ಸಿನಿಮಾ ರಿಲೀಸ್​ ದಿನಾಂಕ ಪ್ರಕಟಿಸಲು ಪ್ರೀ ರಿಲೀಸ್​ ಇವೆಂಟ್​!

news18
Updated:July 19, 2018, 4:04 PM IST
ಸಿನಿಮಾ ರಿಲೀಸ್​ ದಿನಾಂಕ ಪ್ರಕಟಿಸಲು ಪ್ರೀ ರಿಲೀಸ್​ ಇವೆಂಟ್​!
news18
Updated: July 19, 2018, 4:04 PM IST
ನ್ಯೂಸ್​ 18 ಕನ್ನಡ 

ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳು ಸಾಮಾನ್ಯ. ಜನರನ್ನ ಸೆಳೆಯಲು, ಸಿನಿಮಾದ ಬಗ್ಗೆ ಅರಿವು ಮೂಡಿಸಲು ಅದೇನೇನೊ ಕಸರತ್ತುಗಳನ್ನ ಸಿನಿ ತಂಡಗಳು ಮಾಡುತ್ತಲೇ ಇರುತ್ತವೆ. ಹೀಗೆ ಮಾಡುವ ಕೆಲವೊಂದಷ್ಟು ಕಸರತ್ತುಗಳು ಯಶಸ್ವಿಯಾದರೆ, ಮತ್ತೆ ಕೆಲವು ಟುಸ್ ಪಟಾಕಿಯಾಗುತ್ತವೆ. ಸದ್ಯ ನಮ್ಮ ಕನ್ನಡದ ಅನೀಶ್ ತೇಜೇಶ್ವರ್ ಅಭಿನಯದ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಚಿತ್ರತಂಡ ಚಂದನವನದಲ್ಲೇ ಮೊದಲ ಬಾರಿಗೆ ಕಾರ್ಯಕ್ರಮವನ್ನು ಹೊತ್ತು ಬಂದಿದೆ.

'ವಾಸು ನಾನ್ ಪಕ್ಕಾ ಕಮರ್ಷಿಯಲ್' ಚಿತ್ರತಂಡ ಈಗಾಗಲೇ ಚಿತ್ರೀಕರಣ ಮುಗಿಸಿದ್ದು, ಸಿನಿಮಾ ರಿಲೀಸ್ ಬಗ್ಗೆ ಯೋಚಿಸುತ್ತಾ ಇದೆ. ಹೀಗಿರಬೇಕಾದರೆನೇ ಚಿತ್ರತಂಡಕ್ಕೆ ಹೊಳೆದಿದೆ ಇದೊಂದು ಪ್ಲಾನ್. ಅದು ಮತ್ತೇನು ಅಲ್ಲ. 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಚಿತ್ರತಂಡ ಮೊದಲ ಬಾರಿಗೆ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿದೆ.

ಅರೇ ಇದೇನಿದು ಹೊಸದಾಗಿ ಇದೆ ಅಂದ್ರಾ? ಹೌದು ಪ್ರೀ ರಿಲೀಸ್ ಕಾರ್ಯಕ್ರಮ ಅಂದರೆ ರಿಲೀಸ್‍ಗೂ ಮುನ್ನ ನಡೆಯೋ ಕಾರ್ಯಕ್ರಮ. ಇದರಲ್ಲಿ ಈ ಚಿತ್ರ ಯಾವ ದಿನಾಂಕಕ್ಕೆ  ರಿಲೀಸ್ ಆಗಲಿದೆ ಅನ್ನೋದನ್ನ ಬಹಿರಂಗ ಮಾಡಲಿದೆ. ಸಿನಿಮಾ ಬಿಡುಗಡೆ ದಿನಾಂಕ ಪ್ರಕಟಿಸಲೆಂದೇ ಈ ಕಾರ್ಯಕ್ರಮ ಹಮ್ಮಿಕೊಂಡಿರೋ ಚಿತ್ರತಂಡ, ಬಹಳ ಅದ್ದೂರಿಯಾಗಿ ನಗರದ ಅಂಬೇಡ್ಕರ್ ಭವನದಲ್ಲಿ ಇದೇ ತಿಂಗಳ 21ರಂದು ನಡೆಯಲಿದೆ.

ವಿಶೇಷ ಅಂದರೆ ಈ ಅದ್ಧೂರಿ ಕಾರ್ಯಕ್ರಮಕ್ಕೆ ದಾಸ ದರ್ಶನ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಚಿತ್ರತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಅಷ್ಟೆ ಅಲ್ಲದೇ ಚಿತ್ರತಂಡದ ಈ ಪ್ರಯತ್ನಕ್ಕೆ ಶಹಬಾಶ್​ ಹೇಳಿರೋ ದರ್ಶನ್ ಚಿತ್ರತಂಡಕ್ಕೆ ಶುಭಾಷಯ ತಿಳಿಸಿದ್ದಾರೆ..

ಅದೇ ದಿನ ಚಿತ್ರದ ಕಮರ್ಷಿಯಲ್ ಟ್ರೇಲರ್ ಕೂಡ ರಿಲೀಸ್ ಆಗಲಿದೆ. ಹಾಗೇ ಕಾರ್ಯಕ್ರಮದಲ್ಲಿ ಚಿತ್ರರಂಗದ ಹಲವು ತಾರೆಯರು ಭಾಗವಹಿಸಲಿದ್ದು, ಕೃಷಿ ತಾಪಂಡ, ಅನುಷಾ ರಂಗನಾಥ್, ಅನಿತಾ ಭಟ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಸ್ಟೇಜ್ ಶೋ ಕೂಡ ನೀಡಲಿದ್ದಾರೆ.

ಇಷ್ಟುದಿನ ತಮಿಳು, ತೆಲುಗು ಸಿನಿರಂಗದಲ್ಲಿ ಇತಂಹ ಪ್ರೀ ರಿಲೀಸ್ ಇವೆಂಟ್ ಹಮ್ಮಿಕೊಳ್ಳಲಾಗಿತ್ತು. ಆದರೆ ಈಗ ಕನ್ನಡದಲ್ಲೂ ಇಂತಹ ಪ್ರಯೋಗ ಮಾಡುತ್ತಿರೋ ಈ ತಂಡಕ್ಕೆ ಶುಭವಾಗಲಿ, ಸಿನಿಮಾವನ್ನ ಬೇಗ ಚಿತ್ರಮಂದಿರಕ್ಕೆ ಅನ್ನೋದೆ ಎಲ್ಲರ ಆಶಯ.
First published:July 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ