ಹಾಕಿದ್ದಾರೆ. ಹೌದು, ಯುದ್ಧತಂತ್ರದ ಶೂಟಿಂಗ್​ ಕಲಿಯುತ್ತಿದ್ದಾರೆ. ಕೈಯಲ್ಲಿ ಪುಟ್ಟ ಪಿಸ್ತೂಲ್​ ಹಿಡಿದು, ಸಖತ್ತಾಗಿ ಗುಂಡು ಹಾರಿಸುತ್ತಿದ್ದಾರೆ. ಇದನ್ನು ಅವರು ಕಳೆದ ಎರಡು ದಿನಗಳಿಂದ ಅಭ್ಯಾಸ ಮಾಡುತ್ತಿದ್ದು, ಮೂರನೇ ದಿನದ ವಿಡಿಯೋವನ್ನು ಪೋಸ್ಟ್​ ಮಾಡಿದ್ದಾರೆ.

ಪ್ರೀತಿ ಜಿಂಟಾ

ಪ್ರೀತಿ ಜಿಂಟಾ

  • Share this:
ಪ್ರೀತಿ ಜಿಂಟಾ ಲಾಕ್​ಡೌನ್​ನಿಂದಾಗಿ ಮನೆಯಲ್ಲಿ ಕಾಲ ಕಳೆಯೋಕೆ ಏನೆಲ್ಲ ಮಾಡುತ್ತಿದ್ದಾರೆ ಅಂತ ನಿಮಗೆ ಅವರ ಇನ್​ಸ್ಟಾಗ್ರಾಂ ನೋಡಿದರೆ ತಿಳಿಯುತ್ತೆ. ತಮ್ಮ ಮುದ್ದಿನ ನಾಯಿ ಜೊತೆ ಆಟ, ಕೈತೋಟದಲ್ಲಿ ಕೊಂಚ ಕೆಲಸ, ಅಮ್ಮನೊಂದಿಗೆ ಕಾಲ ಹರಣ ಹಾಗೂ ಪತಿಗೆ ಹೇರ್​ ಸ್ಟೈಲ್​ ಮಾಡುವುದು ಹೀಗೆ ನಾನಾ ರೀತಿಯ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. 

ಇತ್ತೀಚೆಗಷ್ಟೆ ಪ್ರೀತಿ ಜಿಂಟಾ ಮೊದಲ ಬಾರಿಗೆ ತಮ್ಮ ಕೈ ತೋಟದ ಪರಿಚಯ ಮಾಡಿಕೊಟ್ಟಿದ್ದರು. ಕ್ಯಾಪ್ಸಿಕಮ್ ಸೇರಿದಂತೆ ಏನೆಲ್ಲ ತರಕಾರಿ ಬೆಳೆದಿದ್ದಾರೆ ಅಂತ ಕೆಲವು ವಿಡಿಯೋಗಳನ್ನು ಖುಷಿಯಿಂದ ಹಂಚಿಕೊಂಡಿದ್ದರು.






ಈಗ ಇದೇ ನಟಿ ಸಾಹಸಕ್ಕೆ ಕೈ ಹಾಕಿದ್ದಾರೆ. ಹೌದು, ಯುದ್ಧತಂತ್ರದ ಶೂಟಿಂಗ್​ ಕಲಿಯುತ್ತಿದ್ದಾರೆ. ಕೈಯಲ್ಲಿ ಪುಟ್ಟ ಪಿಸ್ತೂಲ್​ ಹಿಡಿದು, ಸಖತ್ತಾಗಿ ಗುಂಡು ಹಾರಿಸುತ್ತಿದ್ದಾರೆ. ಇದನ್ನು ಅವರು ಕಳೆದ ಎರಡು ದಿನಗಳಿಂದ ಅಭ್ಯಾಸ ಮಾಡುತ್ತಿದ್ದು, ಮೂರನೇ ದಿನದ ವಿಡಿಯೋವನ್ನು ಪೋಸ್ಟ್​ ಮಾಡಿದ್ದಾರೆ.




ಇನ್ನು ಆ್ಯಕ್ಷನ್​ ಡ್ರೀಮ್​ ಅನ್ನು ನನಸು ಮಾಡಿಕೊಳ್ಳುತ್ತಿರುವ ಖುಷಿ ಹಂಚಿಕೊಂಡಿದ್ದಾರೆ. ಯಾವುದೂ ಸುಲಭವಲ್ಲ, ಕಠಿಣ ಪರಿಶ್ರಮ ಬೇಕು. ಈಗ ಯಾರೊಬ್ಬರೂ ಹಿಂದಿ ಸಿನಿಮಾಗಳಲ್ಲಿ ನಾಯಕಿಯರು ಆ್ಯಕ್ಷನ್​ ಮಾಡಲಾಗುವುದಿಲ್ಲ ಎಂದು ಹೇಳಲಾಗುವುದಿಲ್ಲ. ಎಲ್ಲ ನಿರ್ದೇಶಕರು ಈ ವಿಡಿಯೋವನ್ನು ನೋಡುತ್ತಿದ್ದಾರೆ ಎಂದುಕೊಂಡಿದ್ದೇನೆ ಎಂದು ತಮಾಷೆ ಮಾಡಿದ್ದಾರೆ ಪ್ರೀತಿ.

Published by:Anitha E
First published: