ಪ್ರಪಂಚದ ಯಾವ ಮೂಲೆಯಲ್ಲಿ ನೋಡಿದರೂ ಸದ್ಯ ಕೆಜಿಎಫ್ 2 (KGF 2) ಸದ್ದೇ ಕೇಳಿಬರುತ್ತಿದೆ. ಬಾಕ್ಸ್ ಆಫೀಸ್(Box Office)ನಲ್ಲಿ ರಾಕಿ ಭಾಯ್ ಧೂಳೆಬ್ಬಿಸುತ್ತಿದ್ದಾರೆ. ಯಾರೂ ಊಹಿಸಿರದ ರೀತಿಯಲ್ಲಿ ಕಮಾಲ್ ಮಾಡುತ್ತಿದೆ. ಬಾಕ್ಸಾ ಆಫೀಸ್(Box Office) ಲೂಟಿ ಮಾಡಿಬಿಟ್ಟಿದ್ದಾರೆ ರಾಕಿಂಗ್ ಸ್ಟಾರ್(Rocking Star). ಏಪ್ರಿಲ್ 14ರಂದು ಬಹುನಿರೀಕ್ಷಿತ ಚಲನಚಿತ್ರ ‘ಕೆಜಿಎಫ್ ಚಾಪಕ್ಟರ್ 2’(KGF Chapter 2) ಅದ್ಧೂರಿಯಾಗಿ ಬಿಡುಗಡೆಯಾಗಿದೆ. ‘ಕೆಜಿಎಫ್ 2’ ಬಹುಭಾಷೆಯಲ್ಲಿ ತೆರೆಗೆ ಬಂದಿದೆ. ಕನ್ನಡ(Kannada), ಹಿಂದಿ(Hindi), ತೆಲುಗು(Telugu), ತಮಿಳು(Tamil) ಮತ್ತು ಮಲಯಾಳಂ(Malayalam)ನಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಸದ್ಯ ಬಾಕ್ಸಾಫೀಸ್ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಾ ಇದೆ ರಾಕಿಂಗ್ ಸ್ಟಾರ್ ಯಶ್(Rocking Star Yash) ಸಿನಿಮಾ. ಇದು ಕನ್ನಡಿಗರ ಹೆಮ್ಮೆ. ಈ ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್ ಯಾವ ಮಟ್ಟಕ್ಕೆ ಹೆಸರು ಮಾಡುತ್ತಿದ್ದೆ ಅಂದರೆ ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಈಗ ಅವರ ಮುಂದಿನ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದೆ.
ಮತ್ತೆ ಒಂದಾಗ್ತಿದ್ದಾರೆ ಉಗ್ರಂ ಜೋಡಿ!
'ಕೆಜಿಎಫ್ 2' ಬಳಿಕ ನಿರ್ದೇಶ ಪ್ರಶಾಂತ್ ನೀಲ್ ಕನ್ನಡದ ಯಾವ ಚಿತ್ರ ಮಾಡುತ್ತಾರೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.ಅಷ್ಟೇ ಅಲ್ಲ ಪ್ರಶಾಂತ್ ನಿರ್ದೇಶನ ಮಾಡಲಿರುವ ಮುಂದಿನ ನಟ ಯಾರು ಎನ್ನುವ ಬಗ್ಗೆಯೂ ಸಾಕಷ್ಟು ಕುತೂಹಲ ಮೂಡಿದೆ. ಈ ಬಗ್ಗೆ ಸ್ಯಾಂಡಲ್ವುಡ್ನಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಹೌದು, ಶ್ರೀ ಮುರುಳಿ ಜೊತೆ ಉಗ್ರಂ ಸಿನಿಮಾ ಮಾಡಿದ್ದ ಪ್ರಶಾಂತ್, ಈಗ ಮತ್ತೆ ಶ್ರೀ ಮುರುಳಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಪ್ರಶಾಂತ್ ನೀಲ್ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್!
ಭಾರತೀಯ ಚಿತ್ರರಂಗದಲ್ಲಿ ಪ್ರಶಾಂತ್ ನೀಲ್ ಹೆಚ್ಚು ಬೇಡಿಕೆಯ ನಿರ್ದೇಶಕ ಕೂಡ ಆಗಿ ಬಿಟ್ಟಿದ್ದಾರೆ. ಸದ್ಯಕ್ಕೆ ಪ್ರಶಾಂತ್ ನೀಲ್ ಪ್ರಬಾಸ್ ಜೊತೆಗೆ ಸಲಾರ್ ಸಿನಿಮಾ ಮಾಡುತ್ತಿದ್ದಾರೆ.. ಆದರೆ ಕನ್ನಡದಲ್ಲಿ ಯಾವ ನಟನಿಗೆ ನಿರ್ದೇಶನ ಮಾಡಲಿದ್ದಾರೆ ಎಂಬ ಕುತೂಹಲ ಮೂಡಿತ್ತು. ಆದ್ರೀಗ ನಟ ಶ್ರೀ ಮುರಳಿ ಎಂದು ಹೇಳಲಾಗುತ್ತಿದೆ. ಪ್ರಶಾಂತ್ ನೀಲ್ ತಮ್ಮ ಮುಂದಿನ ಸಿನಿಮಾದಲ್ಲಿ ಯಶ್ ಮತ್ತು ಶ್ರೀ ಮುರಳಿಯನ್ನು ಜೊತೆಗೂಡಿಸಿ ಸಿನಿಮಾ ಮಾಡುತ್ತಾರೆ ಎನ್ನಲಾಗುತ್ತಿದೆ. ಹೀಗೆ ಅಂದುಕೊಂಡರೆ ಆದರೆ, ಮತ್ತೊಂದು ಇತಿಹಾಸ ಸೃಷ್ಟಿಯಾಗಲಿದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: KGF 2 ನಲ್ಲಿ ಪ್ರಭಾಸ್ ಸಿನಿಮಾ ಹಿಂಟ್ ಗಮನಿಸಿದ್ರಾ? ಸಲಾರ್ ಕತೆಗೂ ಕೆಜಿಎಫ್ ಮೂಲ!
ಜೂ.ಎನ್ಟಿಆರ್ಗೆ ಆ್ಯಕ್ಷನ್ ಕಟ್ ಹೇಳ್ತಾರಾ ನೀಲ್?
ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ತೇಜ ಜೊತೆಗೂ ಪ್ರಶಾಂತ್ ನೀಲ್ ಸಿನಿಮಾ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಜೂ.ಎನ್ಟಿಆರ್ ಚಿತ್ರದ ಬಗ್ಗೆ ಸುದ್ದಿ ಹೊರ ಬಂದಿದೆ. 'ಸಲಾರ್' ಸರಣಿ ನಂತರ ಜೂ.ಎನ್ಟಿಅರ್ ಚಿತ್ರವನ್ನು ಪ್ರಶಾಂತ್ ನೀಲ್ ಕೈಗೆತ್ತಿಕೊಳ್ಳಲಿದ್ದಾರೆ. ಬಳಿಕ ನಟ ರಾಮ್ ಚರಣ್ ತೇಜ್ ಚಿತ್ರವನ್ನು ಶುರುಮಾಡಲಿದ್ದಾರೆ. ಆದರೆ, ಸಲಾರ್ ಸಿನಿಮಾ ಬಳಿಕ ಶ್ರೀ ಮುರುಳಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಬಳಿಕ ಕೆಜಿಎಫ್ ಪಾರ್ಟ್ 3 ಮಾಡಲಿದ್ದಾರಂತೆ.
ಇದನ್ನೂ ಓದಿ: ಬಾಲಿವುಡ್ನ 'ಆ' ಲೆಜೆಂಡ್ ಜಾಗಕ್ಕೆ ಯಶ್ ಬಂದ್ರಂತೆ! ರಾಕಿ ಭಾಯ್ ಬಗ್ಗೆ ಕೊಂಡಾಡಿದ ನಟಿ ಕಂಗನಾ
ಕೆಜಿಎಫ್ 2 ಸಿನಿಮಾ ನೋಡಿದ ಆರ್ಸಿಬಿ!
ಕೆಲವು ದಿನಗಳ ಹಿಂದಷ್ಟೇ 'KGF 2' ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹಾಗೂ RCB ಟೀಮ್ವ ಒಟ್ಟಿಗೆ ಸೇರಿತ್ತು. ಈ ಎರಡೂ ಸಂಸ್ಥೆಗಳೂ ಒಟ್ಟಿಗೆ ಸೇರಿ ಹಲವು ಕ್ಷೇತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಲಿದೆ ಎಂದು ಹೇಳಿತ್ತು. ಅದರ ಮೊದಲ ಭಾಗವಾಗಿ 'ಕೆಜಿಎಫ್ 2' ಸಿನಿಮಾವನ್ನು ಆರ್ಸಿಬಿ ಆಟಗಾರರು ಸಿನಿಮಾ ನೋಡಿದ್ದಾರೆ. ಭಾನುವಾರ (ಏಪ್ರಿಲ್ 17) 'ಕೆಜಿಎಫ್ 2' ಸಿನಿಮಾವನ್ನು ವೀಕ್ಷಣೆ ಮಾಡಿದ್ದಾರೆ. ಬಿಡುವಿನ ವೇಳೆಯಲ್ಲಿ ಆರ್ಸಿಬಿ ಆಟಗಾರರು ಸಿನಿಮಾ ನೋಡಿದ್ದಾರೆ. ಸಿನಿಮಾ ನೋಡಿದ ಬೆಂಗಳೂರು ಬಾಯ್ಸ್ ಸಖತ್ ಥ್ರಿಲ್ ಆಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ