46ನೇ ವಯಸ್ಸಿನಲ್ಲಿ ಅವಳಿ ಮಕ್ಕಳ ತಾಯಿಯಾದ ಬಾಲಿವುಡ್​ ನಟಿ Preity Zinta

46 ವರ್ಷದ ನಟಿ ಪ್ರೀತಿ ಜಿಂಟಾ ಅವರಿಗೆ ಅವಳಿ ಮಕ್ಕಳಾಗಿವೆ. ಮಕ್ಕಳಿಗೆ ಜಿಯಾ ಹಾಗೂ ಜೈ ಎಂದು ನಾಮಕರಣ ಮಾಡಿದ್ದಾರೆ. ಈ ವಿಷಯವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ ಪ್ರೀತಿ ಜಿಂಟಾ.

ನಟಿ ಪ್ರೀತಿ ಜಿಂಟಾಹಾಗೂ ಅವರ ಪತಿ

ನಟಿ ಪ್ರೀತಿ ಜಿಂಟಾಹಾಗೂ ಅವರ ಪತಿ

  • Share this:
ಸಾಮಾಜಿಕ ಜಾಲತಾಣದಲ್ಲಿ (Social Media) ತಮ್ಮ ನಿತ್ಯದ ಅಪ್ಡೇಟ್​ ಹಾಗೂ ಪ್ರವಾಸ ಕುರಿತಾದ ಪೋಸ್ಟ್​ ಮಾಡುವ ಮೂಲಕ ಅಭಿಮಾನಿಗಳಿಗೆ ಟ್ರೀಟ್​ ಕೊಡುವ ನಟಿ ಈಗ ಸಿಹಿ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಬಾಲಿವುಡ್​ನ ಖ್ಯಾತ ನಟಿ, ನಿರ್ಮಾಪಕಿ ಹಾಗೂ ಪಂಜಾಬ್​ ಕಿಂಗ್ಸ್ ಇಲೆವೆನ್​ನ ಒಡತಿ ಪ್ರೀತಿ ಜಿಂಟಾ (Preity Zinta) ಅವರು ಅವಳಿ ಮಕ್ಕಳ ತಾಯಿಯಾಗಿದ್ದಾರೆ. ತಮ್ಮ ಮುದ್ದಿನ ಅವಳಿ ಮಕ್ಕಳ ಹೆಸರುಗಳನ್ನು ಸಾಮಾಜಿಕ ಜಾಲತಾಣದಲ್ಲಿ ರಿವೀಲ್​ ಮಾಡುವ ಮೂಲಕ ನಟಿ ಅಭಿಮಾನಿಗಳ ಜೊತೆ ಖುಷಿ ಹಂಚಿಕೊಂಡಿದ್ದಾರೆ. ತಮ್ಮ ಪತಿ ಜೆನೆ ಗುಡ್​ಇನಫ್​ (Gene Goodenough) ಅವರ ಜತೆಗಿನ ಚಿತ್ರ ಹಂಚಿಕೊಂಡಿರುವ  ನಟಿ ತಮ್ಮ ಅವಳಿ ಮಕ್ಕಳ ಕುರಿತಾದ ಮಾಹಿತಿಯನ್ನು ಶೇರ್​ ಮಾಡಿದ್ದಾರೆ. 

46 ವರ್ಷದ ನಟಿ ಪ್ರೀತಿ ಜಿಂಟಾ ಅವರಿಗೆ ಅವಳಿ ಮಕ್ಕಳಾಗಿವೆ ಎಂದು ಸಾಕಷ್ಟು ಮಂದಿ ಆಶ್ಚರ್ಯ ಪಡುತ್ತಿದ್ದಾರೆ. ಆದರೆ, ಪ್ರೀತಿ ಜಿಂಟಾ ಹಾಗೂ ಗುಡ್ ​ಇನಫ್​ ಅವರು ಬಾಡಿಗೆ ತಾಯಿಯ ಮೂಲಕ ತಮ್ಮ ಅವಳಿ ಮಕ್ಕಳನ್ನು ಪಡೆದಿದ್ದಾರೆ ಅನ್ನೋ ವಿಷಯ ತಿಳಿದಿರಲಿ.


View this post on Instagram


A post shared by Preity G Zinta (@realpz)


ನಾನು ಹಾಗೂ ನನ್ನ ಪತಿ ಅಪ್ಪ-ಅಮ್ಮ ಆಗಿದ್ದೇವೆ. ಮನೆಯಲ್ಲಿ ಮುದ್ದಾದ ಅವಳಿ ಮಕ್ಕಳ ಸದ್ದು ಕೇಳಿಸುತ್ತಿದೆ. ಮಕ್ಕಳಿಗೆ ಜಿಯಾ ಜಿಂಟಾ ಹಾಗೂ ಜೈ ಜಿಂಟಾ ಎಂದು ನಾಮಕರಣ ಮಾಡಲಾಗಿದೆ. ಈ ಖುಷಿಯ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಖುಷಿಯಾಗುತ್ತಿದೆ ಎಂದು ಪ್ರೀತಿ ಜಿಂಟಾ ತಮ್ಮ ಟ್ವಿಟರ್ ಹಾಗೂ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: HBD: ಪ್ರಭುದೇವರನ್ನು ಮದುವೆಯಾಗಲು ಮೊದಲ ಮಡದಿ ಲತಾಗೆ 3 ಕೋಟಿ ಹಣ, 85 ಲಕ್ಷದ ನೆಕ್ಲೆಸ್​ ಕೊಟ್ಟಿದ್ದರಂತೆ Nayanthara

2016ರಲ್ಲಿ ಪ್ರೀತಿ ಜಿಂಟಾ ಹಾಗೂ ಜೆನೆ ಗುಡ್ ಇನಫ್​ ಅವರು ಪ್ರೀತಿಸಿ ವಿವಾಹವಾಗಿದ್ದರು. ಅದಕ್ಕೂ ಮೊದಲು ಐದು ವರ್ಷಗಳ ಕಾಲ ಈ ಜೋಡಿ ಡೇಟಿಂಗ್ ಮಾಡಿದ್ದರು. ಮದುವೆಯ ನಂತರ ಪತಿಯ ಜೊತೆ ವಿದೇಶದಲ್ಲಿ ನೆಲೆಸಿದ್ದ ಪ್ರೀತಿ ಜಿಂಟಾ ಆಗಾಗ ಭಾರತಕ್ಕೆ ಬರುತ್ತಿದ್ದರು. ಇತ್ತೀಚೆಗಷ್ಟೆ ಲಡಾಖ್​ಗೆ ಪ್ರವಾಸಕ್ಕೆಂದು ಬಂದಿದ್ದರು. ಈಗ ಮದುವೆಯಾಗಿ ಐದು ವರ್ಷಗಳ ನಂತರ ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ.

ಇದನ್ನೂ ಓದಿ: Ramesh Aravind ಅಭಿನಯದ 100 ಸಿನಿಮಾ ನೋಡಿ ಮೆಚ್ಚಿಕೊಂಡ ಗೃಹ ಸಚಿವ ಆರಗ ಜ್ಞಾನೇಂದ್ರ

ನಟಿ ಪ್ರೀತಿ ಜಿಂಟಾ ಸಿನಿಮಾಗಳಿಂದ ಕೊಂಚ ದೂರವಿದ್ದಾರೆ. 2018ರಲ್ಲಿ ನೀರಜ್ ಪಾಠಕ್​ ನಿರ್ದೇಶನದ ಭಯ್ಯಾಜಿ ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದು. ಈ ಚಿತ್ರದಲ್ಲಿ ಸಲ್ಮಾನ್​ ಖಾನ್​ ಸಹ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಇನ್ನು ಬಾಲಿವುಡ್ ಜೊತೆಗೆ ತುಂಬಾ ಆತ್ಮೀಯವಾದ ಸಂಬಂಧವನ್ನು ಕಾಪಾಡಿಕೊಂಡಿದ್ದಾರೆ. ಸಲ್ಮಾನ್​ ಖಾನ್​ ಪ್ರೀತಿ ಅವರ ಆತ್ಮೀಯ ಸ್ನೇಹಿತರಲ್ಲಿ ಒಬ್ಬರು. ಸಿನಿಮಾಗಳಿಂದ ದೂರ ಇದ್ದರೂ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​ ನಟ Duniya Vijay ತಂದೆ ರುದ್ರಪ್ಪ ನಿಧನ

ಪ್ರೀತಿ ಜಿಂಟಾ ಅವರು ಇತ್ತೀಚೆಗೆ ಹೇರ್ ಸ್ಟೈಲ್​ ಬದಲಾಯಿಸಿಕೊಂಡು ಸುದ್ದಿಯಾಗಿದ್ದರು. ಪ್ರೀತಿ ಅವರ ಹೊಸ ಹೇರ್​ ಸ್ಟೈಲ್ ನೋಡಿದ ಹೃತಿಕ್ ರೋಷನ್ ಅವರ ವಿಚ್ಛೇದಿತ ಪತ್ನಿ ಸುಸೈನ್​ ಖಾನ್​ ಮೆಚ್ಚುಗೆ ಸೂಚಿಸಿದ್ದರು. ಇನ್​ಸ್ಟಾಗ್ರಾಂನಲ್ಲಿ ಪ್ರೀತಿ ಜಿಂಟಾ ಅವರಿಗೆ 8.3 ಮಿಲಿಯನ್​ ಹಿಂಬಾಲಕರಿದ್ದಾರೆ. ಇನ್ನು ದೀಪಾವಳಿ ಹಬ್ಬವನ್ನು ಪ್ರೀತಿ ಜಿಂಟಾ ತಮ್ಮ ಪತಿಯ ಜೊತೆ ಲಾಸ್​ ಏಂಜಲೀಸ್​ನಲ್ಲಿರುವ ಮನೆಯಲ್ಲಿ ಆಚರಿಸಿದ್ದು, ಹಬ್ಬದ ಆಚರಣೆಯ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
Published by:Anitha E
First published: