HOME » NEWS » Entertainment » PREGNANT ANUSHKA SHARMA SHARES HER FITNESS VIDEO IN WHICH ACTRESS IS WALKING ON TREADMILL AE

Anushka Sharma: ಟ್ರೆಡ್​ ಮಿಲ್ ಮೇಲೆ ವಾಕಿಂಗ್​ ಮಾಡಿದ ತುಂಬು ಗರ್ಭಿಣಿ ಅನುಷ್ಕಾ ಶರ್ಮಾ..!

ಟ್ರೆಡ್​ ಮಿಲ್​ ಮೇಲೆ ತುಂಬು ಗರ್ಭಿಣಿ ಅನುಷ್ಕಾ ವಾಕ್​ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ನಟಿ, ತಮ್ಮ ಇನ್​ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೂ ಸಹ ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಟೀಕಿಸುತ್ತಿದ್ದಾರೆ.

Anitha E | news18-kannada
Updated:January 5, 2021, 10:01 AM IST
Anushka Sharma: ಟ್ರೆಡ್​ ಮಿಲ್ ಮೇಲೆ ವಾಕಿಂಗ್​ ಮಾಡಿದ ತುಂಬು ಗರ್ಭಿಣಿ ಅನುಷ್ಕಾ ಶರ್ಮಾ..!
ತುಂಬು ಗರ್ಭಿಣಿ ಅನುಷ್ಕಾ ಶರ್ಮಾ
  • Share this:
ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ವಿವಾಹವಾದ ನಂತರ ಅನುಷ್ಕಾ ಸಿನಿಮಾಗಳಿಂದ ಕೊಂಚ ದೂರವೇ ಇದ್ದರು. ವರ್ಷಕ್ಕೆ 2-3 ಸಿನಿಮಾ ಮಾಡುತ್ತಿದ್ದ ನಟಿ , ನಂತರದಲ್ಲಿ ಒಂದು ಸಿನಿಮಾ ಮಾತ್ರ ಮಾಡುವ ನಿರ್ಧಾರ ಮಾಡಿದ್ದರು. ನಂತರ ಕಳೆದ ವರ್ಷ ಈ ಜೋಡಿ ತಮ್ಮ ಮಗುವಿನ ಕುರಿತಾಗಿ ಸಿಹಿ ಸುದ್ದಿ ಕೊಟ್ಟರು. ಇನ್ನು ಗರ್ಭಿಣಿಯಾದ ನಂತರವೂ ಅನುಷ್ಕಾ ತಮ್ಮ ಕೆಲಸದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಗರ್ಭಿಣಿಯಾದರೂ ಬ್ರ್ಯಾಂಡ್​ ಹಾಗೂ ಜಾಹೀರಾತುಗಳ ಚಿತ್ರೀಕರಣದಲ್ಲಿ ವ್ಯಸ್ತವಾಗಿದ್ದಾರೆ. ಇದರ ನಡುವೆಯೂ ತಮ್ಮ ಆರೋಗ್ಯ ಹಾಗೂ ಫಿಟ್ನೆಸ್​​ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಗರ್ಭಿಣಿಯಾಗುವ ಮೊದಲು ಮಾಡುತ್ತಿದ್ದಂತೆಯೇ ನಿತ್ಯ ವ್ಯಾಯಾಮ ಹಾಗೂ ಯೋಗ ಮಾಡುತ್ತಿದ್ದಾರೆ. ಹಾಗೆಯೇ ಮಾಡುವಂತೆ ವೈದ್ಯರೂ ಸಹ ಸಲಹೆ ನೀಡಿದ್ದಾರಂತೆ. ಈ ಕುರಿತಾಗಿ ಈ ಹಿಂದೆಯೇ ತಮ್ಮ ಇನ್​ಸ್ಟಾಗ್ರಾಂನಲ್ಲಿ ಅನುಷ್ಕಾ ಬರೆದುಕೊಂಡಿದ್ದಾರೆ. 

ಈ ಹಿಂದೆ ಅನುಷ್ಕಾ ಪತಿಯ ಸಹಾಯದಿಂದ ಶೀರ್ಷಾನ ಮಾಡುವ ಫೋಟೋವೊಂದನ್ನು ಹಂಚಿಕೊಂಡಿದ್ದರು. ಅದನ್ನು ನೋಡಿದ ನೆಟ್ಟಿಗರು ಇಂತಹ ಪರಿಸ್ಥಿತಿಯಲ್ಲಿ ಇಂತಹ ಪ್ರಯೋಗಗಳು ಬೇಕಾ ಎಂದಿದ್ದರು.

ಆದರೆ, ಅನುಷ್ಕಾ ಮಾತ್ರ ವೈದ್ಯರ ಸಲಹೆ ಮೇರೆಗೆ ತನ್ನ ನಿತ್ಯದ ಅಭ್ಯಾಸಗಳನ್ನು ಮುಂದುವರೆಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದರು. ಇಂತಹ ನಟಿ, ಈಗ ತಮ್ಮ ಮತ್ತೊಂದು ಫಿಟ್ನೆಸ್​ ವಿಡಿಯೋ ಹಂಚಿಕೊಂಡಿದ್ದಾರೆ.

Pregnant Anushka Sharma shares her fitness video in which actress is walking on treadmill ae
ತುಂಬು ಗರ್ಭಿಣಿ ಅನುಷ್ಕಾ ಶರ್ಮಾ


ಟ್ರೆಡ್​ ಮಿಲ್​ ಮೇಲೆ ತುಂಬು ಗರ್ಭಿಣಿ ಅನುಷ್ಕಾ ವಾಕ್​ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ನಟಿ, ತಮ್ಮ ಇನ್​ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೂ ಸಹ ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಟೀಕಿಸುತ್ತಿದ್ದಾರೆ.

ಇದನ್ನೂ ಓದಿ: 35ನೇ ವಸಂತಕ್ಕೆ ಕಾಲಿಟ್ಟ ನಟಿ ದೀಪಿಕಾ ಪಡುಕೋಣೆ...!

ಇನ್ನು ಇತ್ತೀಚೆಗಷ್ಟೆ ಅನುಷ್ಕಾ ವೋಗ್​ ಇಂಡಿಯಾಗಾಗಿ ಮಾಡಿಸಿರುವ ತಮ್ಮ ಬೇಬಿ ಬಂಪ್​ ಫೋಟೋಶೂಟ್​ ಸಖತ್​ ವೈರಲ್​ ಆಗಿದೆ. ಆದರೆ ಟ್ರೋಲಿಗರು ಅನುಷ್ಕಾ ತಮ್ಮ ಬೇಬಿ ಬಂಪ್​ ತೋರಿಸಿರುವ ರೀತಿಯನ್ನು ಟ್ರೋಲ್​ ಮಾಡುತ್ತಿದ್ದಾರೆ.


ಟ್ರೋಲಿಗರ ಟೀಕೆಗೆ ತಲೆಕೆಡಿಸಿಕೊಳ್ಳದ ಅನುಷ್ಕಾ ತಮ್ಮ ಜೀವನದಲ್ಲಿ ಬಿಂದಾಸ್​ ಆಗಿದ್ದಾರೆ. ತಮ್ಮ ಮನೆಯಲ್ಲಿ ಮುದ್ದಿನ ಸಾಕು ನಾಯಿ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.
ಇನ್ನೇನು, ಅನುಷ್ಕಾ ಅವರ ಮನೆಗೆ ಹೊಸ ಅತಿಥಿ ಆಗಮನಕ್ಕೆ ದಿನಗಣನೆ ಆರಂಭವಾಗಿದೆ. ಇದರಿಂದಾಗಿ ಅನುಷ್ಕಾ ಸದ್ಯ ಶೂಟಿಂಗ್​ಗೆ ಸದ್ಯಕ್ಕೆ ಬ್ರೇಕ್​ ನೀಡಿದ್ದಾರೆ.
Published by: Anitha E
First published: January 5, 2021, 10:01 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories