HOME » NEWS » Entertainment » PREGNANT ANUSHKA SHARMA PRACTICING SHIRSHASAN WITH THE HELP OF HUSBAND VIRAT KOHLI AE

Anushka Sharma: ಶೀರ್ಷಾಸನ ಮಾಡಿದ ತುಂಬು ಗರ್ಭಿಣಿ ಅನುಷ್ಕಾ ಶರ್ಮಾ: ಸಹಾಯಕ್ಕೆ ನಿಂತ ವಿರಾಟ್​ ಕೊಹ್ಲಿ..!

ಗರ್ಭಿಣಿಯಾಗುವ ಮುನ್ನ ಸಿನಿಮಾಗಳಿಂದ ದೂರ ಇದ್ದ ಅನುಷ್ಕಾ ಶರ್ಮಾ ಈಗ ಜಾಹೀರಾತುಗಳು ಹಾಗೂ ಇತರೆ ಬ್ರ್ಯಾಂಡ್​ಗಳ ಪ್ರಚಾರದ ಶೂಟಿಂಗ್​ನಲ್ಲಿ ವ್ಯಸ್ತವಾಗಿದ್ದಾರೆ. ತುಂಬು ಗರ್ಭಿಯಾಗಿದ್ದರೂ ಸಹ ಟ್ರಾವೆಲ್ ಮಾಡುತ್ತಾ, ಚಿತ್ರೀಕರಣದಲ್ಲಿ ಭಾಗಿಯಾಗುತ್ತಾ ಸಖತ್ ಆ್ಯಕ್ಟಿವ್​ ಆಗಿದ್ದಾರೆ.

Anitha E | news18-kannada
Updated:December 1, 2020, 1:25 PM IST
Anushka Sharma: ಶೀರ್ಷಾಸನ ಮಾಡಿದ ತುಂಬು ಗರ್ಭಿಣಿ ಅನುಷ್ಕಾ ಶರ್ಮಾ: ಸಹಾಯಕ್ಕೆ ನಿಂತ ವಿರಾಟ್​ ಕೊಹ್ಲಿ..!
ಅನುಷ್ಕಾ ಶರ್ಮಾ ಹಾಗೂ ವಿರಾಟ್​ ಕೊಹ್ಲಿ
  • Share this:
ಅನುಷ್ಕಾ ಶರ್ಮಾ ಹಾಗೂ ವಿರಾಟ್​ ಕೊಹ್ಲಿ 2017ರಲ್ಲಿ ದೂರದ ಇಟಲಿಗೆ ತೆರಳಿ ಡೆಸ್ಟಿನೇಷನ್​ ವೆಡ್ಡಿಂಗ್​ ಮಾಡಿಕೊಂಡಿದ್ದರು. ಇವರ ವಿವಾಹದ ಫೋಟೋಗಳಿಗೆ ಆಗ ಸಖತ್​ ಬೇಡಿಕೆ ಇತ್ತು. ಅದಕ್ಕಾಗಿಯೇ ಪಾಪರಾಜಿಗಳು ಸಿಕ್ಕಾಪಟ್ಟೆ ಒದ್ದಾಡಿದ್ದರು. ಈ ಸೆಲೆಬ್ರಿಟಿ ಜೋಡಿ ಮದುವೆಯಾಗಿ ಮೂರು ವರ್ಷಗಳ ನಂತರದಲ್ಲಿ ಸಿಹಿ ಸುದ್ದಿ ನೀಡಿದ್ದಾರೆ. ಕಳೆದ ಆಗಸ್ಟ್​ನಲ್ಲಿ ವಿರಾಟ್​ ಹಾಗೂ ಅನುಷ್ಕಾ ಶರ್ಮಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಮದುವೆಯಾದ ನಂತರ ಅನುಷ್ಕಾ ಶರ್ಮಾ ನಟನೆಯಿಂದ ಕೊಂಚ ಅಂತರ ಕಾಯ್ದುಕೊಂಡಿದ್ದರು. ಇತ್ತೀಚೆಗೆ ನಟನೆಗಿಂತ ಸಿನಿಮಾ ನಿರ್ಮಾಣ ಕಾರ್ಯದಲ್ಲೇ ಹೆಚ್ಚು ತೊಡಗಿದ್ದರು. ಅವರ ಹೊಟ್ಟೆ ಕೊಂಚ ಉಬ್ಬಿದ್ದರಿಂದ ಅನುಷ್ಕಾ ಗರ್ಭಿಣಿ ಎಂದೇ ಹೇಳಲಾಗುತ್ತಿತ್ತು. ನಂತರ ಖುದ್ದು ಅನುಷ್ಕಾ ಶರ್ಮಾ ಈ ವಿಚಾರವನ್ನು ಖಚಿತ ಪಡಿಸಿದರು. 

ಗರ್ಭಿಣಿಯಾಗುವ ಮುನ್ನ ಸಿನಿಮಾಗಳಿಂದ ದೂರ ಇದ್ದ ಅನುಷ್ಕಾ ಶರ್ಮಾ ಈಗ ಜಾಹೀರಾತುಗಳು ಹಾಗೂ ಇತರೆ ಬ್ರ್ಯಾಂಡ್​ಗಳ ಪ್ರಚಾರದ ಶೂಟಿಂಗ್​ನಲ್ಲಿ ವ್ಯಸ್ತವಾಗಿದ್ದಾರೆ. ತುಂಬು ಗರ್ಭಿಯಾಗಿದ್ದರೂ ಸಹ ಟ್ರಾವೆಲ್ ಮಾಡುತ್ತಾ, ಚಿತ್ರೀಕರಣದಲ್ಲಿ ಭಾಗಿಯಾಗುತ್ತಾ ಸಖತ್ ಆ್ಯಕ್ಟಿವ್​ ಆಗಿದ್ದಾರೆ.
ಅನುಷ್ಕಾ ಅವರ ಬೇಬಿ ಬಂಪ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಅವರ ಯಾವ ಲೆಟೆಸ್ಟ್ ಫೋಟೋ ಸಿಕ್ಕರೂ ಸಹ ಅಭಿಮಾನಿಗಳು ಅದ್ನು ತುಂಬಾ ಇಷ್ಟಪಟ್ಟು ಶೇರ್​ ಮಡುತ್ತಿದ್ದಾರೆ. ಈಗಲೂ ಸಹ ಅನುಷ್ಕಾ ಶರ್ಮಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಒಂದು ಲೆಟೆಸ್ಟ್​ ಪೋಸ್ಟ್​ ಮಾಡಿದ್ದಾರೆ.
ತುಂಬು ಗರ್ಭಿಣಿಯಾಗಿದ್ದರೂ ಅನುಷ್ಕಾ ನಿತ್ಯ ಯೋಗಾಸನಾ ಮಾಡುತ್ತಾರೆ. ವೈದ್ಯರೂ ಸಹ ಅವರಿಗೆ ತಮ್ಮ ನಿತ್ಯದ ಅಭ್ಯಾಸವನ್ನು ಮುಂದುವರೆಸುವಂತೆ ಹೇಳಿದ್ದಾರಂತೆ. ಅದಕ್ಕೆ ಅನುಷ್ಕಾ ಶರ್ಮಾ, ಮನೆಯಲ್ಲಿ ಗಂಡನ ಸಹಾಯದಿಂದ ವ್ಯಾಯಾಮ ಹಾಗೂ ಯೋಗಾಸನಾ ಅಭ್ಯಾಸ ಮಾಡುತ್ತಿದ್ದಾರೆ. ಇನ್ನು ಈಗ ಅವರು ಶೀರ್ಷಾಸನ ಮಾಡಿದ್ದು, ಅದಕ್ಕೆ ಗಂಡ ವಿರಾಟ್​ ಸಹಾಯ ಮಾಡಿದ್ದಾರೆ. ಅದರ ಚಿತ್ರವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.


ಜನವರಿಯಲ್ಲಿ ಅನುಷ್ಕಾ ಶರ್ಮಾ ಅವರಿಗೆ ವೈದ್ಯರು ಡೇಟ್​ ಕೊಟ್ಟಿದ್ದು, ಮಗುವಾಗುತ್ತಿದ್ದಂತೆಯೇ ವಿರಾಟ್​ ಪೆಟರ್ನಿಟಿ ರಜೆಗೆ ಹೋಗಲಿದ್ದಾರೆ. ಅದಕ್ಕಾಗಿ ಈಗಾಗಲೇ ಕೊಹ್ಲಿ ಅಪ್ಲಿಕೇಷನ್​ ಹಾಕಿದ್ದಾರಂತೆ.
Published by: Anitha E
First published: December 1, 2020, 1:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories