ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಅವರ ಟ್ವಿಟರ್ (Twitter) ಖಾತೆ ಈಗ ಲಭ್ಯವಿಲ್ಲ. ಹೌದು ಸೌತ್ ಸಿನಿಮಾ ಇಂಡಸ್ಟ್ರಿಯ (Industry) ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರು ಇತ್ತೀಚೆಗೆ ರಾಕಿ ಭಾಯ್ ಯಶ್ಗೆ (Yash) ವಿಶ್ ಮಾಡಿದ್ದರು. ಅದರ ನಂತರ ಅವರ ಟ್ವಿಟರ್ ಖಾತೆ ಲಭ್ಯವಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ (Social Media) ಕಂಡುಬರುತ್ತಿದೆ. ಸಿನಿಮಾಗಳಿಗೆ ಸಂಬಂಧಿಸಿದ ಪೋಸ್ಟ್, ವಿಡಿಯೋ, ಅಪ್ಡೇಟ್ಗಳನ್ನು ಶೇರ್ ಮಾಡುತ್ತಿದ್ದ ನೀಲ್ ಅವರ ಇನ್ಸ್ಟಾಗ್ರಾಮ್ (Instagram) ಹಾಗೂ ಟ್ವಿಟರ್ (Twitter) ಖಾತೆ ಈ ಆ್ಯಕ್ಟಿವ್ ಆಗಿಲ್ಲ. ಸೌತ್ ಸಿನಿ ಪ್ರಿಯರು ಸೌತ್ ಸಿನಿಮಾಗಳ (South Cinema) ಬಿಗ್ ಅಪ್ಡೇಟ್ಗಳಿಗಾಗಿ ಪ್ರಶಾಂತ್ ನೀಲ್ ಅವರನ್ನು ಫಾಲೋ ಮಾಡುತ್ತಲೇ ಇರುತ್ತಾರೆ.
ಪ್ರಶಾಂತ್ ನೀಲ್ ಟ್ವಿಟರ್ & ಇನ್ಸ್ಟಾಗ್ರಾಮ್ನಲ್ಲಿಲ್ಲ
ಈ ಪ್ರಶಾಂತ್ ನೀಲ್ ಅವರು ಟ್ವಿಟರ್ ಅಥವಾ ಇನ್ಸ್ಟಾಗ್ರಾಮ್ನಲ್ಲಿ ಲಭ್ಯವಿಲ್ಲ. ಅಭಿಮಾನಿಗಳೊಂದಿಗೆ ಸಿನಿಮಾ ಸಂಗತಿಗಳನ್ನು ಅವರು ಹಂಚಿಕೊಳ್ಳುತ್ತಿದ್ದರು. ಆದರೆ ಇನ್ನು ಸಿನಿ ಪ್ರೇಮಿಗಳಿಗೆ ನೀಲ್ ಅವರಿಂದ ಸಿಗುತ್ತಿದ್ದ ಸಿನಿಮಾ ಅಪ್ಡೇಟ್ಗೆ ಬ್ರೇಕ್ ಬೀಳಲಿದೆ.
ಯಶ್ಗೆ ವಿಶ್ ಮಾಡಿದ್ದ ನಿರ್ದೇಶಕ
ನಿರ್ದೇಶಕ ನೀಲ್ ಅವರು ರಾಕಿಂಗ್ ಸ್ಟಾರ್ ಯಶ್ಗೆ ಬರ್ತ್ಡೇ ವಿಶ್ ಮಾಡಿದ್ದರು. ಜನವರಿ 8ರಂದು ರಾಕಿ ಭಾಯ್ ಬರ್ತ್ಡೇ ಆಚರಿಸಿಕೊಂಡ ಸಂದರ್ಭ ಕೆಜಿಎಫ್ ಡೈರೆಕ್ಟರ್ ತಮ್ಮ ಹೀರೋಗೆ ಹ್ಯಾಪಿ ಬರ್ತ್ಡೇ ಹೇಳಿದ್ದರು. ಆದರೆ ಆ ನಂತರ ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್ನಿಂದ ದೂರವಾಗಿದ್ದಾರೆ.
ಲಾಸ್ಟ್ ಟ್ವೀಟ್ ಏನು?
ನಟ ಯಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಪ್ರಶಾಂತ್ ನೀಲ್ ಮಾಡಿದ್ದ ಟ್ವೀಟ್ ಅವರ ಕೊನೆಯ ಪೋಸ್ಟ್. ನಂತರ ಅವರು ಸೋಷಿಯಲ್ ಮೀಡಿಯಾದಿಂದ ಕ್ವಿಟ್ ಆಗಿದ್ದಾರೆ. ನೀಲ್ ಅವರು ಯಶ್ಗೆ ಉರ್ದುವಿನಲ್ಲಿ ವಿಶ್ ಮಾಡಿದ್ದರು. ಇದೇ ವಿಚಾರಕ್ಕೆ ಕನ್ನಡಿಗೆ ಆಕ್ರೋಶಕ್ಕೂ ಗುರಿಯಾಗಿದ್ದರು.
ಉರ್ದುವಿನಲ್ಲಿ ವಿಶ್ ಮಾಡಿದ್ದೇನು?
ಫಲಕ್ ಕಾ ದಸ್ತೂರ್, ಖುದಾ ಕಾ ಹುಕುಮ್, ಔರ್ ಏಕ್ ಭಾಯಿ ಕೀ ದುವಾ ಹೈಕೀ ಹಾತೋಂ ಕೀ ಲಕೀರೋ ಕೋ ಭೀ ರುಕ್ಸತ್ ಕರ್, ರೋಕ್ನೇಸೆ ಭೀ ನಹೀ ರುಕೇಗಿ ತುಮ್ಹಾರಿ ಯೇ ಸಲ್ತನತ್ ಎಂದಿದ್ದರು. ಜೊತೆಗೆ 'ಹುಟ್ಟುಹಬ್ಬದ ಶುಭಾಶಯಗಳು ಬಾಸ್' ಎಂದಿದ್ದರು. ಯಶ್ ಜೊತೆಗಿರುವ ಫೋಟೋವನ್ನೂ ಶೇರ್ ಮಾಡಿದ್ದರು.
ಫಲಕ್ ಕಾ ದಸ್ತೂರ್ ಖುದಾ ಕಾ ಹುಕುಮ್ ಔರ್ ಏಕ್ ಭಾಯಿ ಕೀ ದುವಾ ಹೈ ಕೀ ಹಾತೋಂ ಕೀ ಲಕೀರೋ ಕೋ ಭೀ ರುಕ್ಸತ್ ಕರ್ ರೋಕ್ನೇಸೆ ಭೀ ನಹೀ ರುಕೇಗಿ ತುಮ್ಹಾರಿ ಯೇ ಸಲ್ತನತ್ ಎಂದಿದ್ದರು. ಜೊತೆಗೆ 'ಹುಟ್ಟುಹಬ್ಬದ ಶುಭಾಶಯಗಳು ಬಾಸ್' ಎಂದಿದ್ದರು. ರಾಕಿ ಭಾಯ್ ಜೊತೆಗಿರುವ ಫೋಟೋವನ್ನೂ ಶೇರ್ ಮಾಡಿದ್ದರು. ಈ ಟ್ವೀಟ್ ವೈರಲ್ ಆಗಿತ್ತು.
ಉರ್ದು ಬಳಸಿದ್ದಕ್ಕೆ ಆಕ್ಷೇಪ
ಆದರೆ ನೆಟ್ಟಿಗರು ಯಶ್ಗೆ ವಿಶ್ ಮಾಡಲು ನೀಲ್ ಅವರು ಉರ್ದು ಬಳಸಿದ್ದಕ್ಕೆ ಬೇಸರಗೊಂಡಿದ್ದರು. ಕನ್ನಡದಲ್ಲೇ ಬರ್ತ್ಡೇ ವಿಶ್ ಮಾಡಬಹುದಿತ್ತಲ್ಲ. ಉರ್ದು ಬಳಸಿದ್ಯಾಕೆ ಎಂದು ಸ್ಟಾರ್ ನಿರ್ದೇಶಕರನ್ನು ಟ್ರೋಲ್ ಮಾಡಿದ್ದರು. ಕನ್ನಡ ಕಡೆಗಣಿಸಿದ್ದಾರೆ ಎಂದು ಒಂದಷ್ಟು ಜನರು ಟ್ವೀಟ್ಗೆ ಟ್ರೋಲ್ ಮಾಡಿ, ಪ್ರಶಾಂತ್ ನೀಲ್ ಅವರ ಕಾಲೆಳೆದಿದ್ದರು. ಆದರೆ ಈಗ ದಿಢೀರ್ ಆಗಿ ನಿರ್ದೇಶಕ ಸೋಷಿಯಲ್ ಮಿಡಿಯಾದಿಂದ ಹೊರಬಂದಿದ್ದಾರೆ. ಅವರ ಈ ನಿರ್ಗಮನಕ್ಕೆ ನಿಜವಾದ ಕಾರಣ ತಿಳಿದುಬಂದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ