ಲಾಕ್ಡೌನ್ನಿಂದಾಗಿ ಎಲ್ಲ ಸೆಲೆಬ್ರಿಟಿಗಳು ಮನೆಯಲ್ಲೇ ಲಾಕ್ ಆಗಿದ್ದಾರೆ. ಮನೆಯಲ್ಲಿ ಕುಟುಂಬದೊಂದಿಗೆ ಕಳೆಯುತ್ತಿರುವ ಖುಷಿಯ ಕ್ಷಣಗಳನ್ನು ಆಗಾಗ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ. ಹಾಗೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸಹ ಒಂದು ಕ್ರೇಜಿ ವಿಡಿಯೋ ಹಂಚಿಕೊಂಡಿದ್ದಾರೆ.
ಪ್ರಶಾಂತ್ ನೀಲ್ ಹಾಗೂ ಶ್ರೀಮುರಳಿ ಸಂಬಂಧಿಕರು ಅನ್ನೋದು ಗೊತ್ತೇ ಇದೆ. ಸಮಯ ಸಿಕ್ಕಾಗಲೆಲ್ಲ ಒಟ್ಟಿಗೆ ಸೇರಿ ಮಜ ಮಾಡುವ ಇವರ ಕುಟುಂಬಗಳು ಸಖತ್ ಕ್ರೇಜಿ ಆಟಗಳನ್ನೂ ಆಡುತ್ತಿರುತ್ತಾರೆ.
ಇದನ್ನೂ ಓದಿ: Rashmika Mandanna: ಜೊತೆಗೆ ಕೆಲಸ ಮಾಡುವವರ ಸಂಬಳ ಕಡಿತ ಗೊಳಿಸುವುದಾಗಿ ಹೇಳಿದ ರಶ್ಮಿಕಾ..!
ಈ ವಿಡಿಯೋಗೆ ಕಮೆಂಟ್ ಮಾಡಿರುವ ಶ್ರೀಮುರಳಿ ಪತ್ನಿ ವಿದ್ಯಾ, ನೀನು ಒಬ್ಬಳೇ ಹಾಡನ್ನು ಏಕೆ ಕೇಳುತ್ತೇನೆ ಎಂದು ಎಲ್ಲರೂ ನನ್ನ ಕೇಳುತ್ತಾರೆ. ಅದಕ್ಕೆ ಈ ವಿಡಿಯೋನೇ ಉತ್ತರ ಎಂದು ಅವರೂ ತಮಾಷೆ ಮಾಡಿದ್ದಾರೆ.
ಲಾಕ್ಡೌನ್ನಲ್ಲಿ ಈ ಕ್ರೇಜಿ ಕುಟುಂಬ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಸದಾ ಸಿನಿಮಾದ ಚಿತ್ರೀಕರಣ ಅಂತ ತಿಂಗಳು ಗಟ್ಟಲೆ ಮನೆಯಿಂದ ದೂರ ಇರುತ್ತಿದ್ದವರಿಗೆ ಈ ಲಾಕ್ಡೌನ್ ನಿಜಕ್ಕೂ ವರವಾಗಿದೆ ಎಂದರೆ ತಪ್ಪಾಗಲಾರದು.
Kangana Ranaut: 48 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ ಕಂಗನಾರ ಈ ಪ್ರೊಡಕ್ಷನ್ ಹೌಸ್..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ