Pratyusha Banerjee: ನಟಿ ಪ್ರತ್ಯುಶಾ ನಿಗೂಢ ಸಾವು: ಕೋರ್ಟ್-ಕೇಸ್ ಅಂತ ಎಲ್ಲವನ್ನೂ ಕಳೆದುಕೊಂಡ ಹೆತ್ತವರು

Pratyusha Banerjees Parents : ಪ್ರತ್ಯುಶಾ ಹೆತ್ತವರ ದುರಾಸೆ ಆಕೆಯನ್ನು ಕೊಂದಿತು ಎಂದು ಪ್ರಿಯಕರ ರಾಹುಲ್ ರಾಜ್ ಆರೋಪಿಸಿದ್ದಾರೆ.

ನಟಿ ಪ್ರತ್ಯುಶಾ

ನಟಿ ಪ್ರತ್ಯುಶಾ

  • Share this:

    ಹಿಂದಿಯ ಬಾಲಿಕಾ ವಧು ಧಾರಾವಾಹಿಯಲ್ಲಿ ಆನಂದಿ ಪಾತ್ರದ ಮೂಲಕ ಎಲ್ಲೆಡೆ ಮನೆ ಮಾತಾಗಿದ್ದರು ಪ್ರತ್ಯುಶಾ ಬ್ಯಾನರ್ಜಿ. ಆ ಪಾತ್ರಕ್ಕೆ ನ್ಯಾಯ ಒದಗಿಸುವ ಮೂಲಕ ಪ್ರತ್ಯುಶಾ, ವೀಕ್ಷಕರಿಂದ ಅಪಾರ ಪ್ರೀತಿ ಮತ್ತು ಮೆಚ್ಚುಗೆಯನ್ನು ಗಳಿಸಿದ್ದರು. ಆದರೆ, 2016ರಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡ ಸುದ್ದಿಯಿಂದ ಇಡೀ ಟಿವಿ ಉದ್ಯಮ ಶಾಕ್‍ಗೆ ಒಳಗಾಗಿತ್ತು. ಆಕೆಯ ಪ್ರಿಯಕರ ರಾಹುಲ್ ರಾಜ್ ಸಿಂಗ್ , ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಆರೋಪಿಸಿ ಆತನ ಮೇಲೆ , ಪ್ರತ್ಯುಶಾಳ ತಂದೆ ತಾಯಿ ದೂರು ದಾಖಲಿಸಿದ್ದರು. ಸುದ್ದಿ ವಾಹಿನಿಯೊಂದಕ್ಕೆ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, ಪ್ರತ್ಯುಶಾ ತಂದೆ ಶಂಕರ್ ಬ್ಯಾನರ್ಜಿ, ತಮ್ಮ ಹಣಕಾಸಿನ ತೊಂದರೆ ಮತ್ತು ತನ್ನ ಮಗಳ ಸಾವಿಗೆ ನ್ಯಾಯ ಒದಗಿಸುವ ಹೋರಾಟದಲ್ಲಿ ಹೇಗೆ ಎಲ್ಲವನ್ನು ಕಳೆದುಕೊಳ್ಳಬೇಕಾಯಿತು ಎಂಬುದನ್ನು ಹೇಳಿಕೊಂಡಿದ್ದಾರೆ.


    ಹಣಕಾಸಿನ ತೊಂದರೆಯಿಂದಾಗಿ ಈಗ ಅವರು ಒಂದು ಕೋಣೆಯ ಮನೆಗೆ ವಾಸ್ತವ್ಯ ಬದಲಾಯಿಸಬೇಕಾಯಿತು ಮತ್ತು ಸಾಲ ಪಡೆಯುವಂತಾಯಿತು ಎಂದು ಅವರು ತಿಳಿಸಿದ್ದಾರೆ. ಪ್ರತ್ಯುಶಾ ತಂದೆಯ ಪ್ರಕಾರ, ಮಗಳ ಸಾವಿನ ಪ್ರಕರಣ ಅವರ ಜೀವನದಲ್ಲಿ ಒಂದು ಬಿರುಗಾಳಿಯಂತೆ ಬಂದೆರಗಿತು ಮತ್ತು ಅವರಿಂದ ಎಲ್ಲವನ್ನೂ ಕಿತ್ತುಕೊಂಡು ಹೋಯಿತು.



    “ನಮ್ಮ ಹತ್ತಿರ ಒಂದು ಬಿಡಿಗಾಸೂ ಇಲ್ಲ. ಸಾವಿನ ಪ್ರಕರಣದ ಹೋರಾಟದಲ್ಲಿ ನಾವು ಪ್ರತಿಯೊಂದನ್ನೂ ಕಳೆದುಕೊಂಡೆವು” ಎಂದು ಅವರು ನೋವು ಹಂಚಿಕೊಂಡರು. ಪ್ರತ್ಯುಶಾಳ ಹೊರತಾಗಿ ನಮ್ಮ ಜೀವನಕ್ಕೆ ಬೇರೆ ಯಾವ ಬೆಂಬಲವೂ ಇರಲಿಲ್ಲ. ಪ್ರತ್ಯುಶಾ ನಮ್ಮನ್ನು ಆಕಾಶದೆತ್ತರಕ್ಕೆ ಕರೆದೊಯ್ದಿದ್ದಳ್ದು, ಅವಳ ಸಾವಿನ ನಂತರ ನಾವು ಮತ್ತೆ ಭೂಮಿಗೆ ಬಂದು ಬಿದ್ದಿದ್ದೇವೆ ಎಂದು ನೊಂದು ನುಡಿದಿದ್ದಾರೆ ಪ್ರತ್ಯುಶಾಳ ತಂದೆ. ಅವರ ಪ್ರಕಾರ, ಈ ಪ್ರಕರಣ ಅವರಿಂದ ಎಲ್ಲವನ್ನೂ ಕಿತ್ತುಕೊಂಡಿದೆ.” ಎಷ್ಟೋ ಸಲ ಪರಿಸ್ಥಿತಿ ಹೇಗಿರುತ್ತಿತ್ತೆಂದರೆ ನಾವು ಸಾಲ ತೆಗೆದುಕೊಳ್ಳಬೇಕಾಗುತ್ತಿತ್ತು” ಎಂದು ಶಂಕರ್ ಹೇಳಿದ್ದಾರೆ.


    ತಮ್ಮ ಪತ್ನಿ ಶಿಶುಪಾಲನಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ, ಮತ್ತು ಇಬ್ಬರೂ ದುಡಿದು ತಮ್ಮ ಜೀವನದ ಅಗತ್ಯಗಳಿಗೆ ಸಾಕಾಗುವಷ್ಟು ದುಡಿಯುತ್ತಿದ್ದೇವೆ. ಹಣದ ಕೊರತೆ ಇದ್ದರೂ ಇನ್ನೂ ಎದೆಗುಂದಿಲ್ಲ ಎಂದು ಅವರು ಹೇಳಿದ್ದಾರೆ. ತಮ್ಮ ಕೊನೆ ಉಸಿರು ಇರುವವರೆಗೂ, ಮಗಳು ಪ್ರತ್ಯುಶಾಳ ಸಾವಿಗೆ ನ್ಯಾಯ ಒದಗಿಸಲು ಹೋರಾಟ ಮಾಡಲು ಸಿದ್ಧವಿದ್ದಾರೆ. ಅವರಿಗೆ ತಮ್ಮ ಮಗಳ ಗೆಲುವೇ ಕೊನೆಯ ಆಶಾ ಕಿರಣ, ಒಂದು ದಿನ ತಾವು ಗೆದ್ದೇ ಗೆಲುತ್ತೇವೆ ಎಂಬ ನಂಬಿಕೆ ಅವರಿಗಿದೆ.


    ತನ್ನನ್ನು ಈ ಪ್ರಕರಣದಲ್ಲಿ ನ್ಯಾಯಾಲಯ ನಿರ್ದೋಷಿ ಎಂದು ತೀರ್ಪು ನೀಡುವ ದಿನಕ್ಕಾಗಿ ಕಾಯುತ್ತಿರುವುದಾಗಿ ಪ್ರತ್ಯುಶಾಳ ಪ್ರಿಯಕರ ರಾಹುಲ್ ರಾಜ್ ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ತಿಳಿಸಿದ್ದರು.ತನ್ನ ಮೇಲಿನ ಆರೋಪಗಳನ್ನು ನಿರಾಕರಿಸುತ್ತಾ, ಆಕೆಯ ಹೆತ್ತವರ ದುರಾಸೆ ಆಕೆಯನ್ನು ಕೊಂದಿತು ಎಂದು ರಾಹುಲ್ ರಾಜ್ ಹೇಳಿದ್ದಾರೆ. ಪ್ರತ್ಯುಶಾಗೆ, ತನ್ನ ಹೆತ್ತವರ ಕೊನೆಯಿಲ್ಲದ ಬೇಡಿಕೆಗಳನ್ನು ಪೂರೈಸಲು ಕಷ್ಟವಾಗುತ್ತಿತ್ತು, ಅದರಿಂದಾಗಿಯೇ ಅವಳು ಯಾರೂ ಊಹಿಸಲಾಗದ ನಿರ್ಧಾರ ತೆಗೆದುಕೊಳ್ಳಬೇಕಾಗಿ ಬಂತು ಎಂದೂ ಹೇಳಿದ್ದಾರೆ.

    First published: