Salaar: ಸಲಾರ್​ ಸಿನಿಮಾದ ಟೈಟಲ್​ ಬಗ್ಗೆ ಮೌನ ಮುರಿದ ಪ್ರಶಾಂತ್ ನೀಲ್​..!

Prashanth Neel: ಇನ್ನು ಸಾಕಷ್ಟು ಮಂದಿಗೆ ಸಲಾರ್ ಎಂದರೆ ಏನರ್ಥ ಎಂದು ತಿಳಿದಿರಲಿಲ್ಲ. ಈ ಸಿನಿಮಾದ ಟೈಟಲ್​ ಅರ್ಥ ಹುಡುಕಾಡುತ್ತಿದ್ದರು. ಎಲ್ಲರಿಗೂ ಸೇರಿ ಈಗ ಪ್ರಶಾಂತ್ ನೀಲ್​ ಸಾಮಾಜಿಕ ಜಾಲತಾಣದ ಮೂಲಕ ಸಲಾರ್ ಟೈಟಲ್​ ಬಗ್ಗೆ ಮೌನ ಮುರಿದಿದ್ದಾರೆ. ಸಿನಿಮಾದ ಶೀರ್ಷಿಕೆಯ ಅರ್ಥ ಏನೆಂದು ಟ್ವೀಟ್​ ಮಾಡಿದ್ದಾರೆ. 

ಪ್ರಶಾಂತ್​ ನೀಲ್​ ನಿರ್ದೇಶನದ ಸಲಾರ್ ಚಿತ್ರದಲ್ಲಿ ಪ್ರಭಾಸ್​

ಪ್ರಶಾಂತ್​ ನೀಲ್​ ನಿರ್ದೇಶನದ ಸಲಾರ್ ಚಿತ್ರದಲ್ಲಿ ಪ್ರಭಾಸ್​

  • Share this:
ಕಳೆದ ಕೆಲವು ದಿನಗಳಿಂದ ಎಲ್ಲಿ ನೋಡಿದರೂ ಕೇವಲ ಸಲಾರ್​ ಸಿನಿಮಾದ್ದೇ ವಿಷಯ. ಕೆಜಿಎಫ್​ ಸಿನಿಮಾವನ್ನು ನಿರ್ಮಿಸುತ್ತಿರುವ ಹೊಂಬಾಳೆ ಫಿಲಂಸ್​  ಈ ಸಲಾರ್ ಚಿತ್ರಕ್ಕೂ ಹಣ ಹೂಡಿದೆ. ಈ ಸಿನಿಮಾವನ್ನು ಕೆಜಿಡಫ್  ಖ್ಯಾತಿಯ ಪ್ರಶಾಂತ್​ ನೀಲ್​ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಇಂಡಿಯನ್​ ಸಿನಿಮಾ ಎಂದು ಹೇಳಲಾಗುತ್ತಿರುವ ಸಲಾರ್​ ಚಿತ್ರಕ್ಕೆ ಕನ್ನಡ ನಟರನ್ನು ಆಯ್ಕೆ ಮಾಡಿಕೊಳ್ಳಲಿಲ್ಲ ಎಂದು ಕೆಲ ಕನ್ನಡಿಗರು ಗರಂ ಆಗಿದ್ದಾರೆ. ಇದರಿಂದಾಗಿಯೇ ಈ ಸಲಾರ್ ಸಿನಿಮಾಗೆ ಯಾರೇ ಪ್ರಚಾರ ಕೊಡಲು ಅಥವಾ ಶುಭ ಕೋರಲು ಮುಂದಾದರೆ ಸಾಕು, ಅವರನ್ನೆಲ್ಲ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಕನ್ನಡ ನೆಲದಲ್ಲಿ ಸಿಗದ ಹೀರೋ ಅಂತ ಪಕ್ಕದ ರಾಜ್ಯದವರಿಗೆ ಮಣೆ ಹಾಕಿದ್ದಾರೆ ಎಂದು ಹೊಂಬಾಳೆ ಫಿಲಂಸ್​ ಹಾಗೂ ಪ್ರಶಾಂತ್ ನೀಲ್ ಅವರ ಮೇಲೆ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನು ಕನ್ನಡ ಸಿನಿಮಾಗೆ ಅರೆಬಿಕ್​ ಹೆಸರು ಬೇಕಾ ರಂದು ಪ್ರಶಾಂತ್ ಸಂಬರಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಸಿದ್ದರು.

ಇನ್ನು ಸಾಕಷ್ಟು ಮಂದಿಗೆ ಸಲಾರ್ ಎಂದರೆ ಏನರ್ಥ ಎಂದು ತಿಳಿದಿರಲಿಲ್ಲ. ಈ ಸಿನಿಮಾದ ಟೈಟಲ್​ ಅರ್ಥ ಹುಡುಕಾಡುತ್ತಿದ್ದರು. ಎಲ್ಲರಿಗೂ ಸೇರಿ ಈಗ ಪ್ರಶಾಂತ್ ನೀಲ್​ ಸಾಮಾಜಿಕ ಜಾಲತಾಣದ ಮೂಲಕ ಸಲಾರ್ ಟೈಟಲ್​ ಬಗ್ಗೆ ಮೌನ ಮುರಿದಿದ್ದಾರೆ. ಸಿನಿಮಾದ ಶೀರ್ಷಿಕೆಯ ಅರ್ಥ ಏನೆಂದು ಟ್ವೀಟ್​ ಮಾಡಿದ್ದಾರೆ.

Prabhas, Salaar, Homabale Filme, Prashanth Neel, KGF Chapter 2, Hombale Films, Saif Ali Khan, Radha Krishna Kumar, Prashanth Neel, Prashanth Neel Next Movie, Kriti Sanon, Jr NTR, amitabh bachchan, Adipurush, KGF, Hombale films released the pan India movie title poster starrer Prabhas and directed by Prashanth Neel , Prabhas selection for salaar may create a problem for prashant neels kgf chapter 2, Prashanth Neel opens up why he selected Prabhas for Salaar and about the Title here is the details
ಪ್ರಶಾಂತ್​ ನೀಲ್​ ಮಾಡಿರುವ ಟ್ವೀಟ್​


ಸಲಾರ್ ಎಂದರೆ ರಾಜನ ಬಲಗೈ ಬಂಟ ಎಂದೆರ್ಥ. ಅಂದರೆ ಸೇನಾಧಿಪತಿ ಎಂದು ಸಲಾರ್ ಶೀರ್ಷಿಕೆಯ ಬಗ್ಗೆ ನಿರ್ದೇಶಕ ಪ್ರಶಾಂತ್​ ನೀಲ್​ ಟ್ವೀಟ್​ ಮಾಡಿದ್ದಾರೆ. ಜೊತೆಗೆ ಇಂಗ್ಲಿಷ್​ ಪತ್ರಿಕೆಯೊಂದಕ್ಕೆ ಸಂದರ್ಶ ನೀಡಿದ್ದು, ಕನ್ನಡಿಗರನ್ನ ಬಿಟ್ಟು  ಪ್ರಭಾಸ್​ರನ್ನೇ ಈ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿರುವ ವಿಷಯದ ಬಗ್ಗೆ ಏನೂ ಕಮೆಂಟ್​ ಮಾಡುವುದಿಲ್ಲ ಎಂದಿದ್ದಾರೆ ಪ್ರಶಾಂತ್ ನೀಲ್​. ಅಷ್ಟೇ ಅಲ್ಲ, ಸಿನಿಮಾ ರಿಲೀಸ್​ ಆದ ನಂತರ ಇದಕ್ಕೆ ಉತ್ತರಿಸುವುದಾಗಿ ತಿಳಿಸಿದ್ದಾರೆ. ಪ್ರಭಾಸ್​ ಅವರ ಅಮಾಯಕತೆ ತನ್ನನ್ನು ಆಕರ್ಷಿಸಿತು. ಅವರ ಅಮಾಯಕತೆಯನ್ನು ಬೆಳ್ಳಿ ತೆರೆಯ ಮೇಲೆ ತೋರಿಸಲು ತುಂಬಾ ಚೆನ್ನಾಗಿರುತ್ತೆ ಎಂದಿದ್ದಾರೆ ಪ್ರಶಾಂತ್ ನೀಲ್​.


ಇನ್ನು, ಸಲಾರ್ ಸಿನಿಮಾವನ್ನು ಎಷ್ಟು ಭಾಷೆಗಳಲ್ಲಿ ತೆರೆಗೆ ತಲಾಗುವುದು, ನಾಯಕಿ ಯಾರು ಎನ್ನುವ ಕುರಿತು ಇನ್ನೂ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಇನ್ನೂ ಸಹ ಸಾಮಾಜಿಕ ಜಾಲತಾಣದಲ್ಲಿ ಸಲಾರ್​ ಸಿನಿಮಾದ ಸುದ್ದಿಗಳೇ ಹರಿದಾಡುತ್ತಿವೆ.
Published by:Anitha E
First published: