KGF 3 ಕುರಿತು ಬಿಗ್​ ಅಪ್​ಡೇಟ್​ ನೀಡಿದ ನೀಲ್, ಶೂಟಿಂಗ್ ಆರಂಭ ಯಾವಾಗ?

ನಿರ್ದೇಶಕ ನೀಲ್ ಸಹ KGF 3 ಬರುವುದು ಪಕ್ಕಾ ಎಂದಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸಂತಸದ ಸುದ್ದಿಯನ್ನು ನೀಡಿದ್ದಾರೆ. ಇದೀಗ ಪ್ರಶಾಂತ್ ನೀಲ್ ಕೂಡ 'ಕೆಜಿಎಫ್ 3' ಬಗ್ಗೆ ಇಂಟ್ರೆಸ್ಟಿಂಗ್ ವಿಷಯಗಳನ್ನು ರಿವೀಲ್ ಮಾಡಿದ್ದಾರೆ.

ಯಶ್ ಮತ್ತು ಪ್ರಶಾಂತ್ ನೀಲ್

ಯಶ್ ಮತ್ತು ಪ್ರಶಾಂತ್ ನೀಲ್

  • Share this:
ಪ್ರಪಂಚವೇ ಒಮ್ಮೆ ಸ್ಯಾಂಡಲ್​ ವುಡ್​ನತ್ತ (Sandalwood) ತಿರುಗಿ ನೋಡುವಂತೆ ಮಾಡಿದ ಕನ್ನಡದ ಹೆಮ್ಮೆಯ ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಕೆಜಿಎಫ್ 2  (KGF 2)ಚಿತ್ರವು ಈಗಾಗಲೇ ಬಿಡುಗಡೆಯಾಗಿ ಬಾಕ್ಸ್​ ಆಫೀಸ್​ನಲ್ಲಿ ದೂಳೆಬ್ಬಿಸಿದೆ. ಅದರಲ್ಲಿಯೂ ಈ ಚಿತ್ರದ ಮೂಲಕ ಯಶ್ ನ್ಯಾಷನಲ್ ಸ್ಟಾರ್ ಆದರೆ, ನಿರ್ದೇಶಕ ಪ್ರಶಾಂತ್ ನೀಲ್ (Prashnath Neel) ಬೇರೆ ಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಕೆಜಿಎಫ್ 2 ಚಿತ್ರದ ಕೊನೆಯಲ್ಲಿ KGF 3 ಚಿತ್ರ ಬರಲಿದೆ ಎಂಬ ಹಿಂಟ್ ನೀಡುವ ಮೂಲಕ ನೀಲ್ ಅಭಿಮಾನಿಗಳಲ್ಲಿ ಮತ್ತಷ್ಟು ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಇದರ ಭಾಗವಾಗಿ ಒಮ್ಮೆ ಚಿತ್ರದ ನಿರ್ಮಾಪಕ ವಿಜಯ್ ಕಿರಂಗದೂರು ಚಿತ್ರ ಬರುವುದು ಪಕ್ಕಾ ಎಂದಿದ್ದರು. ಇದೀಗ ನಿರ್ದೇಶಕ ನೀಲ್ ಸಹ ಇನ್ನು ಮತ್ತೊಮ್ಮೆ ಉಚ್ಚರಿಸಿದ್ದು, ಕೆಜಿಎಫ್ 3 ಬರುವುದು ಪಕ್ಕಾ ಎಂದಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸಂತಸದ ಸುದ್ದಿಯನ್ನು ನೀಡಿದ್ದಾರೆ. ಇದೀಗ ಪ್ರಶಾಂತ್ ನೀಲ್ ಕೂಡ 'ಕೆಜಿಎಫ್ 3' ಬಗ್ಗೆ ಇಂಟ್ರೆಸ್ಟಿಂಗ್ ವಿಷಯಗಳನ್ನು ರಿವೀಲ್ ಮಾಡಿದ್ದಾರೆ.

ಕೆಜಿಎಫ್ 3 ಕುರಿತು ಬಿಗ್​ ಅಪ್​ಡೇಟ್ ನೀಡಿದ ನೀಲ್:

ಹೌದು, ಈಗಾಗಲೇ ಕೆಜಿಎಫ್ 3 ಕುರಿತು ನಿರ್ಮಾಪಕರಾದ ವಿಜಯ್ ಕಿರಂಗದರು ಮಾತನಾಡಿದ್ದರು. ಇದೀಗ ಇದೇ ರೀತಿ ಮಾತನಾಡಿರುವ ನಿರ್ದೇಶಕ ಪ್ರಶಾಂತ್ ನೀಲ್ ಯೂಟ್ಯೂಬ್ ಚಾನೆಲ್‌ನಲ್ಲಿ ನೀಡಲದ ಸಂದರ್ಶದಲ್ಲಿ ಮಾತನಾಡಿದ್ದಾರೆ, ಕೆಜಿಎಫ್ 3 ಕುರಿತು ರಿಲೀಲ್ ಮಾಡಿರುವ ಅವರು, ‘ಕೆಜಿಎಫ್ ಚಾಪ್ಟರ್ 3 ಬರುವ ಎಲ್ಲಾ ಸಾಧ್ಯತೆಳಿವೆ. ಆದರೆ ಕೆಜಿಎಫ್ 2 ಯಶಸ್ಸಿನ ನಂತರದ ಬಲವಂತಕ್ಕೆ ಈ ಸಿನಿಮಾ ಆಗುತ್ತಿದೆ. ಕೆಜಿಎಫ್ ಪ್ರಪಂಚವನ್ನು ಜನರು ಒಪ್ಪಿದ್ದಾರೆ. ಅವರು ಈ ಸಿನಿಮಾದ ಪಾತ್ರಗಳನ್ನು ಪ್ರೀತಿ ಮಾಡಿದ್ದಾರೆ. ಹೀಗಾಗಿ ಕಥೆ ಮುಂದುವರೆಸಲು ನಾವು ಬಯಸಿದ್ದೇವೆ. ಆದರೆ ಯಾವಾಗ? ಅನ್ನುವುದು ನಮಗೆ ಗೊತ್ತಿಲ್ಲ‘ ಎಂದು ನೀಲ್ ಹೇಳಿದ್ದಾರೆ. ಈ ಮೂಲಕ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಕೇಔಲ ಕೆಲವೊಂದು ಒತ್ತಡದಿಂದಾಗಿ ನೀಲ್ ಚಾಫ್ಟರ್ 3 ಮಾಡಲಿದ್ದಾರಾ ಎಂಬ ಅನುಮಾನ ಮೂಡಿದೆ.

ಕೆಜಿಎಫ್ 3 ಸಿನಿಮಾ ಶೂಟಿಂಗ್ ಸದ್ಯಕ್ಕಿಲ್ಲ:

ಅಕ್ಟೋಬರ್​ನಲ್ಲಿ ಕೆಜಿಎಫ್ 3 ಶೂಟಿಂಗ್ ಆರಂಭವಾಗಲಿದೆ ಎಂದು ಹೇಳಲಾಗುತ್ತಿತ್ತು, ಆದರೆ ಇದೀಗ ಕೆಜಿಎಫ್ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಕೆಜಿಎಫ್-2 ನೋಡಿ ಫುಲ್ ಖುಷ್ ಆಗಿದ್ದ ಅಭಿಮಾನಿಗಳು ಕೆಜಿಎಫ್-3ಗಾಗಿ ಕಾತರದಿಂದ ಕಾಯುತ್ತಿದ್ದರು. ಆದರೀಗ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದಿದ್ದಾರೆ.

ಇದನ್ನೂ ಓದಿ: Srinidhi Shetty: ರಾಕಿ ಭಾಯ್ ಬೆಡಗಿಯ ಮುಂದಿನ ಸಿನಿಮಾ ಯಾವ್ದು? ಶ್ರೀನಿಧಿಗೆ ಸಿನಿಮಾಗಳಲ್ಲಿ ಇದೇ ಸಮಸ್ಯೆಯಂತೆ

ಇಲ್ಲಿಯವರೆಗೆ ಕೆಜಿಎಫ್-2 ಗಳಿಸಿದ್ದೆಷ್ಟು?:

ಕೆಜಿಎಫ್: ಅಧ್ಯಾಯ 2 ವಿಶ್ವಾದ್ಯಂತ ರೂ 1239.97 ಕೋಟಿ ಗಳಿಸಿದೆ ಎಂದು ಹೇಳಿದ್ದಾರೆ. ವಿಜಯಬಾಲನ್ ಹೇಳಿರುವ ಪ್ರಕಾರ, ಕೆಜಿಎಫ್ 2 ಗಳಿಕೆ ಹೀಗಿದೆ.  ಅಲ್ಲದೇ ಈವರೆಗೆ ಕೆಜಿಎಫ್ 2 ಚಿತ್ರವು 1250 ಕೋಟಿಗೂ ಹೆಚ್ಚಿನ ಗಳಿಕೆ ಮಾಡಿದೆ ಎಂದು ತಿಳಿದುಬಂದಿದೆ. ಈ ಮೂಲಕ ಸ್ಯಾಂಡಲ್ ವುಡ್ ಮತ್ತು ಭಾರತೀಯ ಚಿತ್ರರಂಗದಲ್ಲಿ ಅನೇಖ ದಾಖಲೆಗಳನ್ನು ಸೃಷ್ಟಿ ಮಾಡಿದೆ.

ಇದನ್ನೂ ಓದಿ: Happy Birthday Prashanth Neel: ಸ್ಯಾಂಡಲ್​ವುಡ್​ನ ಸ್ಟಾರ್​ ಡೈರೆಕ್ಟರ್​ ಪ್ರಶಾಂತ್​ ನೀಲ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಸದ್ಯ ಬ್ಯುಸಿಯಾಗಿದೆ ಕೆಜಿಎಫ್ ಚಿತ್ರತಂಡ:

ಹೌದು, ಕೆಜಿಎಫ್ ಚಿತ್ರತಂಡವು ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದೆ. ನಿರ್ದೇಶಕ ಪ್ರಶಾಮತ್ ನೀಲ್ ಸಲಾರ್ ಚಿತ್ರದ ಚಿತ್ರೀಕರಣದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇದರ ನಡುವೆ ನೀಲ್ ಮುಂದಿನ ಚಿತ್ರದ ಭಾಗವಾಗಿ ಈಗಾಗಲೇ ಜೂ ಎನ್​ಟಿಆರ್ ಜೊತೆ ಸಿನಿಮಾವನ್ನು ಘೋಷಿಸಿದ್ದಾರೆ. ಈ 2 ಚಿತ್ರದ ನಂತರವಷ್ಟೇ ಕೆಜಿಎಫ್ 3 ಆರಂಭವಾಗುವ ಸಾಧ್ಯತೆ ಇದೆ. ಯಶ್ ಸಹ ತಮ್ಮ ಮುಂದಿನ ಸಿನಿಮಾದ ಆಲೋಚನೆಯಲ್ಲಿದ್ದಾರೆ. ಇದು ಕನ್ಫರ್ಮ್ ಆದಲ್ಲಿ ಯಶ್ ಅವರು ಮುಂದಿನ ಸಿನಿಮಾದ ಬಿಡುಗಡೆ ನಂತರವಷ್ಟೇ ಕೆಜಿಎಫ್ 3 ಬರಲಿದೆ ಹೀಗಾಗಿ ಸದ್ಯಕ್ಕಂತು ಕೆಜಿಎಫ್ 3 ಬರಲಿದೆ.
Published by:shrikrishna bhat
First published: