ಬಿಗ್ ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಸಾಕಷ್ಟು ವಾದ-ವಿವಾದಗಳ ಜೊತೆಗೆ ಜಗಳ ಹಾಗೂ ಮನಸ್ತಾಪ ಕೊಂಚ ಹೆಚ್ಚಾಗಿದೆ ಎಂದರೆ ತಪ್ಪಾಗದು. ಸೂಪರ್ ಸಂಡೆ ವಿಥ್ ಸುದೀಪ ಸಂಚಿಕೆಯಲ್ಲಿ ಡಿ ಜೆ ಚಕ್ರವರ್ತಿ ಚಂದ್ರಚೂಡ ಹಾಗೂ ಮಂಜು ಪಾವಗಡ ಅವರ ನಡುವೆ ದೊಡ್ಡ ವಾಗ್ವಾದವೇ ನಡೆಯು ಹೋಯಿತು. ಚಂದ್ರಚೂಡ ಅವರು ಮೊದಲ ಇನ್ನಿಂಗ್ಸ್ ಮುಗಿದು ಮನೆಗೆ ಹೋದಾಗ ಕೆಲವು ಯೂಟ್ಯೂಬ್ ಚಾನಲ್ಗಳಲ್ಲಿ ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಅವರ ಸ್ನೇಹ ಸಂಬಂಧವಕ್ಕೆ ಫೇಕ್ ಲವ್ ಸ್ಟೋರಿಯ ಹೆಸರು ಕೊಟ್ಟು ಟೀಕೆ ಮಾಡಿದ್ದಾರೆ. ಇದಕ್ಕೆ ಪ್ರಶಾಂತ್ ಸಂಬರಗಿ ಅವರೂ ಹೊರತಾಗಿಲ್ಲ. ಅವರೂ ಸಹ ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಅವರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಈ ಕುರಿತಾಗಿ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳು ಮತ್ತೆ ಹೋದ ದಿನವೇ ನಡೆದ ಮೊದಲ ನಾಮಿನೇಶನ್ ಪ್ರಕ್ರಿಯೆಯಂದು ಈ ಎಲ್ಲ ವಿಷಯಗಳು ಹೊರ ಬಿದ್ದಿದ್ದವು.
ಹೊರಗೆ ಹಾಗೂ ಒಳಗೆ ಸ್ಪರ್ಧಿಗಳು ಇತರೆ ಸ್ಪರ್ಧಿಗಳ ಕುರಿತಾಗಿ ಮಾತನಾಡಿರುವ ವಿಡಿಯೋ ಕ್ಲಿಪ್ಗಳ ಆಧಾರದ ಮೇಲೆಯೇ ಮೊದಲ ನಾಮಿನೇಶನ್ ನಡೆದಿದ್ದು. ಆದರೆ ಬಿಗ್ ಬಾಸ್ ಮನೆಯಲ್ಲಿ ಈ ಸಲ ಮೊದಲ ವಾರದ ಎಲಿಮಿನೇಶನ್ ಪ್ರಕ್ರಿಯೆ ನಡೆಯಲಿಲ್ಲ. ಕಾರಣ ಎಲಿಮಿನೇಶನ್ ಪ್ರಕ್ರಿಯೆಗೆ ಟ್ವಿಸ್ಟ್ ಕೊಟ್ಟು ಅದನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ.
ಹೌದು, ಮೊದಲಿಗೆ ಪ್ರಶಾಂತ್ ಸಂಬರಗಿ ಮನೆಯಿಂದ ಹೊರ ಹೋದ ಮೊದಲ ಸ್ಪರ್ಧಿ ಎಂದು ಪ್ರಕಟಿಸಿದ ಸುದೀಪ್, ಅದು ಕೇವಲ ಪ್ರ್ಯಾಂಕ್ ಎಂದು ಮನೆಯವರ ಬಳಿ ಹೇಳಿದರು. ಆಗಲೇ ಪ್ರಶಾಂತ್ ಸಂಬಗರಿ ಅವರಿಗೆ ಇದ್ದರೂ ಮನೆಯಲ್ಲಿ ಇಲ್ಲದಂತೆ ಇರುವ ಟಾಸ್ಕ್ ಕೊಟ್ಟಿದ್ದು ಬಿಗ್ ಬಾಸ್.
View this post on Instagram
ಇದನ್ನೂ ಓದಿ: Bigg Boss 8: ಚಕ್ರವರ್ತಿ-ಮಂಜು ನಡುವಿನ ವಾದ-ವಿವಾದ: ಖ್ಯಾತ ನಟಿಯ ಜತೆಗಿನ ವಿಚ್ಛೇದನದ ವಿಷಯ ಚರ್ಚೆಗೆ ಬಂತು..!
ಈ ಟಾಸ್ಕ್ ಅನ್ನೇ ಅಸ್ತ್ರವಾಗಿಟ್ಟುಕೊಂಡು ಪ್ರಶಾಂತ್ ಸಂಬರಗಿ ಮನೆಯವರಿಗೆ ಸರಿಯಾಗಿ ಆಟವಾಡಿಸುತ್ತಿದ್ದಾರೆ. ಇನ್ನು ಇದನ್ನೇ ಮುಂದಿಟ್ಟುಕೊಂಡು ಪ್ರಶಾಂತ್ ಸಂಬರಗಿ ಅವರು ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಅವರ ಮನಸ್ಸಿಗೆ ನೋವಾಗುವಂತೆಯೂ ಮಾಡುತ್ತಿದ್ದಾರೆ.
View this post on Instagram
ಇದನ್ನೂ ಓದಿ: Bigg Boss 8: ದಿವ್ಯಾ ಸುರೇಶ್-ಪ್ರಿಯಾಂಕಾ ತಿಮ್ಮೇಶ್ರನ್ನು ಟಾರ್ಗೆಟ್ ಮಾಡಿದ ಚಕ್ರವರ್ತಿ ಚಂದ್ರಚೂಡ
ಮಂಜು ಅವರನ್ನು ದಿವ್ಯಾ ಸುರೇಶ್ ಅವರ ಬಾಡಿಗಾರ್ಡ್ ಹಾಗೂ ಸೆಕ್ಯೂರಿಟಿ ಗಾರ್ಡ್ ಎಂದೆಲ್ಲ ಈ ಹಿಂದೆಯೂ ಸಂಬರಗಿ ಕರೆದಿದ್ದರು. ಈಗಲೂ ಅದನ್ನೇ ಮುಂದುವರೆಸುತ್ತಾ ದಿವ್ಯಾ ಸುರೇಶ್ ಅವರು ಕಣ್ಣೀರಿಡುವಂತೆ ಮಾಡಿದ್ದಾರೆ. ಇನ್ನು ಬೆಳಿಗಿನಿಂದ ಎಷ್ಟೇ ಪಾಸಿಟಿವ್ ಆಗಿ ಇರಲು ಪ್ರಯತ್ನಿಸಿದರೂ ಹಾಗೆ ಇರಲು ಬಿಡದೆ ಚುಚ್ಚು ಮಾತುಗಳಿಂದ ಪ್ರಶಾಂತ್ ನೋವು ಮಾಡುತ್ತಿದ್ದಾರೆಂದು ಪ್ರಿಯಾಂಕಾ ಬಳಿ ದಿವ್ಯಾ ಸುರೇಶ್ ಅಳಲು ತೋಡಿಕೊಂಡಿದ್ದಾರೆ. ಇನ್ನು ಮಂಜು ಪಾವಗಡ ಸಹ ಪ್ರಶಾಂತ್ ಅವರ ಮಾತಿನಿಂದ ನೊಂದು ಕಣ್ಣೀರಿಟ್ಟಿದ್ದಾರೆ.
ಇನ್ನು ಪ್ರಶಾಂತ್ ಸಂಬರಗಿ ಮನೆಯಲ್ಲಿ ದಿವ್ಯಾ ಉರುಡುಗ, ರಘು, ವೈಷ್ಣವಿ, ಚಕ್ರವರ್ತಿ ಚಂದ್ರಚೂಡ ಹಾಗೂ ಶಮಂತ್ ಅವರನ್ನು ಮಾತನಾಡಿಸಲು ಸಿಕ್ಕಾಪಟ್ಟೆ ಪ್ರಯತ್ನ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ