Jaggesh: ಎರಡನೇ ಸಲ ಪ್ರೀಮಿಯರ್ ಪದ್ಮಿನಿ ಏರಲಿದ್ದಾರೆ ಜಗ್ಗೇಶ್: ಜೋರಾಗಿದೆ ಸಿದ್ಧತೆ..!

Premier Padmini 2: ಏನೇ ವಿವಾದವಾದರೂ ಸಿನಿಮಾ ಮಾತ್ರ ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸಿತ್ತು. ನಿತ್ಯ ಸುತ್ತಮುತ್ತಲು ನಡೆಯುವ ಘಟನೆಗಳನ್ನು ನೆನಪಿಸುವ ಹಾಗೂ ನಮ್ಮ ನಿಮ್ಮೆಲ್ಲರ ಜೀವನದಲ್ಲಿ ಕಾಡುವ ಒಂಟಿತನ ಮಜಲುಗಳನ್ನು ಎಳೆ ಎಳೆಯಾಗಿ ಬೆಳ್ಳಿ ಪರದೆ ಮೇಲೆ ಬಿಡಿಸಿಡಲಾಗಿತ್ತು. ಈಗ ಸಿನಿಮಾದ ಎರಡನೇ ಭಾಗಕ್ಕೆ ಸಿದ್ಧತೆ ನಡೆದಿದೆ. 

Anitha E | news18-kannada
Updated:May 21, 2020, 8:07 PM IST
Jaggesh: ಎರಡನೇ ಸಲ ಪ್ರೀಮಿಯರ್ ಪದ್ಮಿನಿ ಏರಲಿದ್ದಾರೆ ಜಗ್ಗೇಶ್: ಜೋರಾಗಿದೆ ಸಿದ್ಧತೆ..!
ನವರಸ ನಾಯಕ ಜಗ್ಗೇಶ್
  • Share this:
ನವರಸ ನಾಯಕ ಜಗ್ಗೇಶ್, ಪ್ರಮೋದ್​, ಸುಧಾರಾಣಿ ಅಭಿನಯಿಸಿರುವ ಪ್ರೀಮಿಯರ್​ ಪದ್ಮಿನಿ  ವಿವಾದದ ನಡುವೆಯೇ ತೆರೆಕಂಡು ಪ್ರೇಕ್ಷಕನ ಮನಗೆದ್ದ ಸಿನಿಮಾ. ನಿರ್ದೇಶಕಿ ಶ್ರುತಿ ನಾಯ್ಡು ಅವರ ನಿರ್ದೇಶನದ ಈ ಸಿನಿಮಾದ ಕತೆಯನ್ನು ಕದಿಯಲಾಗಿದೆ ಎಂಬ ಆರೋಪವೂ ಆಗ ಕೇಳಿಬಂದಿತ್ತು. ಅದಕ್ಕೆ ನಿರ್ದೇಶಕಿ ಪ್ರತಿಕ್ರಿಯೆ ಸಹ ನೀಡಿದ್ದರು.

ಏನೇ ವಿವಾದವಾದರೂ ಸಿನಿಮಾ ಮಾತ್ರ ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸಿತ್ತು. ನಿತ್ಯ ಸುತ್ತಮುತ್ತಲು ನಡೆಯುವ ಘಟನೆಗಳನ್ನು ನೆನಪಿಸುವ ಹಾಗೂ ನಮ್ಮ ನಿಮ್ಮೆಲ್ಲರ ಜೀವನದಲ್ಲಿ ಕಾಡುವ ಒಂಟಿತನ ಮಜಲುಗಳನ್ನು ಎಳೆ ಎಳೆಯಾಗಿ ಬೆಳ್ಳಿ ಪರದೆ ಮೇಲೆ ಬಿಡಿಸಿಡಲಾಗಿತ್ತು. ಈಗ ಸಿನಿಮಾದ ಎರಡನೇ ಭಾಗಕ್ಕೆ ಸಿದ್ಧತೆ ನಡೆದಿದೆ.

Pre Production work has been started for Jaggeshs new movie Premier Padmini 2
ಪ್ರೀಮಿಯರ್​ ಪದ್ಮಿನಿ


ನಿರ್ದೇಶಕರು ಈಗಾಗಲೇ ಪ್ರೀಮಿಯರ್ ಪದ್ಮಿನಿ 2 ಸಿನಿಮಾಗಾಗಿ ಕತೆ ಸಿದ್ಧಪಡಿಸುತ್ತಿದ್ದಾರಂತೆ. ಈ ಸಲ ಈ ಚಿತ್ರವನ್ನು ನಿರ್ದೇಶಿಸಲಿರುವುದು ರಮೇಶ್​ ಇಂದ್ರ ಅವರು. ಹೀಗೆಂದು ಜಗ್ಗೇಶ್​ ಅವರೇ ಟ್ವೀಟ್ ಮಾಡಿದ್ದಾರೆ.

Pre Production work has been started for Jaggeshs new movie Premier Padmini 2
ಜಗ್ಗೇಶ್​ ಮಾಡಿರುವ ಟ್ವೀಟ್​


ಈ ಸಿನಿಮಾದಲ್ಲಿ ಹಾಸ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆಯಂತೆ. ನಗುವಿನ ಭರಪೂರ ರಸದೂಟಕ್ಕೆ ಸಿದ್ಧರಾಗಿ, ಲಾಕ್​ಡೌನ್​ ಮುಗಿದ ನಂತರ ಈ ಸಿನಿಮಾ ಉಳಿದ ಕೆಲಸಗಳು ಆರಂಭವಾಗುವ ನಿರೀಕ್ಷೆ ಇದೆ. ಮೊದಲ ಭಾಗದಲ್ಲಿದ್ದ ಕಲಾವಿದರಲ್ಲಿ ಜಗ್ಗೇಶ್​, ಪ್ರಮೋದ್​ ಸೇರಿದಂತೆ ಹಲವರು ಎರಡನೇ ಭಾಗದಲ್ಲೂ ಕಾಣಿಸಿಕೊಳ್ಳಲಿದ್ದಾರಂತೆ.

ಭಾವಿ ಪತ್ನಿಗೆ ಮುತ್ತಿಟ್ಟ ರಾಣಾ: ಭಾವಿ ಪತಿಯ ಹೆಸರಿನ ಟ್ಯಾಟೂ ಹಾಕಿಸಿಕೊಂಡ ಮಿಹಿಕಾ ..!
First published: May 21, 2020, 8:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading